spot_img
Wednesday, April 1, 2026
spot_img

ಮಂಗಳೂರು ವಿವಿ ಅಂತರ ಕಾಲೇಜು ಉಡುಪಿ ವಲಯ  ಕ್ರಿಕೆಟ್: ಆಳ್ವಾಸ್‌ಗೆ ಪ್ರಶಸ್ತಿ

ಮೂಡುಬಿದಿರೆ: ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಹಾಗೂ  ಮಂಗಳೂರು ವಿವಿ  ಜಂಟಿ ಆಶ್ರಯದಲ್ಲಿ  ನಡೆದ  ಮಂಗಳೂರು ವಿವಿ  ಅಂತರ್ ಕಾಲೇಜು  ಉಡುಪಿ ವಲಯ ಮಟ್ಟದ  ಕ್ರಿಕೆಟ್ ಪಂದ್ಯಾಟದಲ್ಲಿ  ಆಳ್ವಾಸ್ ಕಾಲೇಜಿನ ಕ್ರಿಕೆಟ್ ತಂಡವು ಜಯಶಾಲಿಯಾಯಿತು.

ಫೈನಲ್ ಪಂದ್ಯದಲ್ಲಿ ಕುಂದಾಪುರದ ಬಿಬಿ ಹೆಗ್ಡೆ ಕಾಲೇಜಿನ ತಂಡವನ್ನು  8 ವಿಕೆಟ್‌ಗಳ ಅಂತರದಿ0ದ ಗೆದ್ದು, ಶಿರ್ವ ಲೆಸ್ಲಿ ಡಿಸೋಜಾ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು  ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನ ತಂಡದ ವಿರುದ್ಧ 23 ರನ್‌ಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು.  ಆಳ್ವಾಸ್ ಕಾಲೇಜಿನ ಜಿಷ್ಣು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!