spot_img
Wednesday, April 1, 2026
spot_img

ವಾಡಿಕೆಗಿಂತ ಮೊದಲೇ ಕೇರಳ ಕರಾವಳಿ ಪ್ರವೇಶಿಸಿದ ಮುಂಗಾರು !

ಜನಪ್ರತಿನಿಧಿ (ಬೆಂಗಳೂರು) : ಇಂದು (ಶನಿವಾರ) ನೈರುತ್ಯ ಮಾನ್ಸೂನ್‌ ಮಾರುತಗಳು ಕೇರಳ ಕರಾವಳಿ ಪ್ರವೇಶಿಸಿದ್ದು ರೈತರ ಮುಖದಲ್ಲಿ ನಗು ಬೀರಿದೆ.

ಭಾರತೀಯ ಹವಾಮಾನ ಇಲಾಖೆ ಇದೇ ಮೇ ೨೭ಕ್ಕೆ ಮುಂಗಾರು ಮಾರುತಗಳು ಕೇರಳ ಕರವಾಳಿ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿತ್ತು. ಅದಕ್ಕೂ ಮೂರು ದಿನ ಮೊದಲೆ ಮುಂಗಾರು ಪ್ರವೇಶವಾಗಿದೆ ಎಂದು ಇಲಾಖೆ ಇಂದು ಹೇಳಿದೆ.

೨೦೦೯ರಲ್ಲಿ ಮೇ ೨೩ಕ್ಕೆ ಮುಂಗಾರು ಭಾರತದ ಕರಾವಳಿ ಪ್ರವೇಶಿಸಿದ್ದನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ವಾಡಿಕೆಗಿಂತಲೂ ಮುಂಚಿತವಾಗಿ ಮುಂಗಾರು ಪ್ರವೇಶವಾಗಿದೆ.

ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಮುಂಗಾರು ಕೇರಳ ಕರಾವಳಿ ಪ್ರವೇಶಿಸುತ್ತಿತ್ತು.

೨೦೦೯ರಲ್ಲಿ ಅವಧಿಗೂ ಮುನ್ನಾ ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸಿದ್ದನ್ನು ಬಿಟ್ಟರೇ ಇದೇ ಮೊದಲ ಬಾರಿಗೆ ಇದೇ ವರ್ಷ ಅವಧಿಗೂ ಮುನ್ನಾ ಮುಂಗಾರು ಪ್ರವೇಶಿಸುತ್ತಿದೆ ಎಂದು ಐಎಂಡಿ ತಿಳಿಸಿದೆ.

ಇನ್ನು, ಈ ವರ್ಷ ವಾಡಿಕೆಗಿಂತ ಮುಂಗಾರು ಹೆಚ್ಚು ಮಳೆಯಾಗಲಿದೆ ಎಂದು ಐಎಂಡಿ ಈಗಾಗಲೇ ಮುನ್ಸೂಚನೆ ನೀಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!