spot_img
Thursday, January 29, 2026
spot_img

Work with UIDAI : ಸುವರ್ಣ ಅವಕಾಶವೊಂದು ನಿಮಗಾಗಿ ಕಾಯುತ್ತಿದೆ. ಈಗಲೇ ನೋಡಿ !

ಜನಪ್ರತಿನಿಧಿ (ಮಾಹಿತಿ) : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(Unique Identification Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಕೆಲಸವನ್ನು ನೀವು ಅರಸುತ್ತಿದ್ದರೇ ನಿಮಗೆ ಒಂದು ಸುವರ್ಣಾವಕಾಶ ಈಗ ತೆರೆದುಕೊಂಡಿದೆ.

UIDAI ಅಲ್ಲಿ ಸಹಾಯಕ ವಿಭಾಗ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು UIDAI ನ ಅಧಿಕೃತ ವೆಬ್‌ಸೈಟ್ uidai.gov.in ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಕೇವಲ ಕೇವಲ 5 ದಿನಗಳು ಮಾತ್ರವೇ ಬಾಕಿ ಉಳಿದಿವೆ.

ಜೂನ್ 30, 2025 ರಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. ಅಲ್ಲದೆ, ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಕೆಳಗೆ ನೀಡಲಾದ ಸೂಚನೆಗಳನ್ನು ಗಮನಿಸಬೇಕಾಗಿರುವುದು ಬಹಳ ಮುಖ್ಯ.

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ:
ಅಭ್ಯರ್ಥಿಗಳ ಗರಿಷ್ಠ ವಯಸ್ಸಿನ ಮಿತಿ 56 ವರ್ಷಗಳಿಗಿಂತ ಕಡಿಮೆಯಿರಬೇಕು. ಅಲ್ಲದೆ, ಮೀಸಲು ವರ್ಗದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಯಿದೆ.

ಫಾರ್ಮ್ ಭರ್ತಿ ಮಾಡಲು ಅರ್ಹತೆ:
ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಸಂಬAಧಿತ ಅರ್ಹತೆಯನ್ನು ಹೊಂದಿರಬೇಕು. ಆಗ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರೆಂದು ಪರಿಗಣಿಸಲಾಗುತ್ತದೆ.

ಆಯ್ಕೆಯ ಸಂದರ್ಭದಲ್ಲಿ ವೇತನ ನಿಗದಿ :
ಈ ಹುದ್ದೆಗಳಿಗೆ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ 7 ನೇ ಕೇಂದ್ರ ವೇತನ ಆಯೋಗದ ಪ್ರಕಾರ ಲೆವೆಲ್ -6 ಅಡಿಯಲ್ಲಿ ತಿಂಗಳಿಗೆ ರೂ 35,400 ರಿಂದ ರೂ 1,12,400 ರವರೆಗೆ ಸಂಬಳವಿದೆ.

ವಿದ್ಯಾರ್ಹತೆ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿ0ದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ
* UIDAI uidai.gov.in  ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* “ನೇಮಕಾತಿ” ವಿಭಾಗಕ್ಕೆ ಹೋಗುವ ಮೂಲಕ ಸಂಬAಧಿತ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
* ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿದ ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
* ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ನಿಗದಿತ ವಿಳಾಸಕ್ಕೆ ಕಳುಹಿಸಿ.
* ಅರ್ಜಿ ನಮೂನೆಯು ಜೂನ್ 30, 2025 ರೊಳಗೆ UIDAI ಕಚೇರಿಯನ್ನು ತಲುಪಬೇಕು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!