spot_img
Thursday, April 2, 2026
spot_img

ಮರವಂತೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಪಿಕ್ ಅಪ್ ಢಿಕ್ಕಿ: ಮಹಿಳೆ ಸಾವು

ಮರವಂತೆ: ಮರವಂತೆಯಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಮಾ.16 ರವಿವಾರ ನಡೆದಿದೆ.

ಯಳಜಿತ್ ಗ್ರಾಮದ ಬಾಬು ಅವರ ಪತ್ನಿ ಲಕ್ಷ್ಮೀ (45ವ) ಮಧ್ಯಾಹ್ನ 12:20 ಗಂಟೆಗೆ ಮರವಂತೆ ಗ್ರಾಮದ ಸೀ ಲ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ೬೬ ರ ಪಶ್ಚಿಮ ಬದಿಯ ಕೇಶವ ಬೊಬ್ಬರ್ಯ ದೇವಸ್ಥಾನದ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರುವಾಗ ಕುಂದಾಪುರ-ಬೈಂದೂರು ಕಡೆಯ ಏಕಮುಖ ರಸ್ತೆಯಲ್ಲಿ ಪಿಕ್ ಅಪ್ ವಾಹನವನ್ನು ಚಾಲಕ ವಿನಾಯಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಾದಚಾರಿ ಮಾರ್ಗಕ್ಕೆ ಬಂದು ಲಕ್ಷ್ಮೀ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಬೆನ್ನಿಗೆ, ಸೊಂಟಕ್ಕೆ ಹಾಗೂ ಎಡಕಾಲಿಗೆ ರಕ್ತ ಗಾಯವಾಗಿದ್ದು ಗಾಯಗೊಂಡಿದ್ದು ಕೂಡಲೇ ಚಿಕಿತ್ಸೆಯ ಬಗ್ಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರಿಕ್ಷೀಸಿದ ವೈಧ್ಯರು ಲಕ್ಷ್ಮೀ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!