spot_img
Friday, March 6, 2026
spot_img

ಆಹಾರೋದ್ಯಮದ ದಿಗ್ಗಜ ಜಿ. ಶ್ರೀನಿವಾಸ್ ರಾವ್ ಅವರಿಗೆ ‘ಅತಿಥ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ’ಹೋಟೆಲ್ ಉದ್ಯಮವು ರಾಜ್ಯದ ಧಾರ್ಮಿಕ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಬರುವ ಪ್ರವಾಸಿಗರಿಗೆ ಆತಿಥ್ಯ ನೀಡುವುದರ ಜೊತೆಗೆ ಇಲ್ಲಿನ ಆಹಾರ, ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುತ್ತಿದೆ. ಇದು ರಾಜ್ಯದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ. ನಮ್ಮ ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಗುರುವಾರ ನಡೆದ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ 70ನೇ ವಾರ್ಷಿಕೋತ್ಸವ ಹಾಗೂ ‘ಅತಿಥ್ಯ ರತ್ನ’, ‘ಉದ್ಯಮ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಆದಿ ಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಈಶಾನ್ಯ ಕೇಕ್‌ವಾಲಾ ಹೋಟೆಲ್‌ಗಳು ಮುಖ್ಯಸ್ಥ, ಆಹಾರೋದ್ಯಮದ ದಿಗ್ಗಜ ಜಿ. ಶ್ರೀನಿವಾಸ್ ರಾವ್, ಚಾನ್ಸೆರಿ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಕೆ.ವಿ. ಕುಪ್ಪುರಾಜ್, ಪಾಕಶಾಲಾ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ, ಕನ್ನಿಕಾ ಇಂಟರ್‌ನ್ಯಾಷನಲ್‌ನ ಎಂ.ಡಿ ಬಿ.ಆರ್. ನಾಗೇಂದ್ರ ಪ್ರಸಾದ್, ವಿಷ್ಣು ಭವನ ಎಂ.ಡಿ ಸಿ. ನಾರಾಯಣ ಗೌಡ, ಮಥುರಾ ಹೋಟೆಲ್‌ನ ಎಂ.ಡಿ ಗೋಪಿನಾಥ್, ಹರಿಪ್ರಿಯ ಹೋಟೆಲ್‌ನ ಎಂ.ಡಿ ಸುಧಾಕರ್ ಶೆಟ್ಟಿ, ವಿಶ್ವನಾಥ ಪ್ಯಾಲೆಸ್‌ನ ಎಂ.ಡಿ ರಾಜೇಂದ್ರ ವಿ. ಶೆಟ್ಟಿ, ಸಾಗರ್ ಗ್ರೂಪ್ ಮತ್ತು ಗಾಯತ್ರಿ ವಿಹಾರ್ ಸಮೂಹದ ಅಧ್ಯಕ್ಷ ಪಂಕಜ್ ಕೊಠಾರಿ ಅವರಿಗೆ ಆಥಿತ್ಯ ರತ್ನ’ ಪ್ರಶಸ್ತಿ ನೀಡಲಾಯಿತು.

1522 ಗ್ರೂಪ್‌ನ ಎಂ.ಡಿ ಚೇತನ್ ಹೆಗಡೆ, ಮೇಘನಾ ಫುಡ್‌ನ ಎಂ.ಡಿ ಬಿ. ರಮೇಶ್, ಶುಭಶ್ರೀ ಗ್ರೂಪ್‌ನ ಎಂ.ಡಿ ಶಾಂತೇಶ್ ಕೆ., ಅವರಿಗೆ ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಟೆಂಬರ್‌ಟೇಲ್ ರೆಸಾರ್ಟ್ ಮತ್ತು ಸ್ಪಾ ಅಧ್ಯಕ್ಷ ಜಗನ್ನಾಥ್ ಪೈ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!