spot_img
Saturday, March 21, 2026
spot_img

ಸಮಾಜದ ನೋವಿಗೆ ಸ್ಪಂದಿಸುವ ನಿಸ್ವಾರ್ಥ ಸೇವಾ ಟ್ರಸ್ಟ್ ಕಾರ್ಯ ಪ್ರಶಂಸನಾರ್ಹ-ರವೀಂದ್ರ ಕೋಟ

ಕೋಟ: ನಿಸ್ವಾರ್ಥ ಸೇವಾ ಟ್ರಸ್ಟ್ ಹೆಸರಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ, ಸಮಾಜದ ಬಡ ಹಾಗೂ ಅನಾರೋಗ್ಯ ಪೀಡಿತರ ನೆರವಿಗೆ ಧಾವಿಸುವ ಜೊತೆಗೆ ಯಾವುದೇ ಪ್ರಚಾರದ ಗೀಳು ಇಲ್ಲದೆ ಪ್ರತಿ ತಿಂಗಳು ಸಹಾಯದ ನೆರವು ನೀಡುತ್ತಿದ್ದಾರೆ ಇದೊಂದು ಶ್ರೇಷ್ಠವಾದ ಮಹತ್ಕಾರ್ಯವಾಗಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಪ್ರಶಂಸನೀಯ ಮಾತುಗನ್ನಾಡಿದರು.

ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ತಿಂಗಳ ಸರಣಿ ಸಹಾಯಹಸ್ತ ಯೋಜನೆಯಡಿ ಕೋಟದಲ್ಲಿ ವಾಸ್ತವ್ಯವಿರುವ ಬಡ ಕುಟುಂಬದ ವಿಜಯಲಕ್ಷ್ಮೀ ಶಾಸ್ತ್ರಿ ಇವರಿಗೆ ದಿನಸಿ ಪರಿಕರ ಹಸ್ತಾಂತರಿಸಿ ಮಾತನಾಡಿ ಅಶಕ್ತರಿಗೆ,ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯ ಭಗವಂತನಿಗೆ ಅತಿ ಹತ್ತಿರವಾದ ಕಾರ್ಯವಾಗಿದೆ ಈ ದಿಸೆಯಲ್ಲಿ ನಿಸ್ವಾರ್ಥ ಸೇವಾ ಟ್ರಸ್ಟ್ ನಂತೆ ಒಂದಿಷ್ಟು ಒಂದಿಷ್ಟು ಸಂಘಟನೆಗಳು ಕಾರ್ಯಾಚರಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಮಾಜಸೇವಕಿ ಸವಿತಾ ವೆಂಕಟೇಶ ಉಡುಪ,ನಿಸ್ವಾರ್ಥ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕೋಟ,ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೋಟ, ಟ್ರಸ್ಟ್ ಪ್ರಮುಖರಾದ ಗೋಪಿನಾಥ್ ಕಿಣಿ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!