spot_img
Thursday, April 2, 2026
spot_img

ಮೇ 2ಕ್ಕೇ ಬಸ್ರೂರಿನಲ್ಲಿ ಎಮ್.ಎನ್.ಶೆಟ್ಟಿ ಹಾಲ್ ಉದ್ಘಾಟನೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಬಸ್ರೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್ ಮೇ 1 ಗುರುವಾರ ಶುಭಾರಂಭಗೊಳ್ಳಲಿದೆ. ಮೇ.2ರಂದು ಬೆಳಿಗ್ಗೆ 6.30ರಿಂದ 10-30ರ ತನಕ ಲಕ್ಷ್ಮೀನರಸಿಂಹ ಹೋಮ, ಗಣಹೋಮ, ಸತ್ಯನಾರಾಯಣ ಪೂಜಾ, ಧ್ವಾರಲಕ್ಷ್ಮೀ ಪೂಜಾ, ವಾಣಿಜ್ಯ ಸಂಕೀರ್ಣ ಪ್ರವೇಶ, ಮಧ್ಯಾಹ್ನ 12.30ಕ್ಕೆ ಭೋಜನಕೂಟ ನಡೆಯಲಿದೆ.

ಪೂರ್ವಾಹ್ನ 11.21ಕ್ಕೆ ಎಮ್.ಎನ್.ಶೆಟ್ಟಿ ಹಾಲ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ ಎಮ್.ಎನ್.ಶೆಟ್ಟಿ ಹಾಲ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾಬು ಹೆಗ್ಡೆ, ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಳೂರು ದಿನಕರ ಶೆಟ್ಟಿ, ಬಸ್ರೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರ ಬಿಲ್ಲವ, ಸಿವಿಲ್ ಇಂಜಿನಿಯರ್ ಬಿ.ಗಣೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀಮತಿ ಮತ್ತು ಶ್ರೀ ನಾಗರಾಜ ಶೆಟ್ಟಿ ಕೈಲಾಡಿ ಮೇಲ್ಮನೆ ಚಿತ್ತೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಮ್.ಎನ್.ಶೆಟ್ಟಿ ಹಾಲ್ ವಿಶೇಷತೆ:
ಬಸ್ರೂರು ಭಾಗಕ್ಕೆ ಅತ್ಯಂತ ಅಗತ್ಯವಾಗಿದ್ದ ಸುಸಜ್ಜಿತ ಸಭಾಂಗಣ ನಿರ್ಮಾಣವಾಗಿದೆ. ಮದುವೆ, ಅರತಕ್ಷತೆ, ಇತ್ಯಾದಿ ಶುಭಸಮಾರಂಭಗಳಿಗೆ ಅತ್ಯಂತ ಪ್ರಶಸ್ತವಾದ ಸಭಾಂಗಣ ಇದಾಗಿದ್ದು, ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡಿದೆ. ಈ ಹಾಲ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. 600 ಆಸನಗಳ ವ್ಯವಸ್ಥೆ ಯನ್ನು ಹೊಂದಿದೆ. ಲಿಪ್ಟ್ ಸೌಲಭ್ಯ ಇದೆ. ಹಾಲ್ ನಲ್ಲಿ ಕ್ಯಾಟರಿಂಗ್ ಸೌಲಭ್ಯ, ಹಾಗೂ ತಮ್ಮದೇ ಕ್ಯಾಟರಿಂಗ್ ವ್ಯವಸ್ಥೆಗೂ ಅವಕಾಶ ನೀಡಲಾಗಿದೆ. ಸಂಪೂರ್ಣ ಸಿ.ಸಿ ಕ್ಯಾಮರಾದ ಕಣ್ಗಾವಲು, ವಿಶಾಲವಾದ ವಾಹನದ ನಿಲುಗಡೆಗೆ ಸ್ಥಳಾವಕಾಶ ಇದೆ. ತೀರಾ ಬಡತನದಲ್ಲಿರುವವರಿಗೆ ಶೇ.೧೫ರಷ್ಟು ರಿಯಾಯತಿ ವ್ಯವಸ್ಥೆ ಇದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!