spot_img
Thursday, March 5, 2026
spot_img

ಕೋಟೇಶ್ವರ: ಪಿ‌ಎಂ ವಿಶ್ವಕರ್ಮ ಯೋಜನೆಯ ಟೋಲ್ ಕಿಟ್ ವಿತರಣೆ

ಕೋಟೇಶ್ವರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟೇಶ್ವರದ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಆಯೋಜಿಸಲಾದ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಮಹತ್ವಂಕಾಕ್ಷಿ ಯೋಜನೆಯಾದ ಪಿ‌ಎಂ ವಿಶ್ವಕರ್ಮ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ಕಾರ್ಯಕ್ರಮಗಳಿಂದ ಹೊರಗುಳಿದ ಸಮುದಾಯಗಳನ್ನು ಬೆಂಬಲಿಸುವುದು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುವುದು ಈ ವಿಶ್ವಕರ್ಮ ಯೋಜನೆ ಮುಖ್ಯ ಉದ್ದೇಶವಾಗಿದ್ದು ಈ ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ ಯೋಜನೆ ಯಶಸ್ವಿಯಾಗಲಿ ಎಂದು ತರಬೇತಿ ಪಡೆದ ಫಲಾನುಭವಿಗಳಿಗೆ ಟೋಲ್ ಕಿಟ್ ವಿತರಿಸಿ ಶುಭಹಾರೈಸಿದರು.

ಕಾರ್ಯಕ್ರಮವನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಉದ್ಘಾಟಿಸಿ
ಕುಲಕಸುಬುಗಳಿಗೆ ಶಕ್ತಿ ಸಿಗುವ ನಿಟ್ಟಿನಲ್ಲಿ ಐದು ದಿನಗಳ ಕಾಲ ತರಬೇತಿ ನೀಡಿ ಅವರು ಈಗಿರುವ ಕುಲಕಸುಬುಗಳನ್ನು ಸರಿಯಾಗಿ ಮಾಡಬಹುದೆಂದು ಯೋಚಿಸಿ ಈ ನವೀಕೃತ ಉದ್ಯಮ, ಉದ್ಯೋಗವನ್ನು ನವೀಕರಣಗೊಳಿಸಿ ವಿಶ್ವಕರ್ಮ ಯೋಜನೆಯವರು ಒಂದು ಲಕ್ಷ ರೂಪಾಯಿ ಸಾಲ ನೀಡುತ್ತಿದ್ದು ಆನಂತರ ಉದ್ಯೋಗಕ್ಕೆ ಶಕ್ತಿ ಬರಲಿ ಎಂದು ಹದಿನೈದು ಸಾವಿರಗಳ ಮೊತ್ತದ ಟೋಲ್ ಕಿಟ್ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೋಟೇಶ್ವರ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷೆ ಆಶಾ.ವಿ, ಗ್ರಾಮ ಪಂಚಾಯಿತಿ ಪಿಡಿ‌ಓ ದಿನೇಶ್ ನಾಯಕ್, ಕೋಟೇಶ್ವರ ಗ್ರಾಮ ಪಂಚಾಯಿತಿನ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹರೀಶ್ ಶೆಟ್ಟಿ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!