spot_img
Friday, January 30, 2026
spot_img

ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವುದಕ್ಕೆ ನೀವು ಭಾಷಾ ತಜ್ಞರೇ ? : ಕಮಲ್‌ ಗೆ ಹೈಕೋರ್ಟ್‌ ತರಾಟೆ

ಜನಪ್ರತಿನಿಧಿ (ಬೆಂಗಳೂರು) : ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವುದಕ್ಕೆ ನೀವು ಭಾಷಾ ತಜ್ಞರೇ ಎಂದು ಹೈಕೋರ್ಟ್‌ ಇಂದು(ಮಂಗಳವಾರ) ನಟ ಕಮಲ ಹಾಸನ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮಾತ್ರವಲ್ಲದೇ ʼಒಂದು ಕ್ಷಮಯಾಚನೆಯಿಂದ ಪರಿಸ್ಥಿತಿ ತಿಳಿಯಾಗುತ್ತಿತ್ತುʼ ಎಂದು ಕಮಲ್‌ ಗೆ ಹೈಕೋರ್ಟ್‌ ಬುದ್ದಿ ಹೇಳಿದೆ.

ಕಮಲ ಹಾಸನ್‌ ಅಭಿನಯದ ʼಥಗ್‌ ಲೈಫ್‌ʼ ಸಿನೆಮಾದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಸಿನೆಮಾದ ಹಂಚಿಕೆ ಹಾಗೂ ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಿನೆಮಾ ನಿರ್ಮಾಣ ಸಂಸ್ಥೆಯಾದ. ʼರಾಜ್‌ ಕಮಲ್‌ ಫಿಲ್ಮ್ ಇಂಟರ್‌ ನ್ಯಾಷನಲ್‌ʼ ಹೈಕೋರ್ಟ್‌ ಮೆಟ್ಟಿಲೇರಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ಯಿ ಎಂ. ನಾಗಪ್ರಸನ್ನ, ಕಮಲ್‌ ಅವರ ಹೇಳಿಕೆ ಕರ್ನಾಟಕದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಕಮಲ್‌ ಹಾಸನ್‌ ಕ್ಷಮೆಯಾಚಿಸಲು ನಿರಾಕರಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಭಾಷೆಯ ಜನರ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಹೆಗ್ಗುರುತು. ಇಡೀ ಭಾಷಾ ಸಮುದಾಯದ ಹೆಮ್ಮೆಯನ್ನು ಕುಗ್ಗಿಸುವ ಹೇಳಿಕೆಗಳನ್ನು ನೀಡುವ ಹಕ್ಕು ಯಾವುದೇ ವ್ಯಕ್ತಿಗೆ ಇಲ್ಲ ಎಂದು ನ್ಯಯಾಲಯವು ಒತ್ತಿ ಹೇಳಿದೆ.

ನೀವು ಅಂತಹ ಹೇಳಿಕೆ ನೀಡಲು ಇತಿಹಾಸಕಾರರೋ ಅಥವಾ ಭಾಷಾಶಾಸ್ತ್ರಜ್ಞರೋ ? ಯಾವುದೇ ಭಾಷೆ ಇನ್ನೊಂದರಿಂದ ಹುಟ್ಟುವುದಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಟೀಕಸಿದರು.

ಯಾರೊಬ್ಬರ ಭಾವನೆಯ ಮೇಲೂ ಸವಾರಿ ಮಾಡಬಾರದು. ಆದೇಶ ಹೊರಡಿಸಲು ನಮಗೆ ಸಮಸ್ಯೆ ಇಲ್ಲ. ಕ್ಷಮೆ ಕೇಳಲಾಗದಿದ್ದರೇ ಬಿಡಿ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಏಕೆ ಬೇಕು ? ನಾನೂ ಥಗ್‌ ಲೈಫ್‌ ಸಿನೆಮಾ ನೋಡಲು ಬಯಸಿದ್ದೆ… ಆದರೇ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!