spot_img
Tuesday, March 17, 2026
spot_img

ಜಾನಪದ ಗಾಯಕ ಗಣೇಶ್ ಗಂಗೊಳ್ಳಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

ಜನಪ್ರತಿನಿಧಿ (ಕುಂದಾಪುರ) : ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಪ್ರಶಸ್ತಿಗೆ ಗಾಯಕ, ಜಾನಪದ ಕಲಾವಿದ ಗಣೇಶ್ ಗಂಗೊಳ್ಳಿ ಹಾಗೂ ಪಾಡ್ಡನ ಕಲಾವಿದೆ ಜಯಂತಿ ಪೆರ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಆಕಾಶವಾಣಿ, ದೂರದರ್ಶನ ಕಲಾವಿದರಾಗಿ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಗಾಯಕರಾಗಿ ವಿವಿಧೆಡೆ ಸಂಗೀತ ಕಾರ್ಯಕ್ರಮ ನೀಡಿರುತ್ತಾರೆ.

ಡಿ. ನಾರಾಯಣ ಹಾಗೂ ಚಂದು ದಂಪತಿಯ ಪುತ್ರರಾಗಿರುವ ಇವರು, ಮಹಾಬಲೇಶ್ವರ್ ಹೊನ್ನಾವರ ಮಧೂರು ಬಾಲಸುಬ್ರಹ್ಮಣ್ಯಂ ಉಡುಪಿ, ವಾಸುದೇವ ಭಟ್ ಉಡುಪಿ ಅವರ ಶಿಷ್ಯರಾಗಿ ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಅಭ್ಯಸಿಸಿದ್ದು, ಇದಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಜಾನಪದ ಸಂಗೀತ ತರಬೇತಿಯನ್ನೂ ನೀಡಿರುತ್ತಾರೆ.

ಇವರಿಗೆ ಡಾ| ಬಿ.ಆರ್ ಅಂಬೇಡ್ಕರ್‌ರಾಜ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕಾರ ಭಾರತಿ ರಾಜ್ಯ ಪ್ರಶಸ್ತಿ ಸಹಿತ ಹಲವಾರು ಜಿಲ್ಲಾ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

32 ವರ್ಷದಿಂದ ಕಲಾಸೇವೆಯಲ್ಲಿ ತೊಡಗಿದ್ದು,1996ರಿಂದ ಮಂಗಳೂರು ಆಕಾಶವಾಣಿಯ ಜನಪದ ಗಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಕಲಾಸೇವೆಗೆ ತಾವು ಹಲವಾರು ಜಿಲ್ಲಾ, ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2000-ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಪ್ರಶಸ್ತಿ, 2006-ಉಡುಪಿ ಜಿಲ್ಲಾ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2020-ಕರುನಾಡ ರತ್ನ ಮಂಡ್ಯ ಜಿಲ್ಲೆ ಇಲ್ಲಿಯ ರಾಜ್ಯ ಪ್ರಶಸ್ತಿ, 2021-ಕರ್ನಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ ಬೀದರ್ ಜಿಲ್ಲೆ ಮಂದಾರ ಕಲಾವಿದರ ವೇದಿಕೆಯಿಂದ, 2021-ತಮಿಳುನಾಡು ಹೊಸೂರಿನ ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯದಿಂದ ಗೌರವ ಡಾ. ಪದವಿ, 2022-ಗದಗ ಜಿಲ್ಲೆಯ ಪಂಡಿತ್ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ, 2022-ಸಂಸ್ಕಾರ ಭಾರತಿ ರಾಜ್ಯ ಪ್ರಶಸ್ತಿ, ಸಂಸ್ಕಾರ ಭಾರತಿ ಸಂಸ್ಥೆಯಿಂದ, 2022-ಗೋವಾ ರಾಜ್ಯದ ಕನ್ನಡ ಸಂಘದವರಿಂದ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಜ್ಯಾದ್ಯಂತ ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳು ಅವರಿಗೆ ಲಭಿಸಿವೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!