spot_img
Wednesday, April 1, 2026
spot_img

ವಿದ್ವಾನ್ ಶರತ್ ನಾಡಾ ಇವರಿಗೆ ಅಭಿನಂದನಾ ಕಾರ್ಯಕ್ರಮ

ಕುಂದಾಪುರ: ಸಂಗೀತ ಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ. ಅವಳು ಒಲಿದು ಬಂದಾಗ ವಿದ್ಯಾಭ್ಯಾಸ ನಿಷ್ಠೆಯಿಂದ ಮಾಡಿದರೆ ಸಾಧಕರಾಗುತ್ತಾರೆ ಎನ್ನುವುದಕ್ಕೆ ಶರತ್ ಅವರು ಒಳ್ಳೆಯ ಉದಾಹರಣೆಯಾಗುತ್ತಾರೆ. ಶರತ್ ರವರ ಸಾಧನೆ ತುಂಬಾ ದೊಡ್ಡ ಸಾಧನೆ. ವಿದ್ಯಾರ್ಥಿಗಳು ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿದ್ವಾನ್ ಶರತ್ ನಾಡಾ ಇವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರಾದ ಎಸ್ ಜನಾರ್ದನ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.

ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆ, ಮಸ್ಕಿ, ನಾವುಂದ ಇದರ ಸಂಗೀತ ಗುರುಗಳಾದ ವಿದ್ವಾನ್ ಶರತ್ ನಾಡಾ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಡಾ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ನಡೆಸಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ವಿದ್ವತ್ ಪರೀಕ್ಷೆಯಲ್ಲಿ ಶೇ ೯೩ ಅಂಕ ಗಳಿಸಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಇವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸನ್ನಿಧಿ ಈವೆಂಟ್ಸ್ ಇದರ ಅಧ್ಯಕ್ಷರಾದ ಮಂಜುನಾಥ ಸಾಲ್ಯಾನ್,ಎಲ್ ಐ ಸಿ ಅಧಿಕಾರಿಗಳಾದ ಸತೀಶ್ ಮಂಗಳೂರು, ಸಾಧನಾ ಅಧ್ಯಕ್ಷರಾದ ಪುಟ್ಟಯ್ಯ ಎಮ್ ಬಿಲ್ಲವ, ಆರೋಗ್ಯ ನಿರೀಕ್ಷಿಣಾಧಿಕಾರಿ ಹರೀಶ ಗೌಡ, ಸದಾನಂದ ಪೂಜಾರಿ ಮತ್ತು ಶಂಬು ಗುಡ್ಡಾಮ್ಮಡಿ ಉಪಸ್ಥಿತರಿದ್ದು ಮಾತನಾಡಿದರು.

ಖಂಬದಕೋಣೆ ಶಾಲೆಯ ಮುಖ್ಯ ಶಿಕ್ಷಕರಾದ ಮಹಾಬಲ ಕೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಳಾದ ನಾಗೇಂದ್ರ ಸ್ವಾಗತಿಸಿ, ಗಣಪು ನಾಯಕವಾಡಿ ಸನ್ಮಾನ ಪತ್ರ ವಾಚಿಸಿದರು, ನಾಗರಾಜ ದೇವಳಿ ನಿರೂಪಿ, ಶ್ರೀವರ್ಷಾ ವಂದಿಸಿದರು. ಸಂಗೀತ ಶಾಲೆಯ ವಿದ್ಯಾರ್ಥಿಗಳು ಮತ್ತು ಗುರುಗಳಿಂದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!