spot_img
Thursday, April 2, 2026
spot_img

ಸಿ.ಎ ಫೌಂಡೇಶನ್ ಫಲಿತಾಂಶದಲ್ಲೂ ಮುಂಚೂಣಿ ಸಾಧಿಸಿದ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು

ಕಾರ್ಕಳ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಫಲಿತಾಂಶವು 06 ಜುಲೈ 2025 ರಂದು ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಪೂರ್ಣ ಭಟ್ ಕೆ.ಎಲ್, ಸೃಜನ್ ಎಸ್. ಭಟ್, ಅಫ್ಸರ್ ಫಾಹಿಮ್, ಬಸವ ಪ್ರಸಾದ್ ಕಾಜಿ, ಪ್ರಭವ್ ಗೋಪಾಲ್ ಶೆಟ್ಟಿ, ಸೌರವ್ ರವಿ ಶೇಟ್, ಆರ್ಯ ಬಿ.ವಿ, ಹೆಗ್ಡೆ ಪ್ರತ್ವಿಕ್, ಶ್ರದ್ಧಾ ಪ್ರಕಾಶ್ ಅಂಗಡಿ, ರೇಷ್ಮ ಜಿ.ಕೆ, ಶ್ರೀಕಾರ್ ದುಬೀರ ರವರು ಕ್ರಮವಾಗಿ 264, 249, 238, 238, 233, 225, 212, 212, 210, 204, 202, ಅಂಕಗಳನ್ನು ಗಳಿಸುವುದರ ಮೂಲಕ ಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ.

ಪರೀಕ್ಷೆ ಬರೆದಿರುವ 20 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅರ್ಹತೆಯನ್ನು ಗಳಿಸಿರುತ್ತಾರೆ. ರಾಷ್ಟ್ರೀಯ ಮಟ್ಟದ ಒಟ್ಟು ಫಲಿತಾಂಶದಲ್ಲಿ 15% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾರ್ಥಿಗಳಲ್ಲಿ 55% ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಗಮನಾರ್ಹವಾಗಿದೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಪರೀಕ್ಷಾ ಸಂಯೋಜಕರಾದ ರಾಘವೇಂದ್ರ ಬಿ ರಾವ್ (ಅನು ಬೆಳ್ಳೆ) ರವರು ಶ್ಲಾಘಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!