spot_img
Thursday, April 2, 2026
spot_img

ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ನಿಧನ

ಕುಂದಾಪುರ: ಕುಂದಾಪುರದ ವಿಜಯಲಕ್ಷ್ಮೀ ಟ್ರೇಡರ್‍ಸ್ ಮಾಲಕಿ, ಗುರುಪ್ರಸಾದ ಮಹಿಳಾ ಮಂಡಳಿ ಅಧ್ಯಕ್ಷೆ, ಹಿರಿಯ ಕಲಾವಿದೆ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಆದಿತ್ಯವಾರ ಮಾರ್ಚ್ 2 ರಂದು ನಿಧನರಾದರು.

ತಮ್ಮ ವ್ಯವಹಾರ ಜ್ಞಾನ, ಕ್ರಿಯಾಶೀಲತೆ, ಸಂಘಟನಾ ಶಕ್ತಿ, ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕೃತಿ ಬಗ್ಗೆ ಆಸಕ್ತಿಯಿಂದ ಸದಾ ಕ್ರಿಯಾಶೀಲರಾಗಿರುತ್ತಿದ್ದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ತಮ್ಮ ಕೃತಿಗಳಾದ ಜೀವನ ಚಕ್ರ, ವೇದ ಸಾರ, ಜೋ… ಜೋ…., ಜಾನಪದ ಜೋಗುಳ ಗೀತೆ, ಕೃತಿಗಳಿಂದಲೂ ಜನಪ್ರಿಯರಾದವರು. ಕೊಂಕಣಿ, ಶಿಶುಗೀತೆಗಳ ಧ್ವನಿ ಪೆಟ್ಟಿಗೆ ಪ್ರಣಾಳಿಕೆ ತಂದವರು. ತಾಲೂಕಿನ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆಯೂ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು.

ಕೊಂಕಣಿ ಕಲಾ ಸಮಾಜದದ ಅಧ್ಯಕ್ಷರಾಗಿ ಹಲವು ಸಮ್ಮೇಳನ ನಡೆಸಿದವರು. ಕೊಂಕಣಿ ಮಕ್ಕಳ ಸಂಘದ ಮೂಲಕ ಮಕ್ಕಳಿಗೆ ರಂಗ ಕಲೆ, ಯಕ್ಷಗಾನ, ಸಂಗೀತ ತರಬೇತಿ ವ್ಯವಸ್ಥೆ ಮಾಡುತ್ತಿದ್ದರು.

ಮಂಗಳೂರಿನ ಚೆಂಬರ್ ಆಫ್ ಕಾಮರ್ಸ್, ಕೆ. ಎಸ್. ಎಸ್. ಐ. ಸಿ. ಸದಸ್ಯರಾಗಿದ್ದ ಇವರು ಜಿಂಗಲ್ ಬೆಲ್ಸ್, ನರ್ಸರಿ ಶಾಲೆಯನ್ನು ಮಂಗಳೂರಿನ ಬಿಜೈಯಲ್ಲಿ ಸಂಚಾಲಕಿಯಾಗಿ ನಡೆಸಿದವರು. ಸ್ವತ: ಹಾಡುಗಾರರಾಗಿ ಆಕಾಶವಾಣಿ, ದೂರದರ್ಶನಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿದವರು.

ಇವರು ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!