spot_img
Thursday, March 19, 2026
spot_img

ಗಂಗೊಳ್ಳಿ ಡಾ. ಬಿ.ಆರ್ ಅಂಬೇಡ್ಕರ್ ಯುವಕ ಮಂಡಲದ 38ನೇ ವಾರ್ಷಿಕೋತ್ಸವ

ಗಂಗೊಳ್ಳಿಯ ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಲ ಇದರ 38ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಇವುಗಳ 32ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು.
 ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ವಹಿಸಿದ್ದರು.
ಮುಖ್ಯ ಅತಿಥಿ ಕುಂದಾಪುರ ಆದರ್ಶ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾಕ್ಟರ್ ಆದರ್ಶ ಹೆಬ್ಬಾರ್ ಅವರು ಮಾತನಾಡಿ ಎಲ್ಲಾ ಅನುಕೂಲಗಳ ಜೊತೆ ಜೊತೆಗೆ ಸಾಧನೆಗೈಯುವುದಕ್ಕಿಂತ ಬಡತನವನ್ನು ಮೆಟ್ಟಿನಿಂತು ಕಷ್ಟಗಳನ್ನು ಎದುರಿಸಿ ಸಾಧಿಸಿ ತೋರಿಸುವುದೇ ನಿಜವಾದ ಗೆಲುವು. ಎಂದು ಹೇಳಿ ಸಂಘದ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ಉಡುಪಿ ನಗರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಜಯಕರ್ ಐರೋಡಿ ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ ವಿನಾಯಕ ಪೈ ಅವರು ಶುಭ ಹಾರೈಸಿದರು.
 ಈ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿ ಪಿ ಶೇಷು , ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ರಾಜು ಎನ್ ಮಾಸ್ತರ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ  ಕುಮಾರ ಹಿಮೇಶ್ ಇವರನ್ನು ಸನ್ಮಾನಿಸಲಾಯಿತು.
 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಗದು ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು. 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಒಂಬತ್ತನೇ ರಾಂಕ್ ಪಡೆದ ನೆಹ ಎಸ್ ಕೊಡೇರಿ ಅವರಿಗೆ ದಾನಿಗಳು ಕೂಡ ಮಾಡಿದ 5000 ನಗದು ಬಹುಮಾನವನ್ನು ನೀಡಲಾಯಿತು.
 ಈ ಸಂದರ್ಭದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಸಹನಾ ಕೆ  ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.
 ಯುವಕ  ಮಂಡಲದ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್‌. ಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವತಿ ಮಂಡಲದ ಕಾರ್ಯದರ್ಶಿ ಸರಸ್ವತಿ ವರದಿ ವಾಚಿಸಿದರು. ರಿತೇಶ ಮತ್ತು ಸುಲೋಚನ  ಬಹುಮಾನಿತರ ಪಟ್ಟಿ ಓದಿದರು. ಯುವಕ ಮಂಡಲದ ಕಾರ್ಯದರ್ಶಿ ರಂಜಿತ  ವಂದಿಸಿದರು ಸಭಾ ಕಾರ್ಯಕ್ರಮದ ಬಳಿಕ ಕಲಾ ಕುಂಭ  ಕುಳಾಯಿ, ಮಂಗಳೂರು ಇವರಿಂದ ‘ಪರಮಾತ್ಮ ಪಂಜುರ್ಲಿ’ ನಾಟಕ ಪ್ರದರ್ಶನ ನಡೆಯಿತು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!