spot_img
Monday, March 16, 2026
spot_img

ಯೋಗದಲ್ಲಿ ಧನರಾಜ್ ಎಸ್ ಶೆಟ್ಟಿ ಗಿನ್ನಿಸ್ ದಾಖಲೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಕುಂದಾಪುರ ತಾಲೂಕು ಕೆರಾಡಿ ಮೂಡ್ಗಲ್ಲು ನಿವಾಸಿ, ಪ್ರಕೃತಿ ಚಿಕಿತ್ಸೆ ವಿದ್ಯಾರ್ಥಿ ಧನರಾಜ್ ಎಸ್ ಶೆಟ್ಟಿ ಅವರು ಯೋಗದಲ್ಲಿ ಕುಕುಟಾಸನ (ರೂಸ್ಟರ್ ಭಂಗಿ)ದಲ್ಲಿ 13 ನಿಮಿಷ 41 ಸೆಕೆಂಡ್ ಕಾಲ ಮಾಡುವ ಮೂಲಕ ಈ ಹಿಂದೆ ಇದ್ದ 5 ನಿಮಿಷದ ದಾಖಲೆಯನ್ನು ಅಳಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

2024 ಜೂನ್ 15ರಂದು ಅವರು ಈ ಸಾಧನೆ ಮಾಡಿದ್ದು ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.

ಇವರು ಕೆರಾಡಿ ಗ್ರಾಮದ ಮೂಡಗಲ್ಲು ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಸಂತೋಷ್ ಶೆಟ್ಟಿ ಮತ್ತು ಅನಿತಾ ಶೆಟ್ಟಿ ದಂಪತಿಗಳ ಪುತ್ರರಾಗಿ 2002 ಜುಲೈ13ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಇಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. 9ಮತ್ತು 10ನೇ ತರಗತಿ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ನೆಂಪುವಿನಲ್ಲಿ ಮಾಡಿದರು. ಪದವಿ ಪೂರ್ವ ಶಿಕ್ಷಣವನ್ನು ಆರ್.ಎನ್ ಶೆಟ್ಟಿ ಪಿಯು ಕಾಲೇಜು ಕುಂದಾಪುರದಲ್ಲಿ ಮುಗಿಸಿದರು. ಪ್ರಸ್ತುತ ಬಿ‌ಎನ್ ವೈ ಎಸ್ ಶಿಕ್ಷಣವನ್ನು ಮೈಸೂರಿನ ಸರಕಾರಿ ನೇಚರ್ ಕೇರ್ ಮತ್ತು ಯೋಗ ಮೆಡಿಕಲ್ ಕಾಲೇಜಿನಲ್ಲಿ ಮಾಡುತ್ತಿದ್ದಾರೆ.

ಯೋಗದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಹಲವಾರು ಸಾಧನೆಗಳನ್ನು ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!