spot_img
Wednesday, March 25, 2026
spot_img

ಮೇ.09ಕ್ಕೆ‌ ರಾಜ್ಯದಾದ್ಯಂತ ‘ನಾಳೆ ರಜಾ ಕೋಳಿ ಮಜಾ’ ತೆರೆಗೆ 

ಜನಪ್ರತಿನಿಧಿ (ಬೆಂಗಳೂರು) : ಕನ್ನಡ ಸಿನೆಮಾ ರಂಗದಲ್ಲಿ ಹೊಸಬರ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬರುತ್ತಿವೆ. ಆ ಸಾಲಿಗೆ ಭರವಸೆಯ ನಿರ್ದೇಶಕ ಅಭಿಲಾಷ್ ಶೆಟ್ಟಿ ರಚಿಸಿ, ನಿರ್ದೇಶಿಸಿ ನಿರ್ಮಿಸಿರುವ ‘ನಾಳೆ ರಜಾ ಕೋಳಿ ಮಜಾ’ ಸಿನೆಮಾ ಇದೆ ಮೇ. 09 ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದೆ.
ಸ್ನೇಹ ಎನ್ನುವ ಹನ್ನೊಂದು ವರ್ಷದ ಬಾಲಕಿ ಮಹಾತ್ಮಾ ಗಾಂಧಿ ದಿನ ಕೋಳಿ ಕರಿ ತಿನ್ನಬೇಕು ಎನ್ನುವ ಆಸೆಯಿಂದ ಕಾಯುವ ಸಣ್ಣ ಎಳೆಯ ಜೊತೆಗೆ ದೇಶದಾದ್ಯಂತ ಅಂದು ಮಾಂಸ ಮಾರಾಟ ನಿಷಿದ್ಧ ಇರುವುದರಿಂದ ಅಂದು ಸ್ನೇಹಳಾ ಬಯಕೆ ಈಡೇರುತ್ತದೆಯೇ ಅಥಾವಾ ಆಕೆ ನಿರಾಸೆ ಹೊಂದುತ್ತಾಳೆಯೇ ಎಂಬ ಪ್ರಶ್ನೆಗಳಿಗೆ ಈ ಸಿನೆಮಾ ಥಿಯೇಟರ್ ತೆರೆ ಮೇಲೆ ಉತ್ತರಿಸಲಿದೆ.
91 ನಿಮಿಷಗಳ ಸಿನೆಮಾ ಇದಾಗಿದ್ದು, ಸೆನ್ಸಾರ್ ನಿಂದ ‘U’ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಸ್ವರೂಪ್ ಯಶವಂತ್ ಸಿನೆಮಾಟೋಗ್ರಫಿ ಇದ್ದು, Plan A film ಸಂಸ್ಥೆ ನಿರ್ಮಾಣ ಮಾಡಿದೆ. ವಿಥರ್ ಮೊರೆಸ್ ಅವರ ಸೌಂಡ್ ಡಿಸೈನ್, ಎಂ.ಆರ್ ಪ್ರಹಸ್ತ್ ಅವರ ಸಂಗೀತ ಈ ಸಿನೆಮಾಕ್ಕಿದೆ.
ಡ್ರಾಮ ಜ್ಯೂನಿಯರ್ ಖ್ಯಾತಿಯ ಸಮೃದ್ಧಿ ಕುಂದಾಪುರ, ಸಾನಿಧ್ಯ ಆಚಾರ್ಯ, ಪ್ರಭಾಕರ ಕುಂದರ್, ರಾಧಾ ರಾಮಚಂದ್ರ ಸೇರಿ ಪ್ರಮುಖರು ತಾರಾ ಗಣದಲ್ಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!