spot_img
Sunday, February 15, 2026
spot_img

ವೀರ ಚಂದ್ರಹಾಸ | ಯಕ್ಷಗಾನ ವಿಶ್ವಗಾನ ಆಗಬೇಕು ಎನ್ನುವುದೇ ನಮ್ಮ ಉದ್ದೇಶ : ರವಿ ಬಸ್ರೂರು

ಜನಪ್ರತಿನಿಧಿ (ಕುಂದಾಪುರ) : ಚಂದನವನದಲ್ಲಿ ಈಗ ಕೇಳಿಸುತ್ತಿರುವುದು ಒಂದೇ ಒಂದು ಸದ್ದು, ಅದು ʼವೀರ ಚಂದ್ರಹಾಸʼನದ್ದು. ಯಕ್ಷಗಾನ ಪ್ರಸಂಗವೊಂದು ಬೆಳ್ಳಿ ಪರದೆಯ ಮೇಲೆ ರಾರಾಜಿಸಲು ಅಂತಿಮ ಹಂತದ ತಯಾರಿಯಲ್ಲಿದ್ದು. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶಿಸಿರುವ ಈ ಚಲನ ಚಿತ್ರವು ಎ. 18 ರಂದು ಕರಾವಳಿಯು ಸೇರಿದಂತೆ ರಾಜ್ಯದ 60 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಯಕ್ಷಗಾನ ವಿಶ್ವಗಾನ ಆಗಬೇಕು ಎನ್ನುವುದೇ ನಮ್ಮ ಉದ್ದೇಶ. ಇದೊಂದು ಯಕ್ಷ ಸಿನೆಮಾ. ದಶಕಗಳ ಹಿಂದೆ ಯಕ್ಷಗಾನವೊಂದನ್ನು ಸಿನೆಮಾ ಮಾಡಬೇಕು ಎಂದು ಕನಸು ಕಂಡಿದ್ದೆ. ಈಗ ನನಸಾಗುತ್ತಿದೆ. ನಮ್ಮ ಪ್ರಾದೇಶಿಕತೆ ಜಗದಗಲ ವಿಸ್ತಾರ ಆಗಬೇಕು ಎನ್ನುವ ಸದುದ್ದೇಶದಿಂದ ಈ ಸಿನೆಮಾ ಮಾಡಿದ್ದೇವೆ. ಎಲ್ಲ ಕಲಾವಿದರು, ಭಾಗವತರು, ಹಿಮ್ಮೇಳ ಕಲಾವಿದರು, ತಂತ್ರಜ್ಞರೆಲ್ಲರ ಸಹಕಾರದಿಂದಾಗಿ ಸಿನೆಮಾ ಅದ್ಭುತವಾಗಿ ಮೂಡಿ ಬಂದಿದೆ. ಯಕ್ಷಗಾನಕ್ಕೆ ಎಲ್ಲಿಯೂ ಅಪಚಾರ ನಡೆದಿಲ್ಲ. ಯಕ್ಷಗಾನವನ್ನು ಇನ್ನೂ ಹೆಚ್ಚು ವೈಭವೀಕರಿಸಿ ತೋರಿಸುವ ಪ್ರಯತ್ನ ಈ ಸಿನೆಮದ ಮೂಲಕ ಮಾಡಿದ್ದೇವೆ ಎಂದು ರವಿ ಬಸ್ರೂರು ಹೇಳಿದರು.

ರವಿವಾರ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ಸಿನೆಮಾದಲ್ಲಿ ಕುಮಾರವ್ಯಾಸನ ಜೈಮಿನಿ ಭಾರತದ ಕಥೆಯನ್ನು ಆಧರಿಸಿಕೊಂಡಿದ್ದೇವೆ. ಸನ್ನಿವೇಶಕ್ಕೆ ತಕ್ಕಂತೆ 70 ಯಕ್ಷಗಾನ ಪದ್ಯವನ್ನು ಬಳಸಿಕೊಂಡಿದ್ದೇವೆ. ಯಕ್ಷಗಾನ ಪ್ರಸಂಗಕರ್ತ ಪ್ರಸಾದ್‌ ಮೊಗೆಬೆಟ್ಟು ಅವರು ಚೆಂದದ ಸಾಹಿತ್ಯ ರಚಿಸಿದ್ದಾರೆ. ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಧ್ವನಿ ಇದೆ. ಆಧುನಿಕ ಬೆಳಕು ಬಳಸದೇ ದೊಂದಿ ಬೆಳಕು ಹಾಗೂ ಪಂಜಿನ ಬೆಳಕಿನ ಮೂಲಕ ಇಡೀ ಸಿನೆಮಾ ತಯಾರಿಸಿದ್ದೇವೆ ಎಂದು ಅವರು ಹೇಳಿದರು.

ಸಿನೆಮಾಕ್ಕಾಗಿ 9 ಕೋ.ರೂ. ಬಜೆಟ್

ಐವರು ಭಾಗವತರು ಹಾಡಿದ್ದು, ಅದ್ಭುತ ಸಾಹಿತ್ಯವಿದೆ. ಸಿನೆಮಾಕ್ಕಾಗಿ ಏಕಕಾಲದಲ್ಲಿ 400 ರಿಂದ 500 ವೇಷಗಳನ್ನು ಬಳಸಿಕೊಳ್ಳಬೇಕಿತ್ತು. ಅದಕ್ಕಾಗಿ ಕಲಾ ವಿಭಾಗದವರು ಬಹಳಷ್ಟು ಶ್ರಮಿಸಿದ್ದಾರೆ. ಒಂದೇ ಕಡೆ ಸೆಟ್ ಹಾಕಿ, 35 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರ ಬಿಡುಗಡೆಗೆ ಹೊಂಬಾಳೆ ಫಿಲ್ಮ್‌ ನವರು ಸಹಕರಿಸಿದ್ದಾರೆ ಎಂದರು. ಚಿತ್ರಕ್ಕಾಗಿ 9 ಕೋ.ರೂ. ಬಜೆಟ್ ಆಗಿದೆ. ಮುಖ್ಯ ಪಾತ್ರಧಾರಿಗಳೆಲ್ಲರೂ ಯಕ್ಷಗಾನ ಕಲಾವಿದರೇ ಆಗಿದ್ದಾರೆ. ಯಕ್ಷಗಾನ ಕಲಾವಿದರಿಗೆ ಕುದುರೆ ಸವಾರಿ ತರಬೇತಿ ನಡೆಸಿದ ರಾಜರ ಕಾಲದ ಚಿತ್ರಣವನ್ನು ತೋರಿಸಲಾಗಿದೆ. ಯಕ್ಷಗಾನಕ್ಕೆ ಅಪಚಾರ ಎಸಗುವ ಕೆಲಸ ಮಾಡಿಲ್ಲ. ಎಲ್ಲರೂ ಭಕ್ತಿಯಿಂದಲೇ ಕೆಲಸ ಮಾಡಿದ್ದೇವೆ. ಡಾ. ಶಿವರಾಜ್‌ ಕುಮಾರ್‌ ಗೌರವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.  ಎಂದು ಅವರು ತಿಳಿಸಿದರು.

ಚಿತ್ರದ ನಟರಾದ ಶಿಥಿಲ್ ಶೆಟ್ಟಿ ಐರ್ಬೈಲ್, ಪ್ರಸನ್ನ ಶೆಟ್ಟಿಗಾ‌ರ್ ಮಂದಾರ್ತಿ, ನವೀನ್ ಶೆಟ್ಟಿ ಐರ್ಬೈಲ್, ಆಯೋಜಕ ನಾಗರಾಜ ಶೆಟ್ಟಿ ನೈಕಂಬ್ಲಿ, ಪ್ರಸಾದ್‌ ಮೊಗೆಬೆಟ್ಟು ಈ ಸಂದರ್ಭ ಉಪಸ್ಥಿತರಿದ್ದರು.

ಯಕ್ಷಗಾನ ಕಲಾವಿದರಿಗೆ ಸವಲತ್ತು ಸಿಗಲಿ
ಯಕ್ಷಗಾನ, ಕಲಾವಿದರಿಗೆ ಸಾಕಷ್ಟು ಸವಲತ್ತು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಈ ಸಿನೆಮಾ ಮಾಡಿರುವೆ. ಯಕ್ಷಗಾನ ಇಲ್ಲದ 6 ತಿಂಗಳು ಕಲಾವಿದರಿಗೆ ಸೂಕ್ತ ಸವಲುತ್ತು ಸಿಗುವಂತಾಗಬೇಕು. ಶಾಲಾ ಪಠ್ಯಗಳಲ್ಲಿ ಯಕ್ಷಗಾನ ಸೇರಿಸಬೇಕು. ಎಲ್ಲ ಶಾಲೆಗಳಲ್ಲಿ ಯಕ್ಷಗಾನದ ಕಲಿಕೆ ಆಗಬೇಕು. ಸರಕಾರಿ ಶಾಲೆಗಳ ಮಕ್ಕಳಿಗೆ ಈ ಸಿನೆಮಾ ತೋರಿಸಲು ಅವಕಾಶ ನೀಡಬೇಕು ಹಾಗೂ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂಬಿತ್ಯಾದಿ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವೆ. ಒಪ್ಪಿದ್ದಾರೆ.
-ರವಿ ಬಸ್ರೂರು
ಸಂಗೀತ ನಿರ್ದೇಶಕರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!