spot_img
Thursday, April 2, 2026
spot_img

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ : ಅಂಗಡಿ ಕೋಣೆ ಏಲಂ, ಸ್ಮಶಾನ ನಿರ್ವಹಣೆ ಬಗ್ಗೆ ಚರ್ಚೆ

ಜನಪ್ರತಿನಿಧಿ (ಬ್ರಹ್ಮಾವರ) : ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ನಿನ್ನೆ (ಬುಧವಾರ) ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಅಂಗಡಿ ಕೋಣೆಗಳ ಮಾಸಿಕ ಬಾಡಿಗೆ ಆಧಾರದಲ್ಲಿ ನಡೆಸುವ ಅವಧಿ ಮುಗಿದಿದ್ದು, ಮುಂದಿನ ೧೨ ವರ್ಷದ ಅವಧಿಗೆ ಬಹಿರಂಗ ಏಲಂ ಬಗ್ಗೆ ಚರ್ಚೆ ಆರಂಭವಾದಾಗ ಆಡಳಿತ ಪಕ್ಷ ಬಿಜೆಪಿಯ ಸದಸ್ಯ ಶ್ಯಾಮಸುಂದರ ನಾಯಿತಿ ಅವರು ಏಲಂ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ, ಪ್ರಸ್ತುತ ಏಲಂ ರದ್ದುಪಡಿಸಿ ಕೌನ್ಸೆಲರ್‌ ಸಮ್ಮುಖದಲ್ಲಿ ಮರು ಏಲಂ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.

ಈ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ರಾಜು ಪೂಜಾರಿ ಇಲ್ಲಿಯವರೆಗೆ ಮೂರು ಬಾರಿ ಅಂಗಡಿ ಕೋಣೆ ಬಾಡಿಗೆಗಾಗಿ ಏಲಂ ಕರೆಯಲಾಗಿದೆ. ಮತ್ತೆ ಪುನಃ ಕರೆಯಲು ಕಾನೂನಿನಲ್ಲಿ ಅವಕಾಶ ಇದೆಯೇ. ಕರೆಯುವುದಾದರೇ ನಿಯಮ ಪ್ರಕಾರ ಕರೆಯಿರಿ. ಪ್ರಸ್ತುತ ಎಂಟು ಸಾವಿರ ಬಾಡಿಗೆ ಬಾರದಿದ್ದವರು ನಾವೇ ಇನ್ನೂ ಹೆಚ್ಚಿನ ದರದಲ್ಲಿ ಬಾಡಿಗೆ ನಿಗದಿ ಮಾಡಿದರೆ ಜನ ಬರುತ್ತಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಸಂಜೀವ ದೇವಾಡಿಗ ಧ್ವನಿ ಸೇರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಅಜಯ್‌ ಭಂಡಾರ್‌ಕಾರ್‌, ಸರ್ಕಾರದ ನಿಯಮದಂತೆ ಶೇ.೨೫ ಕಡಿಮೆಗೊಳಿಸಿ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ಅಂಗದಿ ಕೋಣೆಯ ಏಲಂ ಪ್ರಕ್ರಿಯೆ ಮಾಡುವ ನಿರ್ಧಾರಕ್ಕೆ ಬರೋಣ ಎಂದು ಹೇಳಿದರು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಲ್ಲೆ ಭೂ ಪರಿವರ್ತನೆ ಸಂದರ್ಭ ಬಡವರಿಗೊಂಡು ಶ್ರೀಮಂತರಿಗೊಂದು ಕಾನೂನು ಮಾಡಬೇಡಿ. ಅವಕಾಶ ಇದ್ದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲರಿಗೂ ಒಂದೇ ನಿಯಮ ಪಾಲಿಸಿ ಎಂದು ಸದಸ್ಯ ರಾಜು ಪೂಜಾರಿ ಆಗ್ರಹಿಸಿದರು.

ಸದಸ್ಯೆ ರತ್ನಾ ನಾಗರಾಜ ಗಾಣಿಗ ಸಾಲಿಗ್ರಾ, ಪ್ರಾಣಿ ಸಂಗ್ರಹಾಲಯಕ್ಕೆ ಪದೇ ಪದೇ ನೋಟೀಸು ನೀಡುವ ಅಗತ್ಯತೆ ಬಗ್ಗೆ, ಪುನೀತ್‌ ಅವರು ಸ್ಮಶಾನಗಳ ಅಭಿವೃದ್ಧಿಗೆ ಬಳಸುವ ಅನುದಾನ ಬಗ್ಗೆ ಚರ್ಚಿಸಿದರು. ಉಪಾಧ್ಯಕ್ಷೆ ಗಿರಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಸೂಯ ಆನಂದರಾಮ ಹೇಳರೆ ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!