spot_img
Friday, January 30, 2026
spot_img

ʼತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆʼ : ಆರ್.ಸಿ.ಬಿ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಕೆ

ಜನಪ್ರತಿನಿಧಿ (ಬೆಂಗಳೂರು) : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂದಾಕ್ಷಣ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಮೊದಲಿಗೆ ಮೂಡುವುದು “ಈ ಸಲ ಕಪ್ ನಮ್ದೆ” ಎಂಬ ಘೋಷಣೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಪ್ರತಿ ವರ್ಷ ಈ ಘೋಷಣೆಯೊಂದಿಗೆ ತಮ್ಮ ತಂಡವು ಐಪಿಎಲ್ ಕಪ್ ಗೆಲ್ಲುವ ಕನಸು ಕಾಣುತ್ತಾರೆ. ಆದರೆ, ಕಳೆದ 17 ವರ್ಷಗಳಿಂದ ಈ ಕನಸು ನನಸಾಗಿಲ್ಲ. ಆದಾಗ್ಯೂ, 2025ರ ಐಪಿಎಲ್‌ನಲ್ಲಿ ಆರ್.ಸಿ.ಬಿ. ತಂಡವು ಫೈನಲ್‌ಗೆ ತಲುಪಿದ್ದು, ಈ ಬಾರಿ ಕಪ್ ಗೆಲ್ಲುವ ಎಲ್ಲ ಸಾಧ್ಯತೆಗಳಿವೆ. ಈ ಉತ್ಸಾಹದ ನಡುವೆ, ಅಭಿಮಾನಿಗಳು ತಮ್ಮ ತಂಡದ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಕೂಡ ಆರ್‌.ಸಿಬಿ ಗೆಲುವಿಗಾಗಿ ಶುಭ ಹಾರೈಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಹಾಗೂ ಸ್ವತಃ ಅವರೇ ಹೇಳಿಕೊಂಡಿರುವ ಹಾಗೆ ಕ್ರಿಕೆಟ್‌ ಆಸಕ್ತರೂ ಆಗಿರುವ ಸಿದ್ದರಾಮಯ್ಯ ಅವರು ಆರ್‌.ಸಿ.ಬಿ ಗೆಲುವಿಗಾಗಿ ಶುಭ ಹಾರೈಸಿದ್ದಾರೆ.

ಪಂಜಾಬ್‌ ತಂಡದ ವಿರುದ್ಧ ಇಂದು (ಮಂಗಳವಾರ) ಫೈನಲ್‌ ಪಂದ್ಯವಾಡುತ್ತಿರುವ ನಮ್ಮ ಆರ್‌ ಸಿ ಬಿ  ತಂಡಕ್ಕೆ ಶುಭ ಹಾರೈಕೆಗಳು ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರು, ಆರ್‌ ಸಿ ಬಿ ತಂಡದ ಸೋಲು – ಗೆಲುವು, ಏಳು-ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ-ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಅರ್‌ ಸಿ ಬಿ ಕಪ್‌ ಗೆಲ್ಲಿ ಎನ್ನುವುದು ನನ್ನ ಅಂತರಾಳದ ಬಯಕೆ ಎಂದು ಅವರು ಹೇಳಿದ್ದಾರೆ.

ʼತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆʼ, ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್‌ ಸಿ ಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಅವರು ಶುಭ ಹಾರೈಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!