spot_img
Monday, June 23, 2025
spot_img

ಕೋಟೇಶ್ವರ ಹಿಂದೂ ರುದ್ರಭೂಮಿ | ವಿದ್ಯುತ್‌ ಚಿತಾಗಾರ ಲೋಕಾರ್ಪಣೆ

ಜನಪ್ರತಿನಿಧಿ (ಕೋಟೇಶ್ವರ) : ಬದುಕಿನ ಎಲ್ಲಾ ಜಂಜಾಟ ಮುಗಿಸಿ ಕೊನೆಗೆ ಎಲ್ಲರೂ ಸೇರುವುದು ಈ ಶಾಂತಿಭೂಮಿಗೆ, ರುದ್ರಭೂಮಿಗೆ. ನೂರು ವರ್ಷಗಳ ಹಿಂದೆ ಆರಂಭಗೊಂಡ ಈ ಹಿಂದೂ ರುದ್ರಭೂಮಿಗೆ ಇಂದು ವಿದ್ಯುತ್ ಚಿತಾಗಾರ ಅಳವಡಿಕೆ ಆಗುವ ಆಧುನಿಕ ಸ್ಪರ್ಶವಾಗಿದೆ. ಕರ್ನಾಟಕ  ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮ ಪಪಂಚಾಯತ್‌ ವ್ಯಾಪ್ತಿಯಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಅಳವಡಿಕೆಯಾಗಿರುವುದು ಪ್ರಗತಿಯ ಸಂಕೇತ ಎಂದು  ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಗ್ರಾಮ ಪಂಚಾಯತ್ ಕೋಟೇಶ್ವರ ಇದರ ವ್ಯಾಪ್ತಿಯ ಹಿಂದೂರುದ್ರ ಭೂಮಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ವಿದ್ಯುತ್ ಚಿತಾಗಾರವನ್ನು ಇಂದು(ಶುಕ್ರವಾರ) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಾಜಿ ಸಭಾಪತಿಗಳಾದ ಪ್ರತಾಪಚಂದ್ರ ಶೆಟ್ಟಿ ಅವರ ಮುಂದಾಲೋಚನೆಯನ್ನು ಇಡೀ ಹಿಂದೂ ಸಮಾಜ ಗೌರವಿಸಬೇಕಿದೆ ಎಂದು ಹೇಳಿದ್ದಲ್ಲದೇ, ಇದೇ ಸಂದರ್ಭದಲ್ಲಿ  ಅವಕಾಶವಿರುವ ನಿಧಿಯಿಂದ ಅನುದಾನ ನೀಡುವ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ಪ್ರಯತ್ನದಿಂದ ಇಲ್ಲಿ ವಿದ್ಯುತ್ ಚಿತಾಗಾರ ಅಳವಡಿಸುವಂತಾಗಿದೆ‌. ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ವಿದ್ಯುತ್‌ ಚಿತಾಗಾರದ ಉಪಯೋಗ ಜಾಸ್ತಿಯಾದರೇ, ಇದರ ನಿರ್ವಹಣೆಯೂ ಸುಲಭವಾಗುತ್ತದೆ. ಇದು ನಿರಂತರವಾಗಿ ಸುವ್ಯವಸ್ಥಿತವಾಗಿ ಮುನ್ನಡೆಯಬೇಕು. ಸ್ಥಳೀಯ ಪಂಚಾಯತ್ ಒಳಗೊಂಡು ಹತ್ತಿರದ ಪಂಚಾಯತ್‌ ಅವರೂ ಸೇರಿ ಅತಿ ಶೀಘ್ರದಲ್ಲೇ ಸಭೆ ಕರೆದು ಇದನ್ನು ಯಾವ ರೀತಿ ಮುನ್ನಡೆಸಿಕೊಂಡು ಹೋಗಬೇಕೆನ್ನುವುದಕ್ಕೆ ಸಲಹೆ ನೀಡಬೇಕು. ಎಲ್ಲರ ಸಲಹೆ ತೆಗೆದುಕೊಂಡು ಸುವ್ಯವಸ್ಥಿತ ನಿರ್ವಹಣೆಗೆ ಯೋಜನೆ ರೂಪಿಸಬೇಕಿದೆ. ನಿರ್ವಹಣೆಗೆ ಸಹಕರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಇನ್ನು, ಇದೇ ಸಂದರ್ಭದಲ್ಲಿ ಕೋಟೇಶ್ವರ ಹಿಂದೂ ರುದ್ರ ಭೂಮಿಯ ಸ್ಥಾಪಕ ಅಧ್ಯಕ್ಷ ಗಣೇಶ್ ಕಾಮತ್, ರಂಗನಾಥ ಭಟ್, ಹಿಂದೂ ಸಂಘಟನೆಯ ಸುರೇಂದ್ರ ಮಾರ್ಕೋಡು, ನಿರ್ಮಿತಿ ಕೇಂದ್ರದ ಇಂಜಿನಿಯರ್ ಮಹೇಶ್, ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವಲ್ಲಿ ತಾಂತ್ರಿಕ ತಜ್ಞರಾಗಿದ್ದ ನಾಗರಾಜ್ ಬೆಂಗಳೂರು, ವಿಠಲದಾಸ್ ಭಟ್, ರಾಜಶೇಖರ ಶೆಟ್ಟಿ, ಕೆ.ಜಿ ವೈದ್ಯ, ಗುರುರಾಜ್ ರಾವ್, ರತ್ನಾಕರ್ ಕಾಮತ್ ಸೇರಿ ಮತ್ತಿತರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮ ಪಂಚಾಯತ್ ಕೋಟೇಶ್ವರದ ಅಧ್ಯಕ್ಷೆ ರಾಗಿಣಿ ದೇವಾಡಿಗ, ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕಾಂಗ್ರೆಸ್‌ ಮುಖಂಡ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಬಿಜಾಡಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಗೋಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ನಿರ್ಮಿತಿ ಕೆಂದ್ರದ ಇಂಜಿನಿಯರ್ ಮಹೇಶ್ ಸೇರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜಶೇಖರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಟೇಶ್ವರ ಗ್ರಾಮ ಪಂಚಾಯತ್ ನ ಪಿಡಿಓ ದಿನೇಶ್ ಸ್ವಾಗತಿಸಿದರು. ಚಂದ್ರಶೇಖರ್‌ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.

ಈ ಹಿಂದೂರುದ್ರಭೂಮಿಗೆ ವಿದ್ಯುತ್‌ ಚಿತಾಗಾರ ಅಳವಡಿಕೆಯಾಗುವ ಮೂಲಕ ಆಧುನಿಕ ಸ್ಪರ್ಶವಾಗಿದೆ. ಆದರೇ, ಇದರ ವ್ಯವಸ್ಥಿತ ನಿರ್ವಹಣೆಯೂ ಮುಖ್ಯ. ಶಾಸಕರು, ಸಂಬಂಧಪಟ್ಟ ಜನಪ್ರತಿನಿಧಿಗಳು ಸುವ್ಯವಸ್ಥೆಯ ನಿರ್ವಹಣೆಗೆ ಸಹಕರಿಸಬೇಕು. ಕೊನೆಯ ಪಕ್ಷ ಯಾವುದಾದರೂ ಆಸಕ್ತ ಸರ್ಕಾರೇತರ ಸಂಸ್ಥೆಗೆ ಒಡಂಬಡಿಕೆಯ ಮೂಲಕ ನಿರ್ವಹಣೆಗೆ ಒಪ್ಪಿಸಬೇಕು. ಅದೂ ಅಗಿಲ್ಲವೆಂದಲ್ಲಿ ಕಾನೂನು ಬದ್ಧವಾಗಿಯೇ ಈ  ಹಿಂದೂ ರುದ್ರಭೂಮಿ ಸಮಿತಿಗೆ ನಿರ್ವಹಣೆಯ ಜವಾಬ್ದಾರಿಯನ್ನು ಹಸ್ತಾಂತರಿಸಿ, ನಾವು ನಿರ್ವಹಣೆ ಮಾಡುತ್ತೇವೆ.
– ಗಣೇಶ್ ಕಾಮತ್
ಸ್ಥಾಪಕ ಸಮಿತಿಯ ಅಧ್ಯಕ್ಷರು, ಕೋಟೇಶ್ವರ ಹಿಂದೂರುದ್ರಭೂಮಿ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!