spot_img
Sunday, June 22, 2025
spot_img

ಪಾರ್ವತಿ ಐತಾಳರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಕೃತಿ ಅನಾವರಣ

ಜನಪ್ರತಿನಿಧಿ (ಕುಂದಾಪುರ) : ‘ ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ದೇಶ-ದೇಶಗಳ ನಡುವೆ ಮತ್ತು ಭಾಷೆ-ಭಾಷೆಗಳ ನಡುವಿನ ಸಂಪರ್ಕ ಹೆಚ್ಚಾಗಿದೆ. ಆದ್ದರಿಂದ  ಅನುವಾದದ ಮಹತ್ವವು ಹೆಚ್ಚಾಗಿದೆ ಎಂದು ಲೇಖಕಿ ವಿಮಲಾ ನಾವಡ ಹೇಳಿದರು.

ಅವರು ಎ.ಎಸ್.ಎನ್.ಹೆಬ್ಬಾರ್ ಅವರ ಮನೆ ‘ನುಡಿ’ ಯಲ್ಲಿ ನಡೆದ ಡಾ. ಪಾರ್ವತಿ ಜಿ. ಐತಾಳ್‌ ಅವರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಕೃತಿಯನ್ನು  ಬಿಡುಗಡೆಗೊಳಿಸಿ ಮಾತನಾಡಿದರು.

ಇವತ್ತು ಮಲೆಯಾಳ ಏನೂ ಗೊತ್ತಿಲ್ಲದೆ ಮಲೆಯಾಳದ ಮಹತ್ವದ ಸಾಹಿತ್ಯ ಕೃತಿಗಳು ನಮಗೆ ಸವಿಯಲು ಸಿಗುತ್ತಿವೆ ಎಂದಾದರೆ ಅದಕ್ಕೆ ಕಾರಣ ನಮ್ಮ ಅನುವಾದಕರೇ ಆಗಿದ್ದಾರೆ. ಮಲೆಯಾಳದ ಮೂಲಕ ಪಾರ್ವತಿ ಅವರು ಒಂದು ಸ್ವಾರಸ್ಯಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಶ್ಲಾಘನೀಯ ಎಂದು ಅವರು ಹೇಳೀದರು.

ಎ.ಎಸ್.ಎನ್.ಹೆಬ್ಬಾರ್ ಶುಭಾಶಂಸನೆ ಗೈದರು. ಕೃತಿಯ ಲೇಖಕಿ ಪಾರ್ವತಿ ಜಿ. ಐತಾಳ್ ಉಪಸ್ಥಿತರಿದ್ದರು. ಸುಧಾ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿದರು.  ಕನ್ನಡ-ಮಲೆಯಾಳ ಅನುವಾದಕಿ ಜೆಸ್ಸಿ ಎಲಿಜಬೆತ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!