spot_img
Thursday, April 2, 2026
spot_img

ಕುಂದಾಪುರ: ಹುಂಚಾರ್ ಬೆಟ್ಟು ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕಾಗಿ ಪ್ರತಿಭಟನೆ

ಕುಂದಾಪುರ: ಅಭಿವೃದ್ಧಿ ವಿರುದ್ಧ ನಮ್ಮ ಹೋರಾಟ ಅಲ್ಲ ಶುದ್ಧೀಕರಣ ಘಟಕ ನಗರದ ಹಿತದೃಷ್ಟಿಯಿಂದ ಆಗಬೇಕು ಆದರೆ ಅದು ಜನ ವಾಸ ಮಾಡುವ ಸ್ಥಳದಿಂದ ದೂರ ಇರಬೇಕು. ಜನರ ಬದುಕು ಬಲಿಕೊಟ್ಟು ಅಭಿವೃದ್ಧಿ ಮಾಡುತ್ತೇವೆ ಎಂಬುವುದು ಮೂರ್ಖತನದ ಪರಮಾವಧಿ ಎಂದು ಹೋರಾಟಗಾರ ಸಮಿತಿ ಸಹ ಸಂಚಾಲಕ ಸುರೇಶ್ ಕಲ್ಲಾಗರ ಹೇಳಿದರು.

ಅವರು ಕುಂದಾಪುರ ಪುರಸಭೆ ಹುಂಚಾರ್ ಬೆಟ್ಟು ವಾರ್ಡ್ ಬೆಟ್ಟಾಗರದ ಜನವಸತಿ ಪ್ರದೇಶದಲ್ಲಿ ಮಾಡಲುದ್ದೇಶಿಸಿರುವ ನಗರದ ಕೊಳಚೆ ತ್ಯಾಜ್ಯ ಶುದ್ಧೀಕರಿಸಿ ವಿಸರ್ಜಿಸಲ್ಪಡುವ ಮುಖ್ಯ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ಪುರಸಭೆ ಎದುರು ನಡೆದ ಪ್ರತಿಭಟನೆಯಲ್ಲಿ ಸ್ಥಳೀಯರನ್ನು ದ್ದೇಶಿಸಿ ಮಾತನಾಡಿದರು.

ಉದ್ದೇಶಿತ ಸ್ಥಳದಲ್ಲಿ ನೂರಾರು ಕುಟುಂಬಗಳು ನೂರಾರು ವರ್ಷಗಳಿಂದ ಬದುಕು ಸಾಗಿಸುತ್ತಿದ್ದಾರೆ. ಅವರ ಮನೆಗಳ ಹತ್ತಿರದಲ್ಲೇ ಸ್ಥಳೀಯರ ವಿರೋಧದ ನಡುವೆಯೂ ಮುಖ್ಯ ಘಟಕ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವುದರ ಹಿಂದೆ ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂದು ಹೋರಾಟ ಸಮಿತಿ ಸಹ ಸಂಚಾಲಕ ಸುರೇಶ್ ಕಲ್ಲಾಗರ ಪ್ರಶ್ನೆ ಮಾಡಿದರು.

ನಿಜವಾಗಿಯೂ ಪುರಸಭೆಗೆ ಅಭಿವ್ರದ್ಧಿ ಬಗ್ಗೆ ಕಾಳಜಿ ಇದ್ದರೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿ ಹೆಚ್ಚುವರಿ ಹಣ ಮಂಜೂರು ಮಾಡಿಸಲು ಪ್ರಯತ್ನಿಸಲಿ ಅದು ಜನಪರ ಕೆಲಸ ಆಗುತ್ತದೆ ಈ ಹಿಂದೆಯೂ ಜನರು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನೆ ಮಾಡಿದಾಗ ರಾಜ್ಯ ಸರ್ಕಾರ ಹೆಚ್ಚುವರಿ ಹಣ ಕೊಡಲು ಒಪ್ಪಿತ್ತು ಅನಂತರ ಅದು ನೆನೆಗುದಿಗೆ ಬಿದ್ದಿತ್ತು ಈಗಲೂ ಅಂತಹ ಪ್ರಯತ್ನ ಮಾಡಿ ಸ್ಥಳೀಯ ಜನರನ್ನು ರಕ್ಷಿಸಲು ಪುರಸಭೆ ಮುಂದಾಗಬೇಕು. ಪುರಸಭೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡಬೇಕೆ ಹೊರತು ಪುರಸಭೆಯೇ ಜನರಿಗೆ ಸಮಸ್ಯೆ ಆಗಬಾರದು ಎಂದು ಹೇಳಿದರು.

ಸಮಿತಿ ಸಂಚಾಲಕ ರವಿ ವಿ ಎಂ ಮಾತನಾಡಿ, ಬೆಟ್ಟಾಗರದ ಸ್ಥಳೀಯರು ಶುದ್ಧೀಕರಣದ ಮುಖ್ಯ ಘಟಕವನ್ನು ೫೦೦ ಮೀಟರ್ ಮುಂದಕ್ಕೆ ಸ್ದಳಾಂತರಗೊಳಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಜನರನ್ನು ರಕ್ಷಿಸುವ ಕೆಲಸ ಮಾಡಿಲ್ಲ ಬದಲಾಗಿ ಅಲ್ಲಿಯೇ ಮಾಡುತ್ತೇವೆ ಎಂದು ತೀರ್ಮಾನ ಮಾಡಿರುವುದು ಒಪ್ಪಲು ಸಾಧ್ಯವಿಲ್ಲ ಹೋರಾಟ ತೀವ್ರ ಗೊಳಿಸಬೇಕಾಗಿದೆ ಎಂದರು.

ಸಹಸಂಚಾಲಕ ಮಹೇಂದ್ರ ಮಾತನಾಡಿ; ಪ್ರಜಾಪ್ರಭುತ್ವದಲ್ಲಿ ಅನ್ಯಾಯ ಆದಾಗ ಪ್ರತಿಭಟಿಸುವ ಹಕ್ಕು ಇದೆ ಅದೇ ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ಆಡಳಿತಗಾರರ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!