spot_img
Thursday, April 2, 2026
spot_img

ದೇಶ ಮತ್ತು ಧರ್ಮದ ವಿಷಯದಲ್ಲಿ ಎಲ್ಲರೂ ಒಂದಾಗಿರಬೇಕು-ಶ್ರೀಕಾಳಹಸ್ತೇಂದ್ರ ಸರಸ್ವತೀ ಶ್ರೀ

ಕುಂದಾಪುರ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಗುರುಸೇವಾ ಪರಿಷತ್ ಮಹಾಮಂಡಲ ಕುಂದಾಪುರ ಇವರ ವತಿಯಿಂದ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಸಾಮೂಹಿಕ ಗುರು ಪಾದ ಪೂಜೆ ಶುಕ್ರವಾರ ಕುಂದಾಪುರ ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘದ ಸಭಾ ಭವನದಲ್ಲಿ ಜರುಗಿತು.

ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ ಸನಾತನ ಧರ್ಮದಲ್ಲಿ ಇರುವ ಜಾತಿಗಳು ಕೌಶಲ್ಯ ಆಧಾರಿತವಾಗಿದೆ. ಯಾವ ಜಾತಿಯೂ ಮೇಲೂ ಅಲ್ಲ ಮತ್ತು ಕೀಳಲ್ಲ ಸಮಾನವೂ ಅಲ್ಲ ತೋಟದಲ್ಲಿ ಇರುವ ನಾನಾ ಹೂವು ಮತ್ತು ಮರಗಳಂತೆ. ದೇಶ ಮತ್ತು ಧರ್ಮದ ವಿಷಯದಲ್ಲಿ ಎಲ್ಲರೂ ಎಲ್ಲವೂ ಒಂದಾಗಿರಬೇಕು ಎಂದರು.

ಸಮಾಜದ 3 ಮಂದಿ ಸಾಧಕರಾದ ಗಜೇಂದ್ರ ಆಚಾರ್ಯ ಅಂಕದಕಟ್ಟೆ, ಉದಯ ಆಚಾರ್ಯ ಕುಂದಾಪುರ ಅಶೋಕ ಆಚಾರ್ಯ ಕುಂದಾಪುರ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ, ಲೋಲಾಕ್ಷ ಶರ್ಮ, ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶಣೈ, ಗುರು ಸೇವಾಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ರಥ ಶಿಲ್ಪಿ ರಾಜಗೋಪಾಲ್ ಆಚಾರ್ಯ, ಭವಾನಿ ನಾರಾಯಣ ಆಚಾರ್ಯ, ತ್ರಾಸಿ ಸುಧಾಕರ ಆಚಾರ್ಯ, ಶ್ರೀಧರ್ ದಾಸ್‌ಜೀ, ಕುಂಭಾಶಿ, ಶ್ರೀಧರ ಆಚಾರ್ಯ ಬೀಜಾಡಿ, ರಮಾನಂದ ಆಚಾರ್ಯ, ರಾಘವೇಂದ್ರ ಆಚಾರ್ಯ ಕಾರವಾರ, ಉದಯ ಆಚಾರ್ಯ ಹುಚ್ಕೆರೆ ಸೇರಿದಂತೆ ಅನೇಕ ಗಣ್ಯರು, ದಾನಿಗಳು ಉಪಸ್ಥಿತರಿದ್ದರು.

ಲಕ್ಷ್ಮೀನಾರಾಯಣ ಆಚಾರ್ಯ ಪ್ರಾರ್ಥಿಸಿ, ಗುರುಸೇವಾ ಪರಿಷತ್‌ನ ಅಧ್ಯಕ್ಷ ಕೇಶವ ಆಚಾರ್ಯ ಕುಂಭಾಶಿ ಸ್ವಾಗತಿಸಿ, ನಾಗೇಂದ್ರ ಆಚಾರ್ಯ ನಿರೂಪಿಸಿ, ಶಶಿಧರ ಆಚಾರ್ಯ ಬಂಡಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!