spot_img
Thursday, April 2, 2026
spot_img

ಕೋಟೇಶ್ವರ ಕೆಪಿ‌ಎಸ್ ಪ್ರಾಥಮಿಕ ವಿಭಾಗದಲ್ಲಿ ಶಾಲಾ ಸಹಪಠ್ಯ ತರಗತಿಗಳ ಉದ್ಘಾಟನೆ

ಕುಂದಾಪುರ: ಕೋಟೇಶ್ವರದ ಕೆಪಿ‌ಎಸ್ ಪ್ರಾಥಮಿಕ ವಿಭಾಗದಲ್ಲಿ ಜು.3 ಪ್ರತೀ ವರ್ಷದಂತೆ ಈ ವರ್ಷವೂ ಮನೋಹರ ಪೈ ಅಂಕದಕಟ್ಟೆ ಇವರ ಸಹಭಾಗಿತ್ವದಲ್ಲಿ ಸಹಪಠ್ಯ ಚಟುವಟಿಕೆಗಳ ತರಗತಿಯ ಉದ್ಘಾಟನೆ ನಡೆಯಿತು.

ಕೆಪಿ‌ಎಸ್ ಪ್ರಾಥಮಿಕ ವಿಭಾಗದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಕೋಟೇಶ್ವರ ಶ್ರೀಧರ ಕಾಮತ್ ಸಹಪಠ್ಯ ಚಟುವಟಿಕೆಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಉಡುಪಿ ಜಿಲ್ಲೆಯಲ್ಲಿ ಎಲ್ಲಿಯೂ ಪ್ರಾಥಮಿಕ ಶಾಲೆಯಲ್ಲಿ ನೆಡೆಸದೆ ಇರುವ ಆರು ಸಹಪಠ್ಯ ಚಟುವಟಿಕೆಗಳ ತರಬೇತಿ ತರಗತಿಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿ ಇದರ ನೇತಾರರಾಗಿರುವ ಮನೋಹರ ಪೈ ಮತ್ತು ಅವರ ತಂಡಕ್ಕೆ ಹಾಗೂ ಶಾಲೆಯ ಮುಖ್ಯಶಿಕ್ಷಕರು ಅಧ್ಯಾಪಕರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮನೋಹರ ಪೈ ಅಂಕದಕಟ್ಟೆ, ಈ ತರಗತಿಗಳನ್ನು ನೆಡೆಸಬೇಕು ಎನ್ನುವುದು ನನ್ನ ಕನಸು ಆಗಿತ್ತು. ಇದಕ್ಕೆ ಮುಖ್ಯ ಶಿಕ್ಷಕರು ಮತ್ತು ಶಾಲಾ ಸಮಿತಿಯವರು ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆಗಳು. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಸಹಪಠ್ಯ ಒಟ್ಟೊಟ್ಟಿಗೆ ಸಿಕ್ಕಿದಾಗ ಖುಷಿಯಿಂದ ಮಕ್ಕಳು ಅಭ್ಯಾಸವನ್ನು ಮುಂದುವರಿಸಲು ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿಯ ಅನುರಾಧ ಹೊಳ್ಳರವರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ತೀರ ಅಗತ್ಯವಿದೆ ಎಂದರು.

ಎಸ್.ಡಿ.ಎಂ.ಸಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕರು, ಸಹಪಠ್ಯ ತರಗತಿಗಳ ಗುರುಗಳಾಗಿರುವ ಹಾಲಾಡಿ ಕೃಷ್ಣ ಕಾಮತ್. ಅನುರಾಧ ಹೊಳ್ಳ, ಕಡ್ಲೆ ಗಣಪತಿ ಭಟ್, ರೂಪೇಶ್ ವಡೇರಹೋಬಳಿ, ಸುಮನಾ ಪಿ ಪೈ, ರೇವತಿ ಕೋಡಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರಾದ ಚಂದ್ರ ನಾಯ್ಕ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಶಿಕ್ಷಕವೃಂದದವರು ಸಹಕರಿಸಿದರು. ಸಹ ಶಿಕ್ಷಕರಾದ ರವೀಂದ್ರ ಕೋಡಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!