spot_img
Sunday, May 17, 2026
spot_img

ಕೋಟ: ಮೋಟರ್ ಸೈಕಲ್ ಡಿಕ್ಕಿ: ಪಾದಾಚಾರಿ ಮೃತ್ಯು

ಕೋಟ: ಬೈಕ್ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮೃತ ಪಟ್ಟ ಘಟನೆ ಕೋಟದ ಚಿತ್ರಪಾಡಿ ಪೆಟ್ರೋಲ್ ಬಂಕ್ ಹತ್ತಿರ ಏ.10ರಂದು ಸಂಜೆ ನಡೆದಿದೆ.

ಚಂದ್ರಶೇಖರ ಎಂಬುವವರು ಮೃತಪಟ್ಟ ದುರ್ದೈವಿ. ಚಂದ್ರಶೇಖರ ಅವರು ಉಡುಪಿ-ಕುಂದಾಪುರ ರಾ. ಹೆ. ೬೬ ರ ರಸ್ತೆಯ ಪಶ್ಚಿಮ ಬದಿಗೆ ಬೊಬ್ಬರ್ಯ ಕಟ್ಟೆ ಕಡೆ ನಡೆದುಕೊಂಡು ಬರುತ್ತಿದ್ದು ಮೋಟಾರ್ ಸೈಕಲ್ ಸವಾರ ಪ್ರಥ್ವೀಶ್ ಎಂಬುವವನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಪಶ್ಚಿಮ ಬದಿಗೆ ನಡೆದುಕೊಂಡು ಬರುತ್ತಿದ್ದ ಚಂದ್ರಶೇಖರ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ ರವರು ರಸ್ತೆಗೆ ಬಿದ್ದಿದ್ದು, ಮೋಟರ್ ಸೈಕಲ್ ಸವಾರರಿಬ್ಬರೂ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದರು. ಚಂದ್ರಶೇಖರ ರವರಿಗೆ ಹಣೆಗೆ ಹಾಗೂ ಎಡಬದಿ ಕಾಲು ಮೂಳೆ ಮುರಿತದ ತೀವ್ರ ತರದ ಗಾಯವಾಗಿದ್ದು ಮಾತನಾಡುತ್ತಿರಲಿಲ್ಲ. ಮೋಟರ್ ಸೈಕಲ್ ಸವಾರರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಮೂವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಂದ್ರಶೇಖರ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!