spot_img
Tuesday, March 17, 2026
spot_img

ಮರೆಯುವುದುಂಟೆ ಸಂಭ್ರಮದ ಹೋಳಿ ಹುಣ್ಣಿಮೆ ಆಚರಣೆ?

ಅನೇಕ ಸಂಪ್ರದಾಯದ ಆಚರಣೆ ಭಾರತದ ಪುಣ್ಯ ನೆಲದಲ್ಲಿ ಬಹಳ ಸಂಭ್ರಮದಿಂದ ಜನತೆ ಆಚರಿಸಿಕೊಂಡು ಬರುತ್ತಾರೆ. ಇದು ಭಾರತದ ಪುಣ್ಯದ ನೆಲದ ಸಂಸ್ಕೃತಿಯ ಪ್ರತೀಕ ಅದರಲ್ಲಿ ಹೋಳಿ ಹುಣ್ಣಿಮೆ ಆಚರಣೆ ಕೂಡಾ ಬಹು ವಿಶೇಷತೆಯಿಂದ ಕೂಡಿದೆ.

ಶಿವರಾತ್ರಿಯ ಆಚರಣೆ ಅಮಾವಾಸೆಯಂದು ನಡೆದರೆ ಹದಿನೈದು ದಿನ ಕಳೆದರೆ ಹುಣ್ಣಿಮೆ ಬರುತ್ತೆ .ಆ ಹುಣ್ಣಿಮೆಯ ಸಮಯಕ್ಕೆ ಏಳು ದಿನದ ಹೋಳಿ ಕುಣಿತ ಆಚರಣೆ ಮಾಡಲಾಗುತ್ತದೆ.

ಕೊಂಕಣ ಪ್ರಾಂತ್ಯದಿಂದ ವಲಸೆ ಬಂದ ಕೊಂಕಣಿ ಖಾರ್ವಿ ಸಮುದಾಯ ಬರುವಾಗಲೇ ಅನೇಕ ಆಚರಣೆ ಹಾಗೂ ಯುದ್ಧದ ಕಲೆಗಳನ್ನು ಹಿಂದಿನವರಿಂದ ಬಳುವಳಿಯಾಗಿ ಪಡೆದುಕೊಂಡು ಬಸ್ರೂರು ಹಾಗೂ ಗಂಗೊಳ್ಳಿ ಭಾಗಕ್ಕೆ ಬರುತ್ತಾರೆ. ಗಂಗೊಳ್ಳಿ ಹಾಗೂ ಬಸ್ರೂರು ಭಾಗದ ಖಾರ್ವಿ ಸಮುದಾಯದವರಿಗೆ ಬಹು ಮುಖ್ಯ ಹಬ್ಬವೆಂದರೆ ಹೋಳಿ ಹುಣ್ಣಿಮೆ ಯಾ ಹೋಳಿ ಹಬ್ಬ.

ಸಾಮರಸ್ಯದ ಹಬ್ಬ ಹೋಳಿ ಹಬ್ಬ: ಒಂದು ವಾರಗಳ ಕಾಲ ಹಬ್ಬದಲ್ಲಿ ಮೇಲು ಕೀಳೆಂಬ ಬೇಧವಿಲ್ಲದೇ ನಾವೇಲ್ಲಾ ಒಂದೇ ಎಂಬ ಭಾವನೆಯಿಂದ ಧಾರ್ಮಿಕ ನಂಬಿಕೆಗೆ ದಕ್ಕೆಯಾಗದಂತೆ ಆಚರಣೆಯನ್ನು ಇಂದಿಗೂ ನಡೆಸಿಕೊಂಡು ಬಂದಿರುತ್ತಾರೆ.

ಹೋಳಿ ಹಬ್ಬದಲ್ಲಿ ದಲ್ಲೋರಿ: ಹೋಳಿ ಹಬ್ಬದಲ್ಲಿ ಒಂದು ವಾರಗಳ ಕಾಲ ನಡೆಯುತ್ತದೆ. ಮಹಿಳೆಯರಲ್ಲಿ ದಲ್ಲೋರಿ ಎಂಬ ವಿಶೇಷ ಎರಡು ತಂಡಗಳ ವಿಚಾರ ಹಂಚಿಕೊಳ್ಳುವುದು ಅವರ ಆಚರಣೆಯಲ್ಲಿ ಕಂಡುಕೊಳ್ಳಬಹುದಾಗಿದೆ.

ಮರುಳಿ: ಹೋಳಿಯ ಆಚರಣೆಯಲ್ಲಿ ಕೆಲವೊಂದು ಬಾರಿ ಮೈ ದರ್ಶನ ಕೂಡಾ ಕಂಡು ಬರುತ್ತದೆ.

ಕುಣಿತ ಕೋಲಾಟ: ಬರೆ ಬಣ್ಣಗಳನ್ನು ಹಚ್ಚುವುದು ಮಾತ್ರ ವಲ್ಲಾ ನಾವೆಲ್ಲಾ ಒಂದೇ ಎಂಬಂತೆ ಹಿರಿಯರು ಕಿರಿಯರು ಕುಣಿತ ಕೋಲಾಟದಲ್ಲಿ ತಲ್ಲೀನರಾಗಿ ಕುಣಿದು ಸಂಭ್ರಮಿಸುವುದು ಅಲ್ಲಿ ಯ ವಿಶೇಷ

ಕಾಮ ದಹನ: ರಾಕ್ಷಸ ತಾರಕಾಸುರ ದೇವತೆಗಳಿಗೆ ವಿಪರೀತ ಉಪಟಳಗಳನ್ನು ಕೊಟ್ಟಾಗ ತಾಳಲಾರದೆ ದೇವತೆಗಳು ಪರಶಿವನಲ್ಲಿ ಭಕ್ತಿಯಿಂದ ಬೇಡಿದಾಗ ಶಿವನ ಮೂರನೇ ಕಣ್ಣಿನಿಂದ ಕಾಮದಹನವಾಗುತ್ತದೆ. ಹೋಳಿ ಹಬ್ಬದ ಕೊನೆಯ ದಿನದ ರಾತ್ರಿಯಂದು ಕಾಮದಹನ ಮಾಡಲಾಗುತ್ತದೆ.

ಹಿಂದೂ ಸಂಪ್ರದಾಯದಂತೆ ಒಂದೊಂದು ಆಚರಣೆಗೂ ಒಂದೊಂದು ಕಾರಣಗಳಿವೆ ಶಿವರಾತ್ರಿಯ ಕಳೆದ ಹದಿನೈದು ದಿನದ ನಂತರ ಹೋಳಿ ಹುಣ್ಣಿಮೆ ,ಹೋಳಿ ಹುಣ್ಣಿಮೆಯ ಕಾಮದಹನ ಆದ ನಂತರವೇ ಪ್ರಭು ಶ್ರೀರಾಮನ ಜನನ. ಶ್ರೀರಾಮನ ದರುಷನ ದ ನಂತರವೇ ಪ್ರಭು ಶ್ರೀರಾಮನ ಬಂಟ ಹನುಮನ ಜನನ.

ಬಣ್ಣ ಹಚ್ಚುವುದು: ರಾತ್ರಿಯ ಸಮಯದಲ್ಲಿ ಸಭಾ ಕಾರ್ಯಕ್ರಮ, ಕಾಮದಹನ ಮರುದಿನ ಸಂಭ್ರಮದಲ್ಲಿ ಮಧ್ಯಾಹ್ನ ಮನೆಯಲ್ಲಿ ಸಹಭೋಜನದೊಂದಿಗೆ ಹಾಗೂ ಸಂಜೆ ಎಲ್ಲರೂ ಹೋಳಿ ಹಬ್ಬ ಅಂದರೆ ಬಣ್ಣಗಳ ಆಚರಣೆ ಮಾಡಲಾಗುತ್ತದೆ.

ಸಾಂಪ್ರಾದಾಯಿಕ ಆಚರಣೆ ಪರಿಚಯಿಸಲು ಪುರಾತನ ಮನೆಗಳಿಗೆ ಹಾಗೂ ಜನಾಂಗದ ಮನೆಗಳಿಗೆ ಭೇಟಿ ಹಾಗೂ ಕುಣಿತ ನೀಡುತ್ತಾ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ.

ಮೇಲು ಕೀಳೆಂಬ ಬೇಧವಿಲ್ಲ, ಬಡವ ಶ್ರೀಮಂತನೆಂಬ ಚಿಂತನೆಗಳಿಲ್ಲಾ ನಾವೆಲ್ಲಾ ಒಂದೇ ಎಂದು ಹೋಳಿ ಆಚರಣೆಯನ್ನು ಕುಂದಾಪುರ ತಾಲೂಕು ಭಾಗದಲ್ಲಿ ಕೊಂಕಣಿ ಖಾರ್ವಿ, ಕುಡುಬಿ ಜನಾಂಗ, ಮರಾಠಿ ನಾಯ್ಕ ಸಮೂದಾಯ ಮತ್ತು ಕೆಲವೊಂದು ಸಮೂದಾಯದವರು ಮಾತ್ರಾ ಆಚರಣೆ ಮಾಡುತ್ತಿರುವುದು ಆದರೆ ಹೋಳಿ ಹಬ್ಬ ಎಲ್ಲಾ ಸಮುದಾಯದವರು ಆಚರಿಸುವಂತಹ ಆಚರಣೆಯಾಗಿದೆ. ಪ್ರಸ್ತುತ ದಿನ ಸಾರ್ವಜನಿಕರು ಎಲ್ಲರೂ ಸೇರಿ ಹೋಳಿ ಆಚರಣೆ ಮಾಡುತ್ತಿರುವುದು ಹಾಗೂ ವಿದೇಶಿಗರು ಕೂಡಾ ಮಾರು ಹೋಗುತ್ತಿರುವುದು ಭವ್ಯ ಭಾರತದ ಆಚರಣೆಗಳ ವೈಭವಕ್ಕೆ ಸಾಕ್ಷಿಯಾಗಿದೆ.

ಲೇಖನ-ಪ್ರದೀಪ ಕುಮಾರ್ ಬಸ್ರೂರು
(ಸಹಕಾರ: ಗುರುರಾಜ್ ಖಾರ್ವಿ ವಿಲಾಸಕೇರಿ, ರಾಜೇಂದ್ರ ಖಾರ್ವಿ ಮಂಡಿಕೇರಿ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!