spot_img
Thursday, April 2, 2026
spot_img

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜುಲೈ 6 ರಂದು ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಜರುಗಿತು. ಹಿರಿಯ ಯಕ್ಷಕವಿ ಕೀರ್ತಿ ಶೇಷ ಶಿರೂರು ಪಣಿಯಪ್ಪಯ್ಯ ರವರ 108 ನೇ ಜನ್ಮದಿನದ ಪ್ರಯುಕ್ತ ಇಡೀ ಕಾರ್ಯ ಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು. ಈ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವದಿಸಿ, ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜೊತೆ ಪ್ರಸಂಗ ರಚನೆ ಕಮ್ಮಟವು ಅಪೂರ್ವವೆನಿಸಿದೆ. ಯಶಸ್ವಿಯಾಗಲಿ ಎಂದರು.

ಗಡಿನಾಡು ಕಾಸರಗೋಡಿನ ಹಿರಿಯ ಯಕ್ಷಗಾನ ಕವಿ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ಇವರು ಫಣಿಗಿರಿ ಪ್ರಶಸ್ತಿ-೨೦೨೫ ನೀಡಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾದ ಉಮೇಶ ಶಿರೂರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಳೆಯ ಯಕ್ಷಗಾನ ಧ್ವನಿಸುರುಳಿಗಳ ಸಂರಕ್ಷಕರಾದ ಎಂ.ಎಲ್.ಭಟ್ ಮರವಂತೆ ಇವರನ್ನು ಸಿರಿಬಾಗಿಲು ಪ್ರತಿಷ್ಠಾನ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. ಕಾಸರಗೋಡಿನ ಸಂಶೋಧಕರಾದಂತಹ ಡಾ| ಶಂಕರನಾರಾಯಣ ಭಟ್ ಉಪ್ಪಂಗಳ ಇವರು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಪ್ರಥಮವಾಗಿ ಒಂದು ಲಕ್ಷ ರೂಪಾಯಿಯನ್ನು ದತ್ತಿನಿಧಿಗಾಗಿ ಪೂಜ್ಯ ಎರಡನೀರು ಮಠಾಧೀಶರ ಆಶೀರ್ವಾದ ಮೂಲಕ ನೀಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಸತೀಶ ಅಡಪ್ಪ ಸಂಕಬೈಲು, ಕಮ್ಮಟದ ಮಾರ್ಗದರ್ಶಿಕರಾದ ಶ್ರೀಧರ ಡಿ.ಎಸ್.ಕಿನ್ನಿಗೋಳಿ, ಡಾ. ವಸಂತ ಭಾರದ್ವಾಜ್ ಕಬ್ಬಿನಾಲೆ, ರಾಜಗೋಪಾಲ್ ಕನ್ಯಾನ ಉಪಸ್ಥಿತರಿದ್ದರು.
ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣಯ್ಯ ಸಿರಿಬಾಗಿಲು ಸ್ವಾಗತಿಸಿದರು. ಜಗದೀಶ್ ಕೂಡ್ಲು ನಿರೂಪಿಸಿ, ಶ್ರೀರಾಜ ಮಯ್ಯ ಸನ್ಮಾನ ಪತ್ರ ವಾಚಿಸಿದರು. ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ವಂದಿಸಿದರು.

ಆ ಬಳಿಕ ಪ್ರಸಂಗಕರ್ತರಿಗೆ ಛಂದಸ್ಸಿನ ಮೂಲ ತತ್ವಗಳು, ಪಾರಿಭಾಷಿಕ ಪದಗಳು, ಅಕ್ಷರ ವೃತ್ತ, ಅಂಶ ಬಂಧಗಳು ಈ ಕುರಿತಾದ ಮಾರ್ಗದರ್ಶನವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ನಡೆಸಿಕೊಟ್ಟರು. ಮಾತ್ರ ಬಂಧಗಳು, ಷಟ್ಪದಿಗಳು ,ಕಂದ ಪದ್ಯ ,ಛಂದೋ ಮಿಶ್ರಣ, ವಿಶಿಷ್ಟ ಪದ್ಯ ಬಂದಗಳ ಕುರಿತಾಗಿ ಹಿರಿಯರಾದ ಶ್ರೀಧರ ಡಿ.ಎಸ್ ಮಾರ್ಗದರ್ಶನವಿತ್ತರು. ಕೊನೆಗೆ ಸೇರಿದ್ದ ೨೫ಕ್ಕೂ ಹೆಚ್ಚು ಪ್ರಸಂಗ ಕರ್ತರಿಂದ ಮುಕ್ತ ಸಂವಾದ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!