spot_img
Sunday, May 17, 2026
spot_img

ಆಪರೇಷನ್‌ ಸಿಂದೂರ : ಕ್ರೆಡಿಟ್‌ ತೆಗೆದುಕೊಳ್ಳುವುದಕ್ಕೆ ಮುಂದಾಯ್ತೆ ಬಿಜೆಪಿ !?

ಜನಪ್ರತಿನಿಧಿ (ಬೆಂಗಳೂರು) : ಆಪರೇಷನ್​ ಸಿಂಧೂರ್ ಯಶಸ್ವಿ ಬೆನ್ನಲ್ಲೇ ಬಿಜೆಪಿ ನಾಯಕರು ಭಾರತೀಯ ಸೇನೆ ಬೆಂಬಲಿಸಿ ತಿರಂಗ ಯಾತ್ರೆ ಹಮ್ಮಿಕೊಂಡಿದ್ದಾರೆ. ಮಲ್ಲೇಶ್ವರಂನ ಶಿರೂರೂ ಪಾರ್ಕ್ ನಿಂದ ಯಾತ್ರೆ ಆರಂಭಿಸಿ, ಯೋಧರಿಗೆ ಮತ್ತೆ ಸೇನೆಗೆ ನಮ್ಮ ಬೆಂಬಲ ಎಂದು ಘೋಷ ವಾಕ್ಯಗಳನ್ನು ಕೂಗಿದ್ದಾರೆ. ವಂದೆ ಮಾತರಂ ಗೀತೆಯ ಮೂಲಕ ತಿರಂಗ ಯಾತ್ರೆ ಪ್ರಾರಂಭವಾಗಿದೆ. ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಾರ್ವಜನಿಕರು, ವಿವಿಧ ಸಂಘಟನೆಯವರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಭಾರತೀಯ ಸೇನೆ ಬೆಂಬಲಿಸಿ ತಿರಂಗ ಯಾತ್ರೆಯಲ್ಲಿ ಬೃಹತ್ ತಿರಂಗ ಪ್ರದರ್ಶನ ನಡೆಸಲಾಯ್ತು. ಮಲ್ಲೇಶ್ವರಂನ ಮಂತ್ರಿ ಮಾಲ್ ನಿಂದ ಧ್ವಜ ಪ್ರದರ್ಶನ ನಡೆಯಿತು. ಸುಮಾರು 1500 ಅಡಿ ಉದ್ದದ ಬೃಹತ್ ತಿರಂಗ ಹಿಡಿದು ಯಾತ್ರೆ ‌ಸಾಗುತ್ತಿದೆ.

ಪಹಲ್ಗಾಮ್​ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಆಪರೇಷನ್​ ಸಿಂಧೂರ್​​ ಹೆಸರಿನ ಮೂಲಕ ದಾಳಿ ನಡೆಸಿ ಅಲ್ಲಿನ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿತು. ಉಗ್ರರ ಅಡುಗುತಾಣಗಳನ್ನು ಧ್ವಂಸ ಮಾಡಿತು. ಇದಕ್ಕೆ ಪ್ರತಿಯಾಗಿ ಮತ್ತೆ ಭಾರತದ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರಿತು. ಈ ಬೆನ್ನಲ್ಲೇ ಆಪರೇಷನ್​ ಸಿಂಧೂರ್​​ ಯಶಸ್ವಿಯಾಗಿದ್ದಕ್ಕೆ ಬಿಜೆಪಿ  ಭಾರತೀಯ ಸೇನೆ ಬೆಂಬಲಿಸಿ ತಿರಂಗ ಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ ಈ ಯಾತ್ರೆ ಮೂಲಕ ಬಿಜೆಪಿ ಕ್ರೆಡಿಟ್​​ ತೆಗೆದುಕೊಳ್ಳುವುದಕ್ಕೆ ಮುಂದಾಯ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಸೇನೆ ಬೆಂಬಲಿಸಿ ಎಂದು ನರೇಂದ್ರ ಮೋದಿ ಕಟೌಟ್​​ ಹಾಕಿ ಬಿಜೆಪಿ ಪ್ರಚಾರಕ್ಕೆ ಮುಂದಾಗಿದೆ. ಭಾರತೀಯ ಸೇನೆಗೆ ಬೆಂಬಲ ಎಂದು ನರೇಂದ್ರ ಮೋದಿಯ ಭಾವಚಿತ್ರ ಪ್ರದರ್ಶನ ಮಾಡಿದ್ದಾರೆ. ಮಲ್ಲೇಶ್ವರಂನ ಮುಖ್ಯ ರಸ್ತೆಯ ತಿರಂಗ ಯಾತ್ರೆ ಮೆರವಣಿಗೆಯಲ್ಲಿ ಯೋಧರಂತೆ ಕಾಣುವ ನರೇಂದ್ರ ಮೋದಿ ಕಟೌಟ್ ಪ್ರದರ್ಶನ ಮಾಡಿದ್ದಾರೆ. ಮೊದಲಿಗೆ ಈ ಆಪರೇಷನ್​ ಸಿಂಧೂರ್​​ನಲ್ಲಿ ಯಾವುದೇ ರಾಜಕೀಯ ಇಲ್ಲ, ಯಾವುದೇ ವ್ಯಕ್ತಿಯ ಪರ ಇಲ್ಲ ಎಂದು ಹೇಳಿತ್ತು. ಇದೀಗ ನರೇಂದ್ರ ಮೋದಿ ಚಿತ್ರವನ್ನು ಯೋಧರಂತೆ ಕಟೌಟ್​ ರೆಡಿ ಮಾಡಿಸಿದ್ದು, ಕಾಂಗ್ರೆಸ್ಸಿಗರ ಟೀಕೆಗೆ ಗುರಿಯಾಗಿದೆ.

ತಿರಂಗ ಯಾತ್ರೆಯಲ್ಲಿ ಹಲವಾರು ಗಣ್ಯರು ಭಾಗಿ!

ಭಾರತೀಯ ಸೇನೆ ಬೆಂಬಲಿಸಿ ನಡೆಯುತ್ತಿರುವ ಬಿಜೆಪಿಯ ಈ ತಿರಂಗ ಯಾತ್ರೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಾರ್ವಜನಿಕರು, ವಿವಿಧ ಸಂಘಟನೆಯವರು ಅಷ್ಟೇ ಅಲ್ಲದೇ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕ ಅಶ್ವಥ್ ನಾರಾಯಣ್, ಪರಿಷತ್ ಸದಸ್ಯರಾದ ಎನ್ ರವಿಕುಮಾರ್, ಸಿಟಿ ರವಿ, ಶಾಸಕರಾದ ಗೋಪಾಲಯ್ಯ, ಭೈರತಿ ಬಸವರಾಜ್, ಮುನಿರತ್ನ ಸೇರಿ ಹಲವು ಗಣ್ಯರು ಭಾಗಿಯಾಗಿದ್ದಾರೆ.

ಕಾಂಗ್ರೆಸ್​ ವಿರುದ್ಧ ರಾಧಾ ಮೋಹನ್ ದಾಸ್ ವಾಗ್ದಾಳಿ!

ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್ ಕಾಂಗ್ರೆಸ್​​ ಮತ್ತು ಮುಖ್ಯಮಂತ್ರಿ ವಿರುದ್ಧ ಗುಡುಗಿದ್ದಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಹೇಳಿಕೆ ಕೊಡ್ತಿದ್ದಾರೆ. ಆದ್ರೆ ಅವರ ರಾಷ್ಟ್ರ ವಿರೋಧಿ ಮಾನಸಿಕತೆ ಇಷ್ಟಪಡದ ಡಿಕೆಶಿ ನಮ್ಮ ಭಾರತೀಯ ಸೇನೆಗೆ ಬೆಂಬಲಿಸಿ ಮಾತಾಡಿದ್ದಾರೆ. ಡಿಕೆಶಿಯವರ ನಡೆಗೆ ಅಭಿನಂದನೆ ಎಂದು ಡಿಸಿಎಂ ಡಿಕೆಶಿಯನ್ನು ಶ್ಲಾಘಿಸಿದ್ದಾರೆ.

ಮತ್ತು ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತ್ನಾಡಿದ್ದು, ಬಿಜೆಪಿ ಎಂದಿಗೂ ವಿಜಯ್ ಶಾ ಹೇಳಿಕೆ ಒಪ್ಪಲ್ಲ, ಕ್ಷಮಿಸೋದೂ ಇಲ್ಲ. ಆದರೆ ಈಗಾಗಲೇ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಹೇಳಿಕೆಯನ್ನಷ್ಟೇ ಆಧರಿಸಿ ರಾಜೀನಾಮೆ ಪಡೆಯುವ ಹಾಗಿದ್ದಿದ್ರೆ ಕಾಂಗ್ರೆಸ್ ನಲ್ಲಿ ಒಂದಿಬ್ಬರು ಬಿಟ್ಟು ಯಾರೂ ಸ್ಥಾನಗಳಲ್ಲಿ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯುದ್ಧ, ಶಾಂತಿಯನ್ನು ಸೈನಿಕರು ನಿರ್ಧರಿಸುತ್ತಾರೆ : ಅಶೋಕ್​!

ಇನ್ನೂ ತಿರಂಗ ಯಾತ್ರೆ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್,  ತಿರಂಗಾ ಯಾತ್ರೆ ಗೆ ಎಲ್ಲ ವರ್ಗದವರು ಬಂದಿದ್ದಾರೆ. ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಯಾರು ಬೇಕಾದ್ರೂ ಕೂಡ ಬರಬಹುದು. ಸೈನಿಕರಿಗೆ ಗೌರವ ಕೊಡಲು ನಾವು ಬಂದಿದ್ದೆವೆ. ಕೆಲವರು ಹೇಳ್ತಾರೆ. ಶಾಂತಿ ಶಾಂತಿ ಅಂತಾರೆ.  ಇನ್ನು ಕೆಲವರು ಯುದ್ದ ಬೇಡ ಅಂತಾರೆ. ಅದೆಲ್ಲ ಸೈನಿಕರು ನಿರ್ಧರಿಸಬೇಕು ಎಂದು ಆರ್​.ಅಶೋಕ್​ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!