spot_img
Tuesday, March 17, 2026
spot_img

ಏ.21: ಅಂಪಾರು ಮೂಡಸ್ಥಾನ ಹಾಗೂ ಎಕ್ರಬೆಟ್ಟು ಹಾರ್ಮಣ್ಣು ಹೈಗುಳಿ ಶ್ರೀ ನಂದಿಕೇಶ್ವರ ಮತ್ತು ಸಪರಿವಾರ ದೈವಸ್ಥಾನ: ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಅಂಪಾರು ಮೂಡಸ್ಥಾನ ಹಾಗೂ ಎಕ್ರಬೆಟ್ಟು ಹಾರ್ಮಣ್ಣು ಹೈಗುಳಿ ಶ್ರೀ ನಂದಿಕೇಶ್ವರ ಮತ್ತು ಸಪರಿವಾರ ದೈವಗಳ ದೈವಸ್ಥಾನ, ಅಂಪಾರು ಎಕ್ರಬೆಟ್ಟು ದೈವಸ್ಥಾನದ ಗರ್ಭಗುಡಿಗೆ ನೂತನವಾಗಿ ತಾಮ್ರದ ಹೊದಿಕೆ ಮಾಡಲಾಗಿದ್ದು ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಸಮಾರಂಭ ಹಾಗೂ ಧಾರ್ಮಿಕ ಸಭೆ ಏಪ್ರಿಲ್ 21 ಸೋಮವಾರ ನಡೆಯಲಿದೆ.

ಅಂಪಾರು ಪಠೇಲರಮನೆ ದಿ.ಗುಲಾಬಿ ರಾಮಕೃಷ್ಣ ಶೆಟ್ರ ಮತ್ತು ನೆಂಪು ದಿ.ಸೀತಾರಾಮ ಶೆಟ್ರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ದೈವಸ್ಥಾನದ ಗರ್ಭಗುಡಿಗೆ ತಾಮ್ರದ ಹೊದಿಕೆಯ ಕೊಡುಗೆ ನೀಡಿದ್ದಾರೆ.

ದೈವಸ್ಥಾನದಲ್ಲಿ ಏ.20 ರವಿವಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಅಂದು ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಅಂದು ಸಂಜೆ ಸುಮೂಹೂರ್ತದಲ್ಲಿ ಹಾರ್ಮಣ್ಣು ಹೈಗುಳಿ, ನಂದಿಕೇಶ್ವರ ಮತ್ತು ಸಪರಿವಾರ ದೈವಗಳ ಪ್ರತಿಷ್ಠಾಪನೆ, ಜೀವ ಕುಂಭ ಸೇಚನ, ಕಲಶಾಭೀಷೇಕ, ಮಹಾಪೂಜೆ ನಡೆಯಲಿದೆ.

ಏ.21 ಪೂರ್ವಾಹ್ನ ಕಲಾತತ್ವ ಹೋಮ, ಅಷ್ಟೋತ್ತರ, ಶತಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಸ್ನಪನಾಧಿವಾಸ ಹೋಮ, ಕಲಶಾಭೀಷೇಕ ಶಿಖರ ಪ್ರತಿಷ್ಠೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ಕೆಂಡಸೇವೆ ಮತ್ತು ಢಕ್ಕೆಬಲಿ, ಹಾಗೂ ಧಾರ್ಮಿಕ ಸಭೆ ನಡೆಯಲಿದೆ.

ರಾತ್ರಿ 8.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹೈದರಬಾದ್ ಸುಪ್ರಭಾತ ಗ್ರೂಪ್ ಆಫ್ ಹೋಟೆಲ್ಸ್‍ನ ಮುಖ್ಯಸ್ಥರಾದ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಲಿದ್ದಾರೆ. ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಎ.ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ಉಡುಪರು ಗೌರವ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಗುವುದು. ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ರಾತ್ರಿ 10 ಗಂಟೆಯಿಂದ ಕೆಂಡಸೇವೆ ನಡೆಯಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ. ಏ.22 ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಮೂಡಸ್ಥಾನದಲ್ಲಿ ಢಕ್ಕೆಬಲಿ ಸೇವೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ನಂದಿಕೇಶ್ವರನ ಸನ್ನಿಧಿಯಲ್ಲಿ ಢಕ್ಕೆಬಲಿ ಸೇವೆ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಭಿಮಾನಿಗಳು, ನಂಬಿದ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೈವಸ್ಥಾನದ ಆಡಳಿತ ಮೊಕ್ತೇಸರಾದ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!