spot_img
Wednesday, April 1, 2026
spot_img

ಬಾರಕೂರು: ಜೈಲ್ ನಲ್ಲಿರುವ ಅಪರಾಧಿಗಳಿಂದ ಪೋನ್ ಮೂಲಕ ಜೀವ ಬೆದರಿಕೆ: ದೂರು ದಾಖಲು

ಕೋಟ: ಮರಳುಗಾರಿಕೆ ದಂಧೆಗೆ ಸಂಬಂಧಿಸಿದಂತೆ ಜೈಲ್‌ನಲ್ಲಿರುವ ಅಪರಾಧಿಗಳ ಮೂಲಕ ಬಾರಕೂರು ಹೊಸಾಳದ ಪ್ರವೀಣ್ ಅವರಿಗೆ ನಿರಂತರ ಜೀವ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಕಳೆದ ಪೆಬ್ರವರಿ ತಿಂಗಳಲ್ಲಿ ಮನೆಯಲ್ಲಿರುವಾಗ ಅಂದಾಜು ರಾತ್ರಿ 8.30ರ ಸಮಯದಲ್ಲಿ ಇವರ ಪೋನ್ ಗೆ ಕರೆ ಮಾಡಿ ನಾನು ಹರೀಶ್ ರೆಡ್ಡಿ ಕಾರವಾರ ಜೈಲಿನಿಂದ ಮಾತಾಡುತ್ತಿದ್ದೇನೆ. ನೀನು ಅರ್ಜುನ್ ನಾಯರಿ, ನಿತಿನ್ ರೈ, ಜೋಸೆಫ್ ರವರಿಗೆ ಮರಳುಗಾರಿಕೆ ಮತ್ತು ಮರಳು ಯಾರ್ಡ್ ಮಾಡುವಲ್ಲಿ ಸುಖಾ ಸುಮ್ಮನೆ ತೊಂದರೆ ನೀಡಿದಲ್ಲಿ ಸರಿ ಇರುವುದಿಲ್ಲ. ನೀನು ನಿನ್ನ ಕೆಲಸವನ್ನು ಮಾಡಿಕೊಂಡು ಹೋಗು ಊರು ಉದ್ಧಾರ ಮಾಡುವ ಹೊಸಬರಿ ನಿನಗೆ ಬೇಡ. ಹೀಗೆ ಅಧಿಕ ಪ್ರಸಂಗ ಮಾಡುತ್ತ ಇದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಿನಗೆ ಜೀವದ ಮೇಲೆ ಆಸೆ ಇದೆಯಾ ಇಲ್ಲವಾ ಎಂದು ಹೇಳಿ ಫೋನ್ ಕರೆಯನ್ನು ಡಿಸ್‌ಕನೆಕ್ಟ್ ಮಾಡಿದ್ದಾರೆ.

ಪ್ರವೀಣ್ ಅವರಿಗೆ ಮಾ.6 ರಂದು ಬೆಳಿಗ್ಗೆ ಪುನಃ ಪೋನ್ ಕಾಲ್ ಬಂದಿದೆ. ಮತ್ತೆ ಏಪ್ರಿಲ್ 2ರಂದು ರಾತ್ರಿ 8 ಗಂಟೆಗೆ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ನಮ್ಮವರ ಎಲ್ಲ ಕೆಲಸ ಸುಸೂತ್ರವಾಗಿ ನಡೆಯುತ್ತಿದೆಯಲ್ಲ ಅಂತ ಕೇಳಿರೋದು ಅಲ್ಲದೆ ಹರೀಶ್ ರೆಡ್ಡಿ ಹಾಗಿದ್ದರೆ ನಾವೆಲ್ಲ ಜೈಲಿನಿಂದ ನಿಮಗೆಲ್ಲ ಕರೆ ಮಾಡಿದರೆ ನಾವು ತೊಂದರೆಗೆ ಒಳಗಾಗುತ್ತೇವೆ ಎಂದು ಹೇಳಿ ಕರೆಯನ್ನು ಡಿಸ್ ಕನೆಕ್ಟ್ ಮಾಡಿದ್ದಾರೆ. ಅದೇ ದಿನ ರಾತ್ರಿ 8.22 ಕ್ಕೆ ಪೋನ್ ಕರೆ ಮಾಡಿದ್ದು ಅದನ್ನು ರೀಸಿವ್ ಮಾಡಿ ಇನ್ನು ಮುಂದಕ್ಕೆ ಕರೆ ಮಾಡಬೇಡಿ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪ್ರವೀಣ ಅವರಿಗೆ ಅರ್ಜುನ್ ನಾಯರಿ ನಿತಿನ್ ರೈ ಮತ್ತು ಜೋಸೆಫ್ ರವರು ಹಲವಾರು ವ್ಯಕ್ತಿಗಳಿಂದ ಕರೆ ಮಾಡಿಸಿ ಜೀವ ಬೆದರಿಕೆ ಹಾಕಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!