spot_img
Sunday, February 15, 2026
spot_img

ರೂ.3 ಕೋಟಿ ವೆಚ್ಚದಲ್ಲಿ ಹಾಲಾಡಿ ಶ್ರೀ ಮಾರಿಕಾನು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ

ಹಾಲಾಡಿ: ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಕ್ತರ ಇಷ್ಟಾರ್ಥ ಈಡೇರಿಸುವ ಈ ದೇವಸ್ಥಾನದಲ್ಲಿ ಹಿಂದೆ ರಥೋತ್ಸವ ನಡೆಯುತ್ತಿತ್ತು ಎನ್ನಲಾಗಿದೆ. ಪ್ರತಿ ಹನ್ನೆರೆಡು ವರ್ಷಕ್ಕೊಮ್ಮೆ ನಾಥ ಪಂಥದ ನಾಗ ಸಾಧುಗಳು ಶ್ರೀ ಕ್ಷೇತ್ರಕ್ಕೆ ಭೇಟಿ ಕೊಡುತ್ತಿರುವುದು ಶ್ರೀ ಕ್ಷೇತ್ರದ ಕಾರಣಿಕ ಹಾಗೂ ಪೌರಾಣಿಕ ಐತಿಹ್ಯಕ್ಕೆ ಪುರಾವೆಯಾಗಿದೆ. ಶ್ರೀ ಕ್ಷೇತ್ರವೂ ಶ್ರೀ ಆದಿ ಮರಳುಚಿಕ್ಕು ಮತ್ತು ಶ್ರೀ ಮರಳು ಚಿಕ್ಕು ದೈವ ಸಾನಿಧ್ಯವನ್ನು ಪರಿವಾರವಾಗಿ ಹೊಂದಿರುವ ಶ್ರೀ ದೇವಿಯ ಸನ್ನಿದಾನವಾಗಿದ್ದು, ಶ್ರೀ ಕ್ಷೇತ್ರದ ಹೆಸರಿನಲ್ಲಿ ಯಕ್ಷಗಾನ ಮೇಳವು ತಿರುಗಾಟ ನಡೆಸುತ್ತಿದೆ. ಹಾಲಾಡಿ ಗ್ರಾಮದ ಗ್ರಾಮ ದೇವತೆಯಾಗಿಯೂ ವಿರಾಜಮಾನಳಾಗಿರುವ ಶ್ರೀ ದುರ್ಗೆಯ ಈ ಸನ್ನಿದಾನವೂ ಸಂಪೂರ್ಣ ಅಜೀರ್ಣಾವಸ್ಥೆಯಲ್ಲಿರುವುದರಿಂದ ಗ್ರಾಮಸ್ಥರು ಹಾಗೂ ಭಕ್ತರ ಅಭಿಪ್ರಾಯದಂತೆ ಜೀರ್ಣೋದ್ಧಾರಕ್ಕೆ ನಿರ್ಧರಿಸಲಾಗಿದೆ. ಪರಿಪೂರ್ಣ ದೇವಾಲಯಕ್ಕೇ ಬೇಕಾದ ಎಲ್ಲಾ ಜೀರ್ಣೋದ್ಧಾರ ಕಾರ್ಯಗಳು ಇಲ್ಲಿ ನೆರವೇರಬೇಕು. ಗರ್ಭಗುಡಿ ನಿರ್ಮಾಣ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ 3 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕೆಲಸಗಳು ನಡೆಯಬೇಕಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಹೇಳಿದರು.

ಅವರು ಹಾಲಾಡಿ ಶ್ರೀ ಮಾರಿಕಾನು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಏಪ್ರಿಲ್ 27ರಂದು ದೇವಸ್ಥಾನದಲ್ಲಿ ನಡೆದ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹಾಲಾಡಿ ಸುತ್ತಮುತ್ತ 1.5 ಕೋಟಿಗೂ ಮಿಕ್ಕಿ ಹಣ ಸಂಗ್ರಹವಾಗಬೇಕು. ಉಳಿದ ಮೊತ್ತವನ್ನು ಹೊರಗಿನ ಭಕ್ತಾದಿಗಳಿಂದ ಸಂಗ್ರಹಿಸಬೇಕಾಗಿರುವುದರಿಂದ ಸರ್ವರೂ ಹಣ ನೀಡಿ ಬೆಂಬಲಿಸಬೇಕು. ಹಾಲಾಡಿ ಸುತ್ತಮುತ್ತ ಈಗಾಗಲೆ ಸುಮಾರು 900ಮನೆಗಳಿಗೆ ಮನವಿ ಪತ್ರಗಳನ್ನು ನೀಡಲಾಗಿದ್ದು ಎಲ್ಲರೂ ಸಹಕಾರ ನೀಡಬೇಕು. ದೇವಸ್ಥಾನ ಅಭಿವೃದ್ಧಿ ಆದಲ್ಲಿ ಹಾಲಾಡಿಯೂ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಆದ್ದರಿಂದ ನವರಾತ್ರಿಯ ನಂತರ ಕರಸೇವೆಯೊಂದಿಗೆ ಜೀರ್ಣೋದ್ಧಾರ ಕೆಲಸ ಆರಂಭಿಸಲಾಗುವುದು ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನರಾಜ ಅಡಿಗ ಮಾತನಾಡಿ ದೇವಸ್ಥಾನ ಜೀರ್ಣೋದ್ಧಾರ ಮಾಡುವುದು ದೇವರಿಗಾಗಿ ಅಲ್ಲ. ನಮ್ಮ ಅಭಿವೃದ್ಧಿಗಾಗಿ ಮಾಡಬೇಕೆ ಹೊರತು ದೇವರಿಗಾಗಿ ಅಲ್ಲ. ನಾವು ದೇವರಿಗೆ ಯಾವುದೇ ಒಂದು ವಸ್ತು ನೀಡಿದರೂ ದೇವರು ಅದಕ್ಕೆ ಹತ್ತು ಪಟ್ಟು ನಮಗೆ ಹಿಂದಕ್ಕೆ ನೀಡುತ್ತಾನೆ. ನಾವು ಎಷ್ಟೇ ಸಂಪತ್ತು ಮಾಡಿದರೂ ಕೊಂಡು ಹೋಗಲು ಸಾಧ್ಯವಿಲ್ಲ. ಅದು ಇಲ್ಲಿಯೇ ಉಳಿಯಲಿದೆ. ಭೂಮಿ ಬಿಟ್ಟು ತೆರಳುವಾಗ ಯಾರೂ ಬರಲ್ಲ. ಬಂಧುಗಳು ಬಂದರೂ ಸ್ಮಶಾನದವರೆಗೆ ಮಾತ್ರ ಬರುತ್ತಾರೆ. ಸತ್ಕಾರ್ಯಕ್ಕೆ ನಮ್ಮ ಸಂಪತ್ತು ವಿನಿಯೋಗವಾದರೆ ಭಗವಂತ ಸದಾ ಅನುಗ್ರಹಿಸುತ್ತಾನೆ ಎಂದರು.

ಪ್ರತಿ ಮನೆಯ ಸದಸ್ಯರಿಗೊಂದರಂತೆ ಶಿಲೆಕಲ್ಲು :
ಸಭೆಯನ್ನುದ್ದೇಶಿಸಿ ಹಾಲಾಡಿ ನಟರಾಜ ಹೆಗ್ಡೆ ಮಾತನಾಡಿ ಸುಮಾರು 9 ತಂಡಗಳನ್ನು ಈಗಾಗಲೆ ರಚಿಸಿದ್ದು ಈ ತಂಡಗಳ ಸದಸ್ಯರು ಪ್ರತೀ ಮನೆಗೆ ಭೇಟಿ ನೀಡಿ ಮನೆಯಲ್ಲಿರುವ ಸದಸ್ಯರಿಗೊಬ್ಬರಂತೆ ಒಂದೊಂದು ಶಿಲೆಯನ್ನು ಸಂಗ್ರಹಿಸಬೇಕು. ಈ ಶಿಲೆಗಳನ್ನು ಒಟ್ಟುಗೂಡಿಸಿ ಜೂನ್ 2ರಂದು ಶಿಲಾ ಪೂಜೆ ನೆರವೇರಿಸಲಾಗುವುದು. ಪ್ರತಿಯೊಂದು ಮನೆಯ ಸದಸ್ಯರು ತಲಾ ಒಂದೊಂದು ಶಿಲೆಯನ್ನು ನೀಡುವಂತೆ ಕೋರಿಕೊಂಡರು. ಹಾಲಾಡಿ ವಿಜಯ ಶೆಟ್ಟಿ ಮಾತನಾಡಿ ಮೇ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿರುವ ಭಕ್ತಾದಿಗಳ ಸಭೆಯನ್ನು ನಡೆಸಲಾಗುವುದು ಎಂದರು.

ಆಡಳಿತ ಮೊಕ್ತೇಸರ ಹಾಲಾಡಿ ಶರತ್ ಚಂದ್ರ ಶೆಟ್ಟಿ, ಶಿಕ್ಷಕ ಉದಯ ಶೆಟ್ಟಿ ಹಾಲಾಡಿ ಹಿರಿಯರಾದ ರಾಮಣ್ಣ ಶೆಟ್ಟಿ, ಸಹ ಮೊಕ್ತೇಸರ ದಿವಾಕರ ಶೆಟ್ಟಿ, ಚಂದ್ರಕಾಂತ ಶೆಣೈ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜಾನಕಿ, ಜನಾರ್ದನ ಹಾಲಾಡಿ ಹಾಗೂ ಗುರುಪ್ರಸಾದ ಶೆಟ್ಟಿ ಹಾಲಾಡಿ, ಹಾಲಾಡಿ ಮರ್ಲು ಚಿಕ್ಕು ದೈವಸ್ಥಾನದ ಆಡಳಿತ ಧರ್ಮದರ್ಶಿ ಅಮರನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜ್ಞಾನೇಶ ಶೆಟ್ಟಿ, ಖಜಾಂಚಿ ನಿತ್ಯಾನಂದ ಹಾಲಾಡಿ ಮತ್ತು ಊರಿನ ಗಣ್ಯರು,ಹಿರಿಯರು,ಗ್ರಾಮಸ್ಥರು ಹಾಗೂ ಶ್ರೀ ದೇವಿಯ ಸದ್ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!