spot_img
Tuesday, March 24, 2026
spot_img

ಹಾಪ್‌ಕಾಮ್ಸ್ ಅಧ್ಯಕ್ಷರಾಗಿ ಹಾಲಾಡಿ ಸೀತಾರಾಮ ಗಾಣಿಗ| ಉಡುಪಿ ಜಿಲ್ಲೆಗೆ ಪ್ರಥಮವಾಗಿ ದೊರಕಿದ ಅವಕಾಶ

 

ಕುಂದಾಪುರ, ಅ.22:(ಜನಪ್ರತಿನಿಧಿ ವಾರ್ತೆ)

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಂಘ ಮಂಗಳೂರು (ಹಾಪ್‌ಕಾಮ್ಸ್) ಇದರ ಅಧ್ಯಕ್ಷರಾಗಿ ಮುಂದಿನ ಐದು ವರ್ಷದ ಅವಧಿಗೆ ಹಾಲಾಡಿ ಸೀತಾರಾಮ ಗಾಣಿಗ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಗೆ ಈ ಸಹಕಾರಿ ಸಂಘದ ಅಧ್ಯಕ್ಷ ಪದವಿ ಪ್ರಥಮ ಬಾರಿಗೆ ದೊರೆತಿದೆ. ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಾಲಾಡಿ ಸೀತಾರಾಮ ಗಾಣಿಗ ಉಡುಪಿ ಜಿಲ್ಲೆಗೆ ಈ ಅಧ್ಯಕ್ಷ ಪದವಿಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರಾದ ಸೀತರಾಮ ಗಾಣಿಗರು ಈ ಹಿಂದೆ ಹಾಪ್‌ಕಾಮ್ಸನ ನಿರ್ದೇಶಕರಾಗಿ ಕೆಲಸವನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಸಂಸ್ಥೆಯ ಅಭಿವೃದ್ದಿಗಾಗಿ ದುಡಿದಿದ್ದರು. ಇವರ ಪ್ರಯತ್ನದ ಫಲವಾಗಿ ಉಪ್ಪುಂದದಲ್ಲಿ ಹಾಪ್‌ಕಾಮ್ಸನ ಮಳಿಗೆ ಆರಂಭಗೊಡಿತು. ಅಲ್ಲದೆ ಹಾಲಾಡಿಯಲ್ಲು ಕೂಡ ಮಳಿಗೆ ಆರಂಭಿಸಲು ಎಲ್ಲಾ ಸಿದ್ದತೆಗಳು ನೆಡೆದಿದೆ. ಹಾಪ್‌ಕಾಮ್ಸನ ಸದಸ್ಯತ್ವವೂ ಸೇರಿದಂತೆ ಸಂಘದ ಬೆಳವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಭಾರತೀಯ ಕಿಸಾನ್ ಸಂಘದಲ್ಲಿ ಗುರುತಿಸಿಕೊಂಡ ಅವರು ಅದರಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಕುಂದಾಪುರ ತಾಲೂಕಿನ ಅಧ್ಯಕ್ಷರಾಗಿದ್ದಾರೆ. ಸಹಕಾರಿ ಕ್ಷೇತ್ರದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅವರು ಕುಂದಾಪುರ ತಾಲೂಕು ತೆಂಗು ಉತ್ಪಾದಕರ ಒಕ್ಕೂಟದ ಇದರ ಪ್ರದಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಾ ಬಂದಿರುವ ಇವರು ಉಡುಪಿ ಜಿಲ್ಲಾ ಕಲ್ಪರಸ ಕೊಕೊನೆಟ್ ಮತ್ತು ಸ್ಪೈಸಿ ಕಂಪೆನಿ (ಉಕಾಸ) ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ. ಹಾಲಾಡಿ ಕಲ್ಪವೃಕ್ಷ ತೆಂಗು ಉತ್ಪಾದಕರ ಸಹಕಾರಿ ಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ. ಸಹಕಾರಿ ಮತ್ತು ಕೃಷಿಕೇತ್ರದಲ್ಲಿ ತೊಡಗಿಸಿಕೊಂಡ ಇವರು ಇಂದು ಪ್ರತಿಷ್ಟತ ಹಾಪ್‌ಕಾಮ್ಸನ ಅಧ್ಯಕ್ಷರಾಗಿದ್ದಾರೆ. ತೋಟಗಾರಿಕಾ ಇಲಾಖೆಯ ಮುಖ್ಯ ಸಹಭಾಗಿತ್ವವನ್ನು ಹೊಂದಿರುವ ಹಾಪ್‌ಕಾಮ್ಸನಲ್ಲಿ ಒಟ್ಟು 16 ನಿರ್ದೇಶಕ ಸ್ಥಾನವಿದೆ. ಇವರು ಇದರಲ್ಲಿ ಈ ಭಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ 11-5 ಮತಗಳ ಅಂತರದಲ್ಲಿ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಕಿಸಾನ್ ಸಂಘ ಇವರನ್ನು ಸಂಪೂರ್ಣವಾಗಿ ಬೆಂಬಲಿಸಿತು.

ಕುಂದಾಪುರ ತಾಲೂಕಿನ ಹಾಲಾಡಿಯ ಸುಬ್ಬಯ್ಯ ಗಾಣಿಗ ಗಾಣಿಗ ಮತ್ತು ಸುಬ್ಬಯ್ಯ ದಂಪತಿಗಳ ಪುತ್ರರಾಗಿದ್ದರಾದ ಇವರು ಪ್ರಗತಿಪರ ಕೃಷಿಕರಾಗಿದ್ದಾರೆ.

ಹಾಪ್‌ಕಾಮ್ಸ್‌ನ ಉಪಾಧ್ಯಕ್ಷರಾಗಿ ಕಾರ್ಕಳ ತಾಲೂಕಿನ ವಿನಯಾ ರಾನಡೆ ಆಯ್ಕೆಯಾದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!