spot_img
Tuesday, June 16, 2026
spot_img

ಜೂ.17ರಂದು ಬಾರಕೂರು ಮಹಾತೋಭಾರ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರಿಂದ ಮುಷ್ಠಿಕಾಣಿಕೆ ಸಮರ್ಪಣೆ

ಬಾರಕೂರು: ಬಾರಕೂರು ಮಹಾತೋಭಾರ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಪ್ರಶ್ನಾಚಿಂತನೆಯಲ್ಲಿ ಕಂಡುಬಂದ ದೋಷ ಪ್ರಾಯಶ್ಚಿತ್ತಗಳನ್ನು ಮುಗಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ಜೀರ್ಣೋದ್ಧಾರಕ್ಕೆ ಅನುಮತಿ ಪಡೆದು ಜೀರ್ಣೋದ್ಧಾರದ ಮೊದಲಹಂತದ ಆರಂಭವಾಗಿ ಜೂನ್ ೧೭ ಬುಧವಾರ ಬೆಳಿಗ್ಗೆ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕರಿಂದ ಮುಷ್ಠಿಕಾಣಿಕೆ ಸಮರ್ಪಣೆ ಹಾಗೂ ಮನವಿಪತ್ರ ಬಿಡುಗಡೆ ಕಾರ್ಯಕ್ರಮ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಸೋಮವಾರ ದೇವಸ್ಥಾನದ ಕಛೇರಿಯಲ್ಲಿ ಜರುಗಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಸಹಸ್ರಾರು ವರ್ಷ ಪ್ರಾಚೀನವಾದ ದೇವಸ್ಥಾನವನ್ನು ದೇಶವನ್ನು ಅತೀ ಸುದೀರ್ಘವಾಗಿ ಒಂದುಸಾವಿರ ವರ್ಷ ಆಳ್ವಿಕೆ ಮಾಡಿದ ಅಳುಪ ಅರಸರ ಪಟ್ಟದ ದೇವರು ಎಂದು ಖ್ಯಾತಿಹೊಂದಿ ತುಳುನಾಡ ಸೀಮೆಯ ಅಧಿದೇವರು ಎನಿಸಿಕೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತೀರಾ ಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ಈಗಾಗಲೆ ರಾಜ್ಯದ ಮುಜರಾಯಿ ಸಚಿವರು, ಪ್ರವಾಸೋದ್ಯಮ ಸಚಿವರು ನಾನಾ ದಾನಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದರು.

ಪ್ರಾಚೀನ ಶಿಲ್ಪ ಪರಂಪರೆಯನ್ನು ಯಥಾವತ್ತಾಗಿ ಉಳಿಸಿಕೊಂಡು ಸಂಪೂರ್ಣ ಶಿಲಾಮಯವನ್ನಾಗಿಸಿ ದೇವಸ್ಥಾನ ಮತ್ತು ಪರಿವಾರ ದೇವರುಗಳ ಗುಡಿಯ ನಿರ್ಮಾಣ ಸರೋವರ ಮತ್ತು ಬಾರಕೂರಿನ ಸಮಗ್ರ ಅಭಿವೃದ್ಧಿಯ ಯೋಜನೆ ಕೂಡಾ ಇದೆ ಎಂದರು.

ಧಾರ್ಮಿಕ ಚಿಂತಕ ದಾಮೋದರ ಶರ್ಮ ಮಾತನಾಡಿ ಎಲ್ಲ ಸಮುದಾಯಗಳ ಮೂಲ ದೇವಸ್ಥಾನ ಪಂಚಲಿಂಗೇಶ್ವರ ದೇವಸ್ಥಾನವಾಗಿದ್ದು ಪ್ರಾಛೀನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಪ್ರತೀ ವ್ಯಕ್ತಿ ತನ್ನದೇ ಕೈ ಮುಷ್ಠಿಯಿಂದ ಕಾಣಿಕೆಯನ್ನು ದೇವರೀಗೆ ಸಮರ್ಪಿಸಿದರೆ ಸಕಲ ಪಾಪ ಕಳೆದು ಅನಂತಪುಣ್ಯ ಫಲ ದೊರೆಯುತ್ತದೆ ಎಂದರು.

ದೇವಸ್ಥಾನದ ಆಡಳಿತ ಮೋಕ್ತೇಸರ ಮಂಜುನಾಥ ರಾವ್, ಅಳುಪ ರಾಜವಂಶದ ಡಾ, ಆಕಾಶ್ ರಾಜ್ ಜೈನ್, ಸಮಿತಿಯ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀನಿವಾಸ ಶೆಟ್ಟಿ, ರಾಮಚಂದ್ರ ಕಾಮತ್, ಚಂದ್ರಶೇಖರ ಶೆಟ್ಟಿ ನಡುಮನೆ, ಜನಾರ್ದನ ದೇವಾಡಿಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಡಿಯೋ ವೀಕ್ಷಿಸಿ: https://www.facebook.com/share/v/18f7peiaSi/

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!