spot_img
Wednesday, March 18, 2026
spot_img

ಪಡುಕರೆ ಶ್ರೀ ಉದ್ಬವಲಿಂಗೇಶ್ವರ ಭಜನಾ ಮಂದಿರ 39ನೇ ವರ್ಷದ ಭಜನಾ ಮಂಗಲೋತ್ಸವ

ಕೋಟ: ಕೋಟ ಮಣೂರು ಪಡುಕರೆ ಶ್ರೀ ಉದ್ಬವಲಿಂಗೇಶ್ವರ ಭಜನಾ ಮಂದಿರ 39ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಉದ್ಭವಲಿಂಗೇಶ್ವರ ವಠಾರದಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಭಜನೋತ್ಸವ ವೈಭವದಿಂದ ಜರಗಿತು.

ಮೊದಲ ದಿನ ಭಜನಾ ಮಂಗಲೋತ್ಸವ ಪ್ರಯುಕ್ತ ಭಜನಾ ಕಾರ್ಯಕ್ರಮವನ್ನು ಕೋಟದ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ ಸಿ ಕುಂದರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ೬ ಭಜನಾ ತಂಡಗಳು ಭಾಗವಹಿಸಿದವು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ನವೀನ ಕುಮಾರ್, ಗೌರವ ಅಧ್ಯಕ್ಷ ಹರೀಶ್ ಕುಮಾರ, ಕೋಟ ಮೆಸ್ಕಾಂನ ದಿನೇಶ ಪುತ್ರನ್ ವಿಠಲವಾಡಿ, ಭಜನಾ ಮಂದಿರದ ಪ್ರಮುಖರಾದ ಪ್ರಮೋದ್, ವಿಜಯ ವಿನಯ, ಚೈತ್ರ, ಯೊಗೇಶ ಉಪಸ್ಥಿತರಿದ್ದರು.

ಎರಡನೇಯ ದಿನ ಧಾರ್ಮಿಕ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ ಕೊಡ್ಗಿ ಶುಭ ಹಾರೈಸಿದರು.

ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಪ್ರವರ್ತಕರಾದ ವಸಂತ ಗಿಳಿಯಾರ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಕೊಲ್ಲೂರು ಠಾಣೆಯ ಪಿ‌ಎಸ್‌ಐ ಸುಧಾರಾಣಿ ಟಿ, ಅಭಯಹಸ್ತ ಟ್ರಸ್ಟ್ ಉಡುಪಿ ಇದರ ಅಧ್ಯಕ್ಷರಾದ ಸತೀಶ್ ಸಾಲಿಯಾನ್, ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಸೃಜನಾ ಎಸ್.ಪಿ ವಿಠಲವಾಡಿ, ಕ್ರೀಡಾ ವಿಭಾಗದಲ್ಲಿ ಕುಮಾರ್ ಮತ್ತು ತಂಡ ನಮ್ಮೂರ ಬೆಳಕು ಮೆಸ್ಕಾಂ ನೌಕರರು ಕೋಟ ಶಾಖೆ ಸನ್ಮಾನಿಸಲಾಯಿತು.
ನ್ಯಾಯವಾದಿ ಬಿ. ಎಸ್ ಕಾಳವರಕ್ಕರ್, ವಿದ್ವಾನ್ ದಾಮೋದರ್ ಶರ್ಮಾ ಉಪಸ್ಥಿತರಿದ್ದರು.

ಬಳಿಕ ಸ್ಥಳೀಯ ಮಕ್ಕಳಿಂದ ಮತ್ತು ಅರೆಹೊಳೆ ಪ್ರತಿಷ್ಠಾನ ಮಂಗಳೂರು, ಓಂಕಾರ್ ಕಲಾವಿದರು ಕನ್ನುಕೆರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!