spot_img
Wednesday, April 1, 2026
spot_img

‘ರಜಾರಂಗು’ ಶಿಬಿರದಲ್ಲಿ ಗಿಡ ನೆಟ್ಟು ಆನಂದ ಸಿ. ಕುಂದರ್ ಜನ್ಮ ದಿನಾಚರಣೆ

ತೆಕ್ಕಟ್ಟೆ: ಜೀವನ ಪಾಠ ಹೇಳುವ ಮೂಲಕ ಮೌಲಿಕ ಶಿಕ್ಷಣವನ್ನು ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಡೆಯಲು ಯಶಸ್ವೀ ಕಲಾವೃಂದ ಹಲವಾರು ವರ್ಷಗಳಿಂದ ರಜಾರಂಗು ಶಿಬಿರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಬೇಸಿಗೆ ರಜೆಯಲ್ಲಿ ಮೊಬೈಲ್ ಅಂತರ್ಜಾಲದ ಪ್ರಭಾವಕ್ಕೆ ಒಳಗಾಗುತ್ತಿರುವುದು ಪೋಷಕರಿಗೂ ಆತಂಕಕಾರಿ ವಿಷಯ. ಹಾಗಾಗಿ ಇಂತಹ ಶಿಬಿರಗಳು ಮಕ್ಕಳಿಗೆ ಬದುಕಿನ ನೀತಿ ಪಾಠ ಹೇಳಿಕೊಡುವ ಕಾರ್ಯ ಶ್ರೇಷ್ಠವಾದುದು ಎಂದು ಜನತಾ ಫಿಶ್‌ನ ಜನರಲ್ ಮ್ಯಾನೇಜರ್ ಶ್ರೀನಿವಾಸ ಕುಂದರ್ ಮಕ್ಕಳು ಗಿಡನಡುವ ಕಾರ್ಯದಲ್ಲಿ ಕೈ ಜೋಡಿಸಿ ಮಾತನ್ನಾಡಿದರು.

ತೆಕ್ಕಟ್ಟೆ ಸೇವಾಸಂಗಮದ ನಿಸರ್ಗದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ಧಮನಿ ಟ್ರಸ್ಟ್, ಶ್ರೀ ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರಜಾರಂಗು 15ನೇ ದಿನದ ಬೇಸಿಗೆ ಶಿಬಿರವನ್ನು ಏಪ್ರಿಲ್ ೨೫ರಂದು ಆನಂದ ಸಿ. ಕುಂದರ್‌ರವರ 77ನೇ ಜನ್ಮ ದಿನಾಚರಣೆಯನ್ನು ಮಕ್ಕಳಿಂದ ಗಿಡ ನೆಡಿಸುವ ಮೂಲಕ ಶ್ರೀನಿವಾಸ್ ಕುಂದರ್ ಸಂಪನ್ನಗೊಳಿಸಿದರು.

ಸಭೆಯಲ್ಲಿ ಹೆರಿಯ ಮಾಸ್ಟರ್, ರಂಜಿತ್ ಶೆಟ್ಟಿ ಕುಕ್ಕುಡೆ, ಶಿಬಿರಾರ್ಥಿ ಪ್ರಣಮ್ಯ ಉಪಸ್ಥಿತರಿದ್ದರು. ಪವನ್ ಆಚಾರ್ ಸ್ವಾಗತಿಸಿ, ಸಂಕೇತ್ ಪೂಜಾರಿ ಪರಿಚಯ ಹೇಳಿ, ರಚಿತ್ ಶೆಟ್ಟಿ ವರದಿ ವಾಚಿಸಿ, ಪೂರ್ವಿ ವಂದಿಸಿದರು. ಆರಭಿ ಸಾಮಗ ಅತಿಥಿಗಳನ್ನು ಪರಿಚಯಿಸಿದರೆ, ಹರ್ಷಿತಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ತದನಂತರ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪರಿಸರದ ಕಾಳಜಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!