spot_img
Monday, March 16, 2026
spot_img

ಬೆಂಗಳೂರು : ಸುರಂಗ ಮಾರ್ಗ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ | ಟೆಂಡರ್‌ ಕರೆಯಲು ರಾಜ್ಯ ಸರ್ಕಾರ ನಿರ್ಧಾರ

ಜನಪ್ರತಿನಿಧಿ (ಬೆಂಗಳೂರು) : ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಮತ್ತೆ ಟ್ರಾಫಿಕ್ ಸಿಟಿ ಆಗಿದೆ. ಹೀಗಾಗಿ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ.

ಸೋಮವಾರ ಮಾತನಾಡಿದ ಅವರು, ಬೆಂಗಳೂರಲ್ಲಿ ಸುರಂಗ ಮಾರ್ಗವನ್ನು ಶುರು ಮಾಡುತ್ತೇವೆ. ಅದಕ್ಕೆ ಜಾಗ ಬೇಕಾಗಿದೆ. ಹಾಗಾಗಿ ಟೆಂಡರ್ ಕರೆಯುತ್ತಿದ್ದೇವೆ. ಸುರಂಗ ಮಾರ್ಗ ನಿರ್ಮಾಣ ಮಾಡಲು ಸೇನೆಗೆ ಸಂಬಂಧಿಸಿದ ಜಾಗ ಮತ್ತು ಖಾಸಗಿ ಜಮೀನಿನ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದಕ್ಕಾಗಿ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಎಷ್ಟು ಜಮೀನು ಬೇಕು ಎಂಬುವುದನ್ನು ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯವಾಗಿ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದು ಯಾವಾಗ ಆರಂಭ ಆಗಲಿದೆ ಎಂಬ ಕುತೂಹಲವೂ ಕೆರಳಿಸಿದೆ.

ಕೃಷ್ಣ ಕಣಿವೆ ರಾಜ್ಯಗಳ ಜೊತೆ ಸಭೆಯ ಕುರಿತಾಗಿ ಅವರು ಮಾತನಾಡಿ, ನಾವು ಸಿಎಂ ಸೇರಿ ಸಂಬಂಧಪಟ್ಟ ಸಚಿವರು ಸಭೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅದಕ್ಕೆ ಲೀಗಲ್ ಟೀಂಗೆ ಹೇಳಿದ್ದೀವಿ, ಅವರು ನಮಗೆ ಪ್ರಸ್ತಾವನೆ ತಿಳಿಸುತ್ತಾರೆ. ಅದನ್ನು ನಾವು ದೆಹಲಿಯಲ್ಲಿ ಹೇಳುತ್ತೇವೆ ಎಂದರು.

ಭೂಮಿಯ ಅವಶ್ಯಕತೆಯ ಕುರಿತು ನಾವು ಮಿಲಿಟರಿಗೆ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ. ಖಾಸಗಿ ಮಾಲೀಕರು ಮತ್ತು ಮೆಟ್ರೋಗೆ ಸೇರಿದ ಆಸ್ತಿಗಳು ಸಹ ಇವೆ, ಅವುಗಳನ್ನು ನಾವು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ, ಯೋಜನೆಯ ನಿರ್ದಿಷ್ಟ ಅವಶ್ಯಕತೆಗಳನ್ನು ನಾವು ಕುಳಿತು ಚರ್ಚಿಸಬೇಕಾಗಿದೆ ಎಂದರು.

ಸುರಂಗವನ್ನು ಭೂಮಿಯ ಒಳಗೆ ನಿರ್ಮಿಸಲಾಗುವುದು, ಇದರಿಂದ ಮೇಲ್ಮೈ ಸ್ಥಳ ಮತ್ತು ನಗರದ ಸೌಂದರ್ಯವನ್ನು ಸಂರಕ್ಷಿಸುತ್ತದೆ. ಈ ಯೋಜನೆಯು NH-7 ಅನ್ನು NH-14 ನೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿರುವುದರಿಂದ, ಕರ್ನಾಟಕ ಸರ್ಕಾರವು ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಿದೆ.

ಚನ್ನಪಟ್ಟಣಗೆ ಕುಡಿಯುವ, ವ್ಯವಸಾಯದ ನೀರಿನ ಬೇಕು. ಕೆಲ ಪ್ರಾಜೆಕ್ಟ್ ಉಳಿದುಕೊಂಡಿದೆ, ರೈತರ ಸಮಸ್ಯೆ ಇದೆ. ಆ ಸ್ಪಾಟ್ ನಲ್ಲಿ ಹೋಗಿ ನೋಡಬೇಕಾಗಿದೆ. ನಾನು ಯೋಗೇಶ್ವರ್, ಸುರೇಶ್ ಅವರು ಬರ್ತಾರೆ. ರೈತರಿಗೆ ಏನು ಮನವಿ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.

ಹೆಬ್ಬಾಳ ಸಮೀಪದ ಎಸ್ಟೀಮ್‌ ಮಾಲ್‌ನಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ವರೆಗಿನ 16.5 ಕಿ.ಮೀ. ಉದ್ದದ ಅವಳಿ ಸುರಂಗ ಮಾರ್ಗ ನಿರ್ಮಾಣ ಆಗಲಿದೆ. ಎಸ್ಟೀಮ್‌ ಮಾಲ್‌, ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಲಾಲ್‌ಬಾಗ್‌, ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೆ ಸುರಂಗ ಮಾರ್ಗ ಸಾಗಲಿದೆ. ಮೆಟ್ರೊ ಸುರಂಗ ಮಾರ್ಗ ಹಾದು ಹೋಗಿರುವೆಡೆ ರಸ್ತೆ ಸುರಂಗವು 180 ಅಡಿಯಷ್ಟು ಆಳದಲ್ಲಿ ಸಾಗಲಿದೆ ಎಂದು ತಿಳಿದುಬಂದಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!