spot_img
Tuesday, March 17, 2026
spot_img

ಭಾರೀ ಮಳೆ: ನಾಡ, ಪಡುಕೋಣೆ, ನಾವುಂದ, ಬಡಾಕೆರೆ, ಹಳಗೇರಿಯಲ್ಲಿ ನೆರೆ: ಕೃಷಿ ಭೂಮಿ ಸಂಪೂರ್ಣ ಜಲಾವೃತ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಎಡಬಿಡದೆ ಸುರಿಯುತ್ತಿದ್ದು, ಭಾರೀ ಮಳೆಗೆ ಜನಜೀವನ ಅಕ್ಷರಸಃ ತತ್ತರಗೊಂಡಿದೆ. ಬೈಂದೂರು ತಾಲೂಕಿನ ಬಹುತೇಕ ತಗ್ಗುಪ್ರದೇಶಗಳ ಜಲಾವೃತಗೊಂಡಿವೆ. ಹಳಗೇರಿ ಸಮೀಪ ತಗ್ಗು ಪ್ರದೇಶ ಮುಳುಗಡೆಯಾಗಿದ್ದು, ಕೆಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡ, ಹಡವು, ಬಡಾಕೇರೆ ಮೊದಲಾದ ತಗ್ಗು ಪ್ರದೇಶ, ಕೃಷಿಭೂಮಿ ಮುಳುಗಿದೆ. ಮಾರಸ್ವಾಮಿ-ಪಡುಕೋಣೆ ರಸ್ತೆಯ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ರಸ್ತೆಯೂ ಮುಳುಗಿದೆ.

ನಾವುಂದ, ಸಾಲ್ಬುಡ ಭಾಗದಲ್ಲಿ ನೆರೆ ವ್ಯಾಪಕವಾಗಿದೆ. ಈ ಭಾಗ ಸಂಪೂರ್ಣ ಮುಳುಗಿದೆ. ನೆರೆಯಲ್ಲಿ ಸಿಲುಕಿರುವ ಕುಟುಂಬಗಳನ್ನು, ಸಾಕು ಪ್ರಾಣಿಗಳನ್ನು ಸರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ನಾವುಂದ-ಬಡಾಕೆರೆ ಮುಖ್ಯರಸ್ತೆ ನೀರು ತುಂಬಿ ಸಂಚಾರಕ್ಕೆ ತೊಂದರೆಯಾಗಿದೆ. ತ್ರಾಸಿ ಗ್ರಾಮದ ಕೆಲವೆಡೆ ನೆರೆ ಕಾಣಿಸಿಕೊಂಡಿದೆ.

ಕಂಬದಕೋಣೆ ಸಮೀಪದ ಹಳಗೇರಿಯಲ್ಲಿ ಯಡಮಾವಿನ ಹೊಳೆ ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶ ಮುಳುಗಿದೆ. ಇಲ್ಲಿನ ಕೆಲವು ಮನೆಯವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಹಳಗೇರಿಯಲ್ಲಿ ನೆರೆಯಲ್ಲಿ ಸಿಲುಕಿದ ಸ್ಥಳೀಯರನ್ನು ರಕ್ಷಣೆ ಮಾಡಲಾಗಿದೆ.
ಶಾಸಕ ಗುರುರಾಜ ಗಂಟಿಹೊಳೆ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬೈಂದೂರು ತಾಲೂಕಿನ ಎಲ್ಲೆಡೆ ಮಳೆ ಧಾರಾಕಾರವಾಗಿ ಸುರಿದಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ನೆರೆ ಭೀತಿ ಎದುರಾಗಿದೆ. ಚಕ್ರಾ, ಸೌಪರ್ಣಿಕಾ, ಸಮುನಾವತಿ, ಕುಬ್ಜಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಸೋಮವಾರ ಮಧ್ಯಾಹ್ನದ ಬಳಿಕ ಮಳೆ ತುಸು ವಿರಾಮ ನೀಡಿದ್ದು, ನೆರೆ ಇಳಿಯುವ ಸಾಧ್ಯತೆ ಇದೆ. ಆದರೆ ಘಟ್ಟ ಭಾಗದಲ್ಲಿ ಮಳೆ ಜಾಸ್ತಿಯಾದರೆ ನದಿಗಳಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!