spot_img
Friday, January 30, 2026
spot_img

ದೇಶದ ಸಂವಿಧಾನವೇ ಸರ್ವೋಚ್ಚ | ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವ ಅಧಿಕಾರವಿಲ್ಲ : ಸಿಜೆಐ ಬಿ.ಆರ್. ಗವಾಯಿ

ಜನಪ್ರತಿನಿಧಿ (ಮಹಾರಾಷ್ಟ್ರ): ಭಾರತದ ಸಂವಿಧಾನ ಅತ್ಯುತ್ತಮವಾಗಿದೆ, ಪ್ರಜಾಪ್ರಭುತ್ವದ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ.

‘ಮೂಲ ರಚನೆ’ ಸಿದ್ಧಾಂತದ ಅಡಿಪಾಯದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ, ಸಂಸತ್ತಿಗೆ ತಿದ್ದುಪಡಿ ಮಾಡುವ ಅಧಿಕಾರವಿದೆ, ಆದರೆ ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಳೆದ ತಿಂಗಳು ೫೨ ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಗವಾಯಿ ಅವರು ತಮ್ಮ ತವರು ಮಹಾರಾಷ್ಟ್ರದ ಪೂರ್ವದ ಅಮರಾವತಿ ನಗರದಲ್ಲಿ ನಡೆದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೆಲವರು ಸಂಸತ್ತು ಸರ್ವೋಚ್ಚ ಎಂದು ಹೇಳಿದರೆ, ನನ್ನ ಅಭಿಪ್ರಾಯದಲ್ಲಿ ಸಂವಿಧಾನವು ಸರ್ವೋಚ್ಚವಾಗಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ಯಾವ ಅಂಗ (ಕಾರ್ಯಾಂಗ, ಶಾಸಕಾಂಗ ಅಥವಾ ನ್ಯಾಯಾಂಗ) ಸರ್ವೋಚ್ಚ ಎಂಬ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತದೆ. “ಸಂಸತ್ತು ಸರ್ವೋಚ್ಚ ಎಂದು ಹಲವರು ಹೇಳುತ್ತಾರೆ ಮತ್ತು ನಂಬುತ್ತಾರೆ, ಆದರೆ ನನ್ನ ಪ್ರಕಾರ, ಭಾರತದ ಸಂವಿಧಾನವೇ ಸರ್ವೋಚ್ಚ ಪ್ರಜಾಪ್ರಭುತ್ವದ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ” ಎಂದು ಅವರು ಹೇಳಿದರು.

ಸರ್ಕಾರದ ವಿರುದ್ಧ ಆದೇಶಗಳನ್ನು ಹೊರಡಿಸುವುದರಿಂದ ನ್ಯಾಯಾಧೀಶರು ಸ್ವತಂತ್ರರಾಗುವುದಿಲ್ಲ ಎಂದು ಅವರು ಹೇಳಿದರು.
ನಮಗೆ ಒಂದು ಕರ್ತವ್ಯವಿದೆ ಮತ್ತು ನಾವು ನಾಗರಿಕರ ಹಕ್ಕುಗಳು ಮತ್ತು ಸಾಂವಿಧಾನಿಕ ಮೌಲ್ಯಗಳು ಮತ್ತು ತತ್ವಗಳ ಪಾಲಕರು ಎಂಬುದನ್ನು ನ್ಯಾಯಾಧೀಶರು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಅವರು ಹೇಳಿದರು.

ಜನರು ತಮ್ಮ ತೀರ್ಪಿನ ಬಗ್ಗೆ ಏನು ಹೇಳುತ್ತಾರೆ ಅಥವಾ ಭಾವಿಸುತ್ತಾರೆ ಎಂಬುದರ ಆಧಾರದ ಮೇಲೆ ನ್ಯಾಯಾಧೀಶರು ಅವಲಂಬಿಸಿರಬಾರದು ಎಂದು ಸಿಜೆಐ ಹೇಳಿದರು.

“ನಾವು ಸ್ವತಂತ್ರವಾಗಿ ಯೋಚಿಸಬೇಕು. ಜನರು ಮಾತುಗಳು ನಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

“ಬುಲ್ಲೋಜರ್ ನ್ಯಾಯ”ದ ವಿರುದ್ಧದ ಅವರ ತೀರ್ಪನ್ನು ಉಲ್ಲೇಖಿಸಿ, ಆಶ್ರಯದ ಹಕ್ಕು ಸರ್ವೋಚ್ಚ ಎಂದು ಹೇಳಿದರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸಿಜೆಐ ಗವಾಯಿ ಅವರು, “ನಾನು ವಾಸ್ತುಶಿಲ್ಪಿಯಾಗಲು ಬಯಸಿದ್ದರೂ, ನನ್ನ ತಂದೆ ನಾನು ವಕೀಲನಾಗಬೇಕೆಂದು ಬಯಸಿದ್ದರು” ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!