spot_img
Sunday, May 17, 2026
spot_img

ಕುಂದಾಪುರ : ಕೃಷಿ ತ್ಯಾಜ್ಯದ ಬೆಂಕಿಗೆ ಸಿಲುಕಿ ಕೃಷಿಕ ಸಜೀವ ದಹನ !

ಜನಪ್ರತಿನಿಧಿ (ಕುಂದಾಪುರ) : ಗದ್ದೆಯಲ್ಲಿ ಕೃಷಿ ತ್ಯಾಜ್ಯ (ಸುಡುಮಣ್ಣು)ಕ್ಕೆ ಬೆಂಕಿ ಹಾಕಿದ ಸಂದರ್ಭ ಬಿಸಿ ಮತ್ತು ಗಾಳಿಗೆ ಬೆಂಕಿ ಹಬ್ಬಿದ ಪರಿಣಾಮ ಗದ್ದೆಯಲ್ಲೇ ಇದ್ದ ರೈತನೋರ್ವ ಸಜೀವ ದಹನವಾಗಿ ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಇಂದು(ಶನಿವಾರ) ಮಧ್ಯಾಹ್ನ ನಡೆದಿದೆ‌.

ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಸಾವನ್ನಪ್ಪಿದ ಕೃಷಿಕ.

ಕೃಷಿ ಉದ್ದೇಶಕ್ಕಾಗಿ ತಮ್ಮ ಗದ್ದೆಯಲ್ಲಿ ಮಗಳು ಬೇಬಿಯೊಂದಿಗೆ ಮಹಾಲಿಂಗ‌ ದೇವಾಡಿಗ ಕೃಷಿ ತ್ಯಾಜ್ಯ (ಸುಡುಮಣ್ಣು)ಕ್ಕೆ ಬೆಂಕಿ ಹಾಕಿದ್ದರು. ಈ ಸಂದರ್ಭದಲ್ಲಿ ಬೆಂಕಿ ಸುತ್ತಲೂ ಆವರಿಸಿದ್ದು, ಹತ್ತಿರದಲ್ಲೇ ಇದ್ದ ನಾಗಬನಕ್ಕೂ ಬೆಂಕಿ ಹಬ್ಬುತ್ತಿದ್ದರಿಂದ ಎಚ್ಚೆತ್ತ ಮಹಾಲಿಂಗ ಅವರ ಪುತ್ರಿ ಕೂಡ ಕೂಡಲೇ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವ ಸಂದರ್ಭ ಇತ್ತ ಮಹಾಲಿಂಗ‌ ದೇವಾಡಿಗ ದೊಡ್ಡ ಬೆಂಕಿಯ ಕೆನ್ನಾಗಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕ‌ದಳದ ವಾಹನ ಸ್ಥಳಕ್ಕೆ ಬರಲು ರಸ್ತೆಯ ವ್ಯವಸ್ಥೆ ಇಲ್ಲದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಗಿದ್ದರಿಂದ ಮಹಾಲಿಂಗ ದೇವಾಡಿಗ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ.

ಸ್ಥಳಕ್ಕೆ ಕುಂದಾಪುರ ಗ್ರಾಮಂತರ ಠಾಣೆಯ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕದಳದವರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!