spot_img
Wednesday, April 1, 2026
spot_img

ಪೆಹಲ್ಗಾಮ್‌ ದಾಳಿಯ ಪ್ರತೀಕಾರದ ಆರಂಭ : ಆರ್‌ ಎಸ್‌ ಎಸ್

ಜನಪ್ರತಿನಿಧಿ (ನವ ದೆಹಲಿ) : ಪಾಕ್‌ ಉಗ್ರ ನೆಲೆಗಳ ಮೇಲೆ ನಡೆಸ ಆಪರೇಷನ್‌ ಸಿಂಧೂರ್‌ ದಾಳಿ, ಪಹಲ್ಗಾಮ್‌ ಉಗ್ರ ದಾಳಿಯ ವಿರುದ್ಧದ ಪ್ರತಿಕಾರದ ಆರಂಭವಷ್ಟೇ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿದೆ.

ಪೆಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಕಾರವಾಗಿ ಆಪರೇಷನ್‌ ಸಿಂಧೂರ ಹೆಸರಿನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ, ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿತ್ತು. ಇದರಲ್ಲಿ ಕುಖ್ಯಾತ ಉಗ್ರ ಸಂಘಟನೆಗಳಾದ ಜೈಷ್‌ ಎ ಮೊಹಮ್ಮದ್‌ ಹಾಗೂ ಲಷ್ಕರ್‌ ಎ ತಯಬಾ ಉಗ್ರ ಸಂಘಟನೆಗಳ ನೆಲೆಯೂ ಸೇರಿತ್ತು.

ಆಪರೇಷನ್‌ ಸಿಂಧೂರ ದಾಳಿ ಪೆಹಲ್ಗಾಮ್‌ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯಕೊಡುವ ಪ್ರಯತ್ನದ ಮೊದಲ ಹೆಜ್ಜೆ ಇದಾಗಿದೆ. ಮೃತರಿಗೆ ನ್ಯಾಯ ಸಿಕ್ಕಿದೆ. ದೇಶ ಇದನ್ನು ಬೆಂಬಲಿಸುತ್ತದೆ. ಜೈ ಹಿಂದ್‌, ಭಾರತ ಮಾತೆಗೆ ಜಯವಾಗಲಿ ಎಂದು ಆರ್‌ ಎಸ್‌ ಎಸ್‌ ರಾಷ್ಟ್ರೀಯ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್‌ ಅಂಬೇಕರ್‌ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಆಪರೇಷನ್‌ ಸಿಂಧೂರ ಮೂಲಕ ಪಹಲ್ಗಾಮ್‌ ದಾಳಿಗೆ ಪ್ರತಿಕಾರ ತೀರಿಸಿಕೊಳ್ಲಲಾಗಿದೆ. ಇದಕ್ಕಾಗಿ ಭಾರತೀಯ ಸೇನೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಜಿಹಾದಿ ಪಾಕಿಸ್ತಾನಿಯರ ಮನೆಗೆ ನುಗ್ಗಿ, ಉಗ್ರ ನೆಲೆಗಳನ್ನು ನಾಶ ಮಾಡುವ ಮೂಲಕ ಭಾರತೀಯ ಸೇನೆ ಶೌರ್ಯ ಪ್ರದರ್ಶನ ಮಾಡಿದೆ. ಭಾರತದ ವಿರುದ್ಧ ಬಂದರೆ, ಅವರನ್ನು ನಾಶ ಮಾಡುವುದಾಗಿ ಭಾರತೀಯ ಸೇನೆ ಈ ಮೂಲಕ ಸ್ಪಷ್ಟಪಡಿಸಿದೆ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದೆ.

ಪಹಲ್ಗಾಮ್‌ ನಲ್ಲಿ ಉಗ್ರರು ೨೬ ಪ್ರವಾಸಿಗರನ್ನು ಹತ್ಯೆ ಮಾಡಿದ ಎರಡು ವಾರಗಳ ನಂತೆ ಭಾರತೀಯ ಸೇನೆ ಆಪರೇಷನ್‌ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆಗಳನ್ನು ನಾಶ ಮಾಡಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!