Sunday, September 8, 2024

ವಿಶ್ವ ವ್ಯೋಮ ಸಪ್ತಾಹ ಚಿತ್ರಕಲಾ ಸ್ಪರ್ಧೆ: ಸಿದ್ಧಾಪುರ ಪ್ರೌಢಶಾಲೆ ವಿದ್ಯಾರ್ಥಿನಿ ಚಿತ್ರ ಆಯ್ಕೆ 

 

ವೈಷ್ಣವಿ ರಚಿಸಿದ ಪೇಂಟಿಂಗ್
ವೈಷ್ಣವಿ ರಚಿಸಿದ ಚಿತ್ರ

ಕುಂದಾಪುರ: ವಿಶ್ವ ವ್ಯೋಮ ಸಪ್ತಾಹದ ಅಂಗವಾಗಿ ಭಾರತ ಸರ್ಕಾರದ ವ್ಯೋಮ ವಿಜ್ಞಾನ ಇಲಾಖೆಯು ಇಸ್ರೋ ಮತ್ತು ಯು.ಆರ್ ರಾವ್ ವ್ಯೋಮಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ My Innovative satalite to improve life ಎಂಬ ಶೀರ್ಷಿಕೆಯ ಪೇಂಟಿಂಗ್ ಸ್ಪರ್ಧೆಯಲ್ಲಿ ಆಯ್ಕೆಯಾದ ಐದು ಅತ್ಯುತ್ತಮ ಪೇಂಟಿಂಗ್‍ಗಳಲ್ಲಿ ಸರಕಾರಿ ಪ್ರೌಢಶಾಲೆ ಸಿದ್ಧಾಪುರ ಇಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವೈಷ್ಣವಿ ರಚಿಸಿದ ಪೇಂಟಿಂಗ್ ಸ್ಥಾನ ಗಳಿಸಿದೆ.

ಜನಜೀವನದ ಪ್ರಗತಿಯಲ್ಲಿ ವ್ಯೋಮ  ಯುಗದ ಪಾತ್ರದ ಕುರಿತು ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ. ಪ್ರಶಸ್ತಿಗೆ ಆಯ್ಕೆ ಮಾಡಿದ ಐದು ಅತ್ಯುತ್ತಮ ಚಿತ್ರಗಳಲ್ಲಿ ವೈಷ್ಣವಿ ಅವರದೂ ಒಂದು ಎನ್ನುವುದು ವಿಶೇಷ. ವಿದ್ಯಾರ್ಥಿನಿ ವೈಷ್ಣವಿ ಅಲ್ಬಾಡಿ ಗುತ್ತಿಗೆದಾರ ವಸಂತಕುಮಾರ್ ಶೆಟ್ಟಿ, ಸಿದ್ದಾಪುರ ಗೆದ್ದೋಡು ಸುಶ್ಮಾ ವಿ. ಶೆಟ್ಟಿ ದಂಪತಿ ಪುತ್ರಿ.

ವಿಶ್ವಸಂಸ್ಥೆಯು ಅಕ್ಟೋಬರ್ ತಿಂಗಳ 4ನೇ ತಾರೀಖಿನಿಂದ 10 ನೇ ತಾರೀಖಿನವರೆಗಿನ ಅವಧಿಯನ್ನು ವಿಶ್ವ ವ್ಯೋಮ ಸಪ್ತಾಹವನ್ನಾಗಿ ಆಚರಿಸುತ್ತದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ವ್ಯೋಮ ಕಾರ್ಯಕ್ರಮಗಳಲ್ಲಿ ತೊಡಗಿರುವ ಮತ್ತು ಆಸಕ್ತವಾಗಿರುವ ಸಂಸ್ಥೆಗಳು ವ್ಯೋಮ ಸಪ್ತಾಹವನ್ನು ಆಚರಿಸುವಲ್ಲಿ ಕೈಜೋಡಿಸುತ್ತಿವೆ. ಜನಜೀವನದ ಪ್ರಗತಿಯಲ್ಲಿ ವ್ಯೋಮಯುಗದ ಪಾತ್ರದ ಕುರಿತು ಅರಿವು ಮೂಡಿಸುವುದು ಈ ಆಚರಣೆಯ ಉದ್ಧೇಶ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!