spot_img
Wednesday, April 1, 2026
spot_img

ಬಳ್ಕೂರು: ಹೊಳೆಗೆ ಹಾರಿ ಯುವಕ ಆತ್ಮಹತ್ಯೆ

ಕುಂದಾಪುರ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಕೂರುವಿನಲ್ಲಿ ನಡೆದಿದೆ.

ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಸ್ವಸ್ತಿಕ್ (21ವ) ಆತ್ಮಹತ್ಯೆಗೆ ಶರಣಾದ ಯುವಕ.
ಬಳ್ಕೂರು ನಿವಾಸಿಯಾದ ಸ್ವಸ್ತಿಕ್ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮನೆಯಲ್ಲಿಯೇ ಇದ್ದು ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುವ ಸ್ವಭಾವದವರಾಗಿದ್ದರು, ಅಲ್ಲದೇ ಸ್ವಲ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮೇ 7 ರಂದು ಮದ್ಯಾಹ್ನ ೩ಗಂಟೆ ಸಮಯಕ್ಕೆ ಸ್ವಸ್ತಿಕ್ ನಲ್ಲಿ ಆತನ ಅಜ್ಜಿ ತಾಯಿಗೆ ಬೊಂಡ ಕೊಟ್ಟು ಬರುವಂತೆ ಹೇಳಿದ್ದಕ್ಕೆ ಕೋಪಗೊಂಡು ಸೈಕಲ್ ತೆಗೆದುಕೊಂಡು ಹೋಗಿದ್ದು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಸ್ವಸ್ತಿಕ್ ಎಲ್ಲಿಯಾದರೂ ಹೋಗಿರಬಹುದು ವಾಪಾಸ್ಸು ಬರಬಹುದು ಎಂದು ಮನೆಯವರು ಸುಮ್ಮನಿದ್ದರು. ಮೇ 8  ರಂದು 12:30 ಗಂಟೆಗೆ ಸ್ವಸ್ತಿಕ್ ನ ಮೃತದೇಹ ಬಳ್ಕೂರು ಕಳುವಿನಬಾಗಿಲು ವಾರಾಹಿ ಹೊಳೆಯಲ್ಲಿ ತೇಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡದಂತೆ ಮನೆಯವರು ಹಾಗೂ ಇತರರು ಬಂದು ನೋಡಿ ಗುರುತಿಸಿದ್ದಾರೆ. ಸ್ವಸ್ತಿಕ್ ಮುಂಗೋಪ ಅಥವಾ ಮಾನಸಿಕ ಖಿನ್ನತೆಯಿಂದ ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಅಂತ್ಯಕ್ರಿಯೆ ಮೇ 9ರಂದು ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!