spot_img
Sunday, February 15, 2026
spot_img

ಶಂಕರನಾರಾಯಣ ಮೆಸ್ಕಾಂ ಜನ ಸಂಪರ್ಕ ಸಭೆ| ಗ್ರಾಹಕರ ದೂರಿಗೆ ಇಲಾಖೆ ಸ್ಪಂದನೆ: ಶಂಕರನಾರಾಯಣ ಸೆಕ್ಷೆನ್ ಕಚೇರಿಗೆ ಅಸ್ತು

ಶಂಕರನಾರಾಯಣ : ಶಂಕರನಾರಾಯಣ ವಿದ್ಯುತ್ ಉಪ-ವಿಭಾಗದ ಮೆಸ್ಕಾಂ ಜನ ಸಂಪರ್ಕ ಸಭೆ ವಿದ್ಯುತ್ ಉಪ ವಿಭಾಗ ಕಚೇರಿಯಲ್ಲಿ ಏ.16ರಂದು ಜರಗಿತು.

ಗ್ರಾಹಕರ ಪರವಾಗಿ ಸಾಮಾಜಿಕ ಹೋರಾಟಗಾರ ಹಾಗು ಶಂಕರನಾರಾಯಣ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ್ ಹೆಗ್ಡೆ ಅವೈಜ್ಞಾನಿಕವಾಗಿ ೭೪ನೇ ಉಳ್ಳೂರು ಗ್ರಾಮದ ಹಳನೀರು ಕೋಡ್ಲು, ಹೊಸಬಾಳು, ಕಾರೆಬೈಲು – ಜಡ್ಡು ಎಂಬಲ್ಲಿ ಸುಮಾರು ಹತ್ತು ಟಿ.ಸಿಗಳನ್ನು ಸಿದ್ದಾಪುರ ಸೆಕ್ಷನ್ ಕಚೇರಿ ಸಮೀಪ ಇದ್ದರೂ ಅಂಪಾರು ಸೆಕ್ಷನ್ ಕಚೇರಿ ವ್ಯಾಪ್ತಿಗೆ ಸೇರಿಸಿದ್ದು ಈದರಿಂದ ಸಿಬ್ಬಂದಿಗಳಿಗೆ ಗ್ರಾಹಕರ ತುರ್ತು ಸ್ಪಂದನೆಗೆ ಗಮನ ಹರಿಸಲು ಆಗುವುದಿಲ್ಲ, ಈ ಟಿಸಿ ಗಳನ್ನು ಈ ಹಿಂದಿನಂತೆ ಸಿದ್ದಾಪುರ ಸೆಕ್ಷನ್ ಕಚೇರಿ ವ್ಯಾಪ್ತಿಗೆ ಸೇರಿಸಿ ಗ್ರಾಹಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ತಿಳಿಸಿದರು. ಜನ ಸಂಪರ್ಕ ಸಭೆಯಲ್ಲಿ ಹಾಜರಿದ್ದ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನ ಹರಿಸಿ ಆಂಪಾರು ಸೆಕ್ಷನ್ ಕಚೇರಿಯಿಂದ ಸಿದ್ದಾಪುರ ಸೆಕ್ಷನ್ ಗೆ ಬದಲಾಯಿಸಲು ಗಮನ ಹರಿಸಲಾಗುವೆಂದು ತಿಳಿಸಿದರು.

ಶಂಕರನಾರಾಯಣ ಉಪ ವಿಭಾಗ ಆರಂಭಗೊಂಡು ಎಂಟರಿಂದ ಹತ್ತು ವರ್ಷವಾದರೂ ಹೆಡ್ ಕ್ವಾರ್ಟರ್ ಸೆಕ್ಷನ್ ಕಚೇರಿ ಇನ್ನೂ ಬಂದಿಲ್ಲ ಏಕೆ ಎಂದು ಚಿಟ್ಟೆ ರಾಜಗೋಪಾಲ್ ಹೆಗ್ಡೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಶಂಕರನಾರಾಯಣ ಕೊಲ್ಲೂರು ರಸ್ತೆಯಲ್ಲಿ ಮೆಸ್ಕಾಂ ಉಪ ವಿಭಾಗಕ್ಕೆ ಹತ್ತು ಸೆಂಟ್ಸ್ ಜಾಗ ಸರಕಾರದಿಂದ ಮಂಜೂರು ಆಗಿದ್ದು ಇದರಲ್ಲಿ ಕೂಡಲೇ ಮೆಸ್ಕಾಂ ಉಪ ವಿಭಾಗ ಕಚೇರಿ ಹಾಗು ನೂತನ ಹೆಡ್ ಕ್ವಾರ್ಟರ್ ಸೆಕ್ಷನ್ ಕಚೇರಿ ಜೊತೆಗೆ ತೆರೆಯಲಾಗಿದೆಂದು ತಿಳಿಸಿದರು.

ಗ್ರಾಹಕರ ಜನ ಸಂಪರ್ಕ ಸಭೆಯಲ್ಲಿ ಮೆಸ್ಕಾಂ ಉಡುಪಿ ಅಧೀಕ್ಷಕ ದಿನೇಶ ಉಪಾಧ್ಯಾಯ ಕುಂದಾಪುರ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಹಾಗು ಶಂಕರನಾರಾಯಣ ಉಪ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್ ಭಟ್ ಹಾಗು ವ್ಯಾಪ್ತಿಯ ಐದು ಸೆಕ್ಷನ್ ಆಫೀಸ್ ಜೂನಿಯರ್ ಇಂಜಿನಿಯರ್ ಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!