spot_img
Monday, March 16, 2026
spot_img

ಮನೆಗೆ ಮಂಜುನಾಥ್‌ ರಾವ್‌ ಪಾರ್ಥೀವ ಶರೀರ | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಜನಪ್ರತಿನಿಧಿ (ಶಿವಮೊಗ್ಗ) : ಕಾಶ್ಮೀದ ಪಹಲ್ಗಾಮ್‌ ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಮಂಜುನಾಥ್‌ ರಾವ್‌ ಪಾರ್ಥೀವ ಶರೀರ ಶಿವಮೊಗ್ಗದ ವಿಜಯ ನಗರ ಬಡಾವಣೆಯ ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಪಾರ್ಥೀವ ಶರೀರ ಶಿವಮೊಗ್ಗದ ಎಂ ಆರ್‌ ಎಸ್‌ ವೃತ್ತಕ್ಕೆ ಬರುತ್ತಿದ್ದಂತೆಯೆ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬೈಕ್‌ ರ್ಯಾಲಿ ಮೂಲಕ ಬರ ಮಾಡಿಕೊಂಡರು.

ʼಭಾರತ ಮಾತೆಗೆ ಹೂ ಹಾಕಿ, ಪಾಕಿಸ್ತಾನಕ್ಕೆ ಬಾಂಬ್‌ ಹಾಕಿʼ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಸಿಬಿಯ ಮುಂಭಾಗದಲ್ಲಿ ಉಗ್ರರ ಪ್ರತಿಕೃತಿ ತೂಗು ಹಾಕಿ ರ್ಯಾಲಿ ನಡೆಸಿ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.

ಬಿ.ಎಸ್‌ ರಸ್ತೆಯ ಮೂಲಕ ಸಾಗಿದ ಅಂಬುಲೆನ್ಸ್‌ ಮೂಲಕ ಸಾಗಿ ಬೆಕ್ಕಿನಕಲ್ಮಠ, ಮೀನಾಕ್ಷಿ ಭವನ, ಅಮೀರ್‌ ಅಹ್ಮದ್‌ ವೃತ್ತ ಮೂಲಕ ಮುಖ್ಯ ಬಸ್‌ ನಿಲ್ದಾಣದಿಂದ ಸಾಗರ ರಸ್ತೆಯ ಸರ್ಕಿಟ್‌ ಹೌಸ್‌, ಆಯನೂರು ಗೇಟ್‌ ಮೂಲಕ ವಿಜಯ ನಗರ ಬಡಾವಣೆಯ ನೇತಾಜಿ ವೃತ್ತ ಸಮೀಪದ ಮನೆಗೆ ಪಾರ್ಥೀವ ಶರೀರ ತಲುಪಿತು.

ದಾರಿ ಉದ್ದಕ್ಕೂ ಸಾವಿರಾರು ಮಂದಿ ಸೇರಿದ್ದರು. ಮಂಜುನಾಥ್‌ ರಾವ್‌ ನಿಧನಕ್ಕೆ ಕಂಬನಿ ಮಿಡಿದರು. ನಗರದಾದ್ಯಂತ ಅಂಗಡಿ – ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು. ಮೃತ ಮಂಜನಾಥ್‌ ಮನೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!