spot_img
Monday, March 16, 2026
spot_img

ವಂಡ್ಸೆ: ವನದುರ್ಗಾದೇವಿ (ಕಾನಮ್ಮ) ಶಿಲಾಮಯ ದೇವಾಲಯ ಲೋಕಾರ್ಪಣೆ

ಕುಂದಾಪುರ: ಋಷಿ ಮುನಿಗಳ ಮೂಲಕ ನಿರ್ಮಾಣವಾದ ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವುದು ಅತ್ಯಂತ ಶ್ರೇಷ್ಠಕರವಾದುದು. ಇದು ಪುರಾಣದಲ್ಲಿ ಉಲ್ಲೇಖವಾದ ಅಂಶ. ಗ್ರಾಮದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಗ್ರಾಮಕ್ಕೆ ಸುಭೀಪ್ಸೆ ಉಂಟಾಗುತ್ತದೆ. ಇಂಥಹ ಕಾರ್ಯದಲ್ಲಿ ಪಾಲ್ಗೋಳ್ಳುವುದು ಕೂಡಾ ಪುಣ್ಯಪ್ರದವಾದುದು ಎಂದು ವೇ.ಮೂ.ರಾಮಕೃಷ್ಣ ಭಟ್ ಶಾರ್ಕೆ ಹೇಳಿದರು.

ಅವರು ವಂಡ್ಸೆ ಗ್ರಾಮದ ಹಳಂಡಿಯಲ್ಲಿರುವ ಪ್ರಾಚೀನ ಶ್ರೀ ವನದುರ್ಗಾದೇವಿ (ಕಾನಮ್ಮ) ದೇವಿಯ ದೇವಸ್ಥಾನ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದು, ಶಿಲಾಮಯ ದೇವಾಲಯ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.

ದೇವರ ಪೂರ್ಣ ಸಂಪನ್ನಶಕ್ತಿ ಸಿಗಲು ನಿಯಮಗಳನ್ನು ಭಕ್ತರು ಪಾಲಿಸಬೇಕು. ಶೃದ್ದಾಭಕ್ತಿಯಿಂದ ದೇವಿಯನ್ನು ಅಂತಃಕರಣ ಶುದ್ಧವಾಗಿ ಅರ್ಚಿಸಿದರೆ ದೇವಿಯ ಅನುಗ್ರಹ ಲಭಿಸುತ್ತದೆ ಎಂದು ಅವರು ಹೇಳಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವಿ.ಕೆ ಶಿವರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ವಂಡ್ಸೆ ವಲಯ ಮೇಲ್ವಿಚಾರಕ ಚಂದ್ರ ಮಧುವನ, ವಿ.ಕೆ ಸುಧಾಕರ ಶೆಟ್ಟಿ, ಮೋಹನದಾಸ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಹೆಗ್ಡೆ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್(ರಿ), ಮಾರಣಕಟ್ಟೆ ಇದರ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಮ್. ಸುಕುಮಾರ್ ಶೆಟ್ಟಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಜೀರ್ಣೋದ್ದಾರ ಸಹಕರಿಸಿದವರನ್ನು ಗೌರವಿಸಲಾಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಹೆಗ್ಡೆ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಶಿಧರ ಶೆಟ್ಟಿ ವಂಡ್ಸೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಶಿಧರ ಶೆಟ್ಟಿ ವಂಡ್ಸೆ ಕೊರಾಡಿಮೆ ವಂದಿಸಿದರು. ಅಧ್ಯಾಪಕರಾದ ವಸಂತರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಏ. 28ರಂದು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಏ.30ರ ತನಕ ನಡೆಯಿತು. ಏ.28ರಂದು ಶ್ರೀ ದೇವರ ಪ್ರತಿಷ್ಠೆ, ಅಷ್ಠಬಂಧ ಪ್ರತಿಷ್ಠೆ, ಏ.30 ಶ್ರೀ ವನದುರ್ಗಾದೇವಿ (ಕಾನಮ್ಮ) ದೇವರಿಗೆ ಅಷ್ಟೋತ್ತರ ಶತ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀ ರಾಘವೇಂದ್ರ ಭಜನಾ ಮಂಡಳಿ ವಂಡ್ಸೆ ಇವರಿಂದ ಭಜನೆ ಕಾರ್ಯಕ್ರಮ, ರಂಗಪೂಜೆ, ನಂತರ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇಲ್ಲಿನ ನಂದಗೋಕುಲ ಕಲಾವಿದರಿಂದ, ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಮಂದಾರ್ತಿ ಮಾದೇವಿ ನೃತ್ಯರೂಪಕ ಪ್ರದರ್ಶನಗೊಂಡಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!