spot_img
Monday, December 15, 2025
spot_img

ಬ್ರಹ್ಮಾವರ: ‘ಅನ್ನದಾತರ ಅಹೋರಾತ್ರಿ ಸತ್ಯಾಗ್ರಹ’ಕ್ಕೆ ವಕೀಲರ ಸಂಘದ ಬೆಂಬಲ

ಜನಪ್ರತಿನಿಧಿ ವಾರ್ತೆ] ಬ್ರಹ್ಮಾವರ: ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಯ ಬಳಿ ನಡೆಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಬಹುಕೋಟಿ ವಂಚನೆಯ ಮತ್ತು ಅದರ ತನಿಖೆಯಲ್ಲಿ ವಿಳಂಬವಾಗುತ್ತಿರುವುದರ ವಿರುದ್ಧ ಅನ್ನದಾತರ ನ್ಯಾಯಾಗ್ರಹ’ 29ನೇ ದಿನದ ಸತ್ಯಾಗ್ರಹಕ್ಕೆ ಕುಂದಾಪುರ ವಕೀಲರ ಸಂಘ ಬೆಂಬಲ ನೀಡಿದೆ.

ಹಿರಿಯ ನ್ಯಾಯವಾದಿ ಶ್ಯಾಮಲ ಭಂಡಾರಿ ಹಾಗೂ ಉಮೇಶ ಶೆಟ್ಟಿ ಶಾನ್ಕಟ್ಟು ಸತ್ಯಾಗ್ರಹನಿರತರನ್ನು ಉದ್ದೇಶಿಸಿ ಮಾತನಾಡಿದರು.

ಸತ್ಯಾಗ್ರಹದಲ್ಲಿ ವಕೀಲರಾದ ರಾಜಾರಾಮ ಶೆಟ್ಟಿ, ರಾಮಣ್ಣ ಶೆಟ್ಟಿ, ನಾಗೇಂದ್ರ ಪೈ, ಮಂಜುನಾಥ ಗಿಳಿಯಾರು, ಸೃಜನ್ ತೆಕ್ಕಟ್ಟೆ, ರಜನಿಕಾಂತ್, ಸಂತೋಷ್ ದೇವಾಡಿಗ, ಪ್ರಶಾಂತ್ ಶೆಟ್ಟಿ ಶಾಡಿಗುಂಡಿ ಮೊದಲಾದವರು ಉಪಸ್ಥಿತರಿದ್ದರು.

ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಸತ್ಯಾಗ್ರಹಕ್ಕೆ ಆಗಮಿಸಿದವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!