spot_img
Thursday, April 2, 2026
spot_img

ಗಗನಯಾತ್ರಿ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ನಾಳೆ ಭೂಮಿಗೆ : ನಾಸಾ ಅಧಿಕೃತ ಮಾಹಿತಿ

ಜನಪ್ರತಿನಿಧಿ (ನವ ದೆಹಲಿ) : ನಾಸಾ ಗಗನಯಾತ್ರಿಗಳಾದ ಭಾರತ  ಮೂಲದ ಸುನಿತಾ ವಿಲಿಯಮ್ಸ್‌ ಹಾಗೂ ಅಮೇರಿಕಾದ ಬುಚ್‌ ವಿಲ್ಮೋರ್‌ ಅವರನ್ನು ಮಾರ್ಚ್‌ ೧೮ರಂದು (ಮಂಗಳವಾರ) ಅಮೇರಿಕಾದ ಸ್ಥಳೀಯ ಕಾಲಮಾನ ಸಂಜೆ ೫.೫೭ಕ್ಕೆ ಭೂಮಿಗೆ ಕರೆತರಲಿದ್ದೇವೆ ಎಂದು ನಾಸಾ ಅಧಿಕೃತವಾಗಿ ಮಾಹಿತಿ ನೀಡಿದೆ.

ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ಎಕ್ಸ್‌ ನಲ್ಲಿ ಈ ಸಂತಸದ ಸಂಗತಿಯ ಬಗ್ಗೆ ಮಾಹಿತಿ ನೀಡಿದ ನಾಸಾ, ನಮ್ಮ ಗಗನ ಯಾತ್ರಿಗಳು ಯಶಸ್ವಿಯಾಗಿ ಕರೆತರುವ ಕೆಲಸ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರಂಭವಾಗಲಿದೆ ಎಂದು ತಿಳಿಸಿದೆ.

ನಾಸಾ ಹಘೂ ಸ್ಪೇಸ್‌ ಎಕ್ಸ್‌ ನ ಅದ್ವುತ ಪ್ರಯತ್ನದಿಂದ ಕಳೆದ ಒಂಬತ್ತು ತಿಂಗಳಿಂದ ಐಎಸ್‌ಎಸ್‌ ನಲ್ಲಿ ಸಿಲುಕಿಕೊಂಡಿರುವ ಸುನಿತಾ ಹಾಗೂ ಬುಚ್‌ ಅವರು ಭೂಮಿಗೆ ವಾಪಾಸ್ಸಾಗುವುದು ಸನ್ನಿಹಿತವಾಗಿದೆ.

ಸುನಿತಾ ಹಾಗೂ ವಿಲ್ಮೋರ್‌ ಮಾತ್ರವಲ್ಲದೇ, ಐಎಸ್‌ಎಸ್‌ ನಲ್ಲಿರುವ ನಿಕ್‌ ಹೇಗ್‌ ಹಾಗೂ ಅಲೆಕ್ಸಾಂಡರ್‌ ಗೊರ್ಬನೋವ್‌ ಅವರೂ ಭೂಮಿಗೆ ವಾಪಾಸ್ಸಾಗುತ್ತಿದ್ದಾರೆ. ನಾಲ್ವರನ್ನು ಹೊತ್ತ ಗಗನನೌಕೆ ಫ್ಲಾರಿಡಾದ ಕಡಲ ತೀರಕ್ಕೆ ಬುಧವಾರ ಬಂದು ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸ್ಪೇಸ್‌ ಎಕ್ಸ್‌ ʼಫಾಲ್ಕನ್‌ ೯ʼ ರಾಕೇಟ್‌ ಮೂಲಕ ಕೆನಡಿ ಸ್ಪೇಸ್‌ ಸೆಂಟರ್‌ ನಿಂದ ಕಳೆದ ಶುಕ್ರವಾರ ರಾತ್ರಿ ೭.೦೩ಕ್ಕೆ ನಭಕ್ಕೆ ಚಿಮ್ಮಿದ್ದ ಡ್ರ್ಯಾಗನ್‌ ಹೆಸರಿನ ಗಗನನೌಕೆಯನ್ನು ಭಾನುವಾರ ಬೆಳಿಗ್ಗೆ ಐಎಸ್‌ಎಸ್‌ ಗೆ ಡಾಕಿಂಗ್‌ ಮಾಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!