spot_img
Wednesday, April 1, 2026
spot_img

ಸಾಲಿಗ್ರಾಮ: ಮೂಡ್ಹೋಳಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ

ಸಾಲಿಗ್ರಾಮ: ಸುಮಾರು 800 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಸಾಲಿಗ್ರಾಮ ಕಾರ್ಕಡದ ಮೂಡ್ಹೋಳಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಏಪ್ರಿಲ್ 17ರಂದು ಸುಸಂಪನ್ನಗೊಂಡಿತು.

ಏ.15ರಂದು ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ವಿಧಿವಿಧಾನಗಳು ಆರಂಭವಾದವು. ಅಂದು ಬೆಳಿಗ್ಗೆ ಪುಣ್ಯಾಹ ವಾಚನ, ಗಣಯಾಗ, ಶ್ರೀ ನಾಗದೇವರಿಗೆ ನವಕ ಪ್ರಧಾನ, ಸಂಜೆ ಪುಣ್ಯಾಹ ವಾಚನ, ಸ್ಥಾನಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ಬಲಿದಾನ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಏ.16ರಂದು ಬೆಳಿಗ್ಗೆ ಪ್ರಾಯಶ್ಚಿತ ಹೋಮ, ತತ್ವಕಲಶ ಸ್ಥಾಪನೆ, ತತ್ವಹೋಮ, ಕಲಶಾಭಿಷೇಕ, ಚಂಡಿಕಾ ಯಾಗ, ಸಂಜೆ ಅಷ್ಟೋತ್ತರ ಶತಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಯಕ್ಷೆ ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ನವಕ ಪ್ರಧಾನ ಕಲಶಾಭಿಷೇಕ ನಡೆಯಿತು.

ಏ.17 ಗುರುವಾರ ಬೆಳಿಗ್ಗೆ ಅಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ವೇ.ಮೂ. ಕೆ.ರತ್ನಾಕರ ಸೋಮಯಾಜಿ ಮತ್ತು ವೇ.ಮೂ.ಕೆ.ಸುದರ್ಶನ್ ಐತಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಪರಾಹ್ನ ಶ್ರೀಮತಿ ಶಾಲಿನಿ ರಮೇಶ ನಕ್ಷತ್ರಿ ಹಾಗೂ ಕೆ.ಅಚ್ಯುತ ಪೂಜಾರಿ ಮತ್ತು ಬಳಗದವರಿಂದ ಭಕ್ತಿಸಂಗೀತ ಸುಧೆ ಜರುಗಿತು. ಸಂಜೆ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ಸಂಯೋಜನೆಯಲ್ಲಿ ‘ಕವಿರತ್ನ ಕಾಳಿದಾಸ’ ಪ್ರಸಂಗ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ.ಆನಂದರಾಮ ಮಧ್ಯಸ್ಥರು, ಕೋಶಾಧಿಕಾರಿ ಲಕ್ಷ್ಮಣ ನಕ್ಷತ್ರಿ, ಅರ್ಚಕರಾದ ಗಣೇಶ ಸೋಮಯಾಜಿ, ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!