spot_img
Monday, June 23, 2025
spot_img

ಜನೌಷಧ ಕೇಂದ್ರ ಸ್ಥಗಿತ ಆದೇಶ ವಾಪಾಸ್‌ ಪಡೆಯಿರಿ : ಸಂಸದ ಕೋಟ ಒತ್ತಾಯ

ಜನಪ್ರತಿನಿಧಿ (ಉಡುಪಿ) : ಕೇಂದ್ರ ಸರ್ಕಾರದ ಯೋಜನೆತ ಅಡಿಯಲ್ಲಿ ಬರುವ ಜನೌಷಧ ಕೇಂದ್ರಗಳನ್ನು ಆಸ್ಪತ್ರೆಯ ಆವರಣದೊಳಗಿದ್ದರೆ ಮುಚ್ಚಬೇಕೆಂಬ ಆದೇಶವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಈ ಕೂಡಲೇ ವಾಪಾಸ್‌ ಪಡೆದಯಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.

ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಸಂಸದ ಕೋಟ, ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ರೋಗಿಗಳಿಗೆ ಔಷಧ ಸಿಗುತ್ತಿದ್ದು, ದೇಶದಲ್ಲಿ ಸುಮಾರು ಎರಡು ಸಾವಿರ ಕೋಟಿ ವ್ಯವಹಾರ ಜನೌಷಧಿ ಕೇಂದ್ರದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಇನ್ನು, ಗೃಹ ಸಚಿವ ಪರಮೇಶ್ವರ್‌ ಅವರ ಸಂಸ್ಥೆಗಳ ಮೇಲಿನ ಜಾರಿ ನಿರ್ದೇಶನಾಲಯದ (ಇಡಿ) ಶೋಧ ಕಾರ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇಲ್ಲ. ಅದೊಂದು ಸ್ವತಂತ್ರ ಸಂಸ್ಥೆ ಎಂದು ಮನಮೋಹನ್‌ ಸಿಂಗ್‌ ಅವರೇ ಹೇಳಿದ್ದರು. ತಮ್ಮ ಋಕ್ಷಣೆಗೋಸ್ಕರ ಮುಖ್ಯಮಂತ್ರಿ ಅವರು ದಲಿತ ನಾಯಕನ ವಿರುದ್ಧ ಇಡಿ ಶೋಧ ನಡೆಯುತ್ತಿದೆ ಎಂದು ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

ಅಪರಾಧ ಇರುವ ಕಡೆ ಶೋಧ ನಡೆಯುತ್ತದೆ. ಅವವರ ಭಾವನೆಗೆ ತಕ್ಕಂತೆ ಮಾತನಾಡುತ್ತಿದ್ದಾರೆ. ದಾಳಿಯನ್ನು ಜಾತಿ ವರ್ಗ ಸಮಾಜಕ್ಕೆ ಸೀಮಿತ ಮಾಡಬೇಡಿ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!