spot_img
Tuesday, March 17, 2026
spot_img

ವಕ್ಫ್ ತಿದ್ದುಪಡಿ ಮಸೂದೆ ಮಂಡನೆ : ಇದು “ಸಂವಿಧಾನದ ಮೇಲೆ 4D ದಾಳಿ” : ಕಾಂಗ್ರೆಸ್‌ ತೀವ್ರ ವಾಗ್ದಾಳಿ

ಜನಪ್ರತಿನಿಧಿ (ನವದೆಹಲಿ) : ಪ್ರತಿಪಕ್ಷಗಳ ತೀವ್ರ ಗದ್ದಲ ಹಾಗೂ ವಿರೋಧದ ನಡುವೆಯೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಇಂದು(ಬುಧವಾರ) ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸರ್ಕಾರವು “ಅಲ್ಪಸಂಖ್ಯಾತರನ್ನು ಅವಮಾನಿಸುತ್ತಿದೆ ಮತ್ತು ಅವರ ಹಕ್ಕುಗಳನ್ನು ಕಸಿದುಕೊಳ್ಳಲು” ಯತ್ನಿಸುತ್ತಿದೆ ಎಂದು ಗೊಗೊಯ್ ಗಂಭೀರ ಆರೋಪ ಮಾಡಿದರು. ಈ ಮಸೂದೆಯು ಸಂವಿಧಾನವನ್ನು ದುರ್ಬಲಗೊಳಿಸುವ, ಅಲ್ಪಸಂಖ್ಯಾತ ಸಮುದಾಯವನ್ನು ಅವಮಾನಿಸುವ, ಭಾರತೀಯ ಸಮಾಜವನ್ನು ವಿಭಜಿಸುವ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವ ಗುರಿ ಹೊಂದಿದೆ. ಇದು “ಸಂವಿಧಾನದ ಮೇಲೆ 4D ದಾಳಿ” ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ಈ ಉದ್ದೇಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಗೊಗೊಯ್, “ಇಂದು ಅವರು ಒಂದು ನಿರ್ದಿಷ್ಟ ಸಮುದಾಯದ ಭೂಮಿಯ ಮೇಲೆ ಕಣ್ಣಿಟ್ಟಿದ್ದಾರೆ; ನಾಳೆ, ಅವರು ಸಮಾಜದ ಇತರ ಅಲ್ಪಸಂಖ್ಯಾತರ ಭೂಮಿಯನ್ನು ಗುರಿಯಾಗಿಸಿಕೊಳ್ಳುತ್ತಾರೆ” ಎಂದು ಟೀಕಿಸಿದರು.

ಮಸೂದೆ ಕುರಿತ ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸಿ ಜಂಟಿ ಸಂಸದೀಯ ಸಮಿತಿಯಲ್ಲಿ(ಜೆಪಿಸಿ) ಚರ್ಚೆ ನಡೆದಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಸಮರ್ಥನೆಯನ್ನು ತಿರಸ್ಕರಿಸಿದ ಗೊಗೊಯ್ “ ನಿಮಯದ ಪ್ರಕಾರ ಚರ್ಚೆ ನಡೆದಿಲ್ಲ” ಎಂದು ಹೇಳಿದರು.

ವಿರೋಧ ಪಕ್ಷಗಳು ಸೂಚಿಸಿದ ಒಂದೇ ಒಂದು ತಿದ್ದುಪಡಿಯನ್ನು ಅಂಗೀಕರಿಸಿಲ್ಲ. ಅಭಿಪ್ರಾಯ ಸಂಗ್ರಹಿಸುವಾಗ ವಕ್ಫ್‌ ಬಗ್ಗೆ ಮಾಹಿತಿ ಇಲ್ಲದವರನ್ನು ಜೆಪಿಸಿಗೆ ಆಹ್ವಾನಿಸಲಾಗಿದೆ ಎಂದರು.

ಒಬ್ಬ ವ್ಯಕ್ತಿ ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಪಾಲಿಸಿದ್ದರೆ ಮಾತ್ರ ಆಸ್ತಿಯನ್ನು ವಕ್ಫ್‌ ಮಾಡಲು ಅವರು ಅರ್ಹರು ಎಂಬ ಸಚಿವ ರಿಜಿಜು ಹೇಳಿಕೆಯನ್ನು ಪ್ರಶ್ನಿಸಿದ ಗೊಗೊಯ್, “ಇತರ ಧರ್ಮಗಳ ಜನರಿಗೆ ನೀವು ಐದು ವರ್ಷಗಳಿಂದ ಧರ್ಮ ಪಾಲಿಸುತ್ತಿದ್ದೀರಾ? ಎಂದು ಸರ್ಕಾರ ಪ್ರಮಾಣ ಪತ್ರ ಕೇಳುತ್ತದಯೇ? ಹೀಗಿರುವಾಗ ಈ ಮಸೂದೆಯಲ್ಲಿ ಮಾತ್ರ ಈ ಮಾನದಂಡವನ್ನು ಅಳವಡಿಸಲಾಗಿದೆ. ಸರ್ಕಾರ ಧರ್ಮದ ವಿಚಾರದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಿದೆ ಎಂದು ಪ್ರಶ್ನಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!